ನವದೆಹಲಿ: Sputnik V Price In India - ಭಾರತದಲ್ಲಿ ಕೊರೊನಾ ವೈರಸ್ (Coronavirus) ಪ್ರಕೋಪ ಹೆಚ್ಚಾಗುತ್ತಿರುವುದರ ನಡುವೆಯೇ ಕೋವಿಶೀಲ್ಡ್ (Covishield) ಹಾಗೂ ಕೊವ್ಯಾಕ್ಸಿನ್ (Covaxin) ಬಳಿಕ ಇದೀಗ ರಷ್ಯಾ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕಿನ್ (Corona Vaccine), ಸ್ಪುಟ್ನಿಕ್ -V (Sputnik-V) ಮುಂದಿನ ವಾರ ಭಾರತೀಯ ಮಾರುಗಟ್ಟೆಗೆ ಬರಲಿದೆ. ಹೈದ್ರಾಬಾದ್ ಮೂಲದ ಡಾ. ರೆಡ್ಡಿಸ್ ಲ್ಯಾಬೋರೆಟರೀಸ್ (Dr.Reddy's Lab) ಭಾರತೀಯ ಮಾರುಕಟ್ಟೆಗೆ ಈ ಲಸಿಕೆ ಬಿಡುಗಡೆ ಮಾಡಲಿದ್ದು, ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಎಷ್ಟು ಎಂದು ಘೋಸಿಸಿದೆ.
ಸ್ಪುಟ್ನಿಕ್ ಲಸಿಕೆಯ ಒಂದು ಡೋಸ್ ಬೆಲೆ ರೂ.995.40 ಇರಲಿದೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಡಾ. ರೆಡ್ಡಿಸ್ ಲ್ಯಾಬೋರೇಟರಿಸ್, ಭಾರತೀಯ ಮಾರುಕಟ್ಟೆಯಲ್ಲಿ ಈ ಲಸಿಕೆಯ (Covid-19 Vaccination) ಒಂದು ಡೋಸ್ ಬೆಲೆ ರೂ.940 (Sputini V Price In India) ಇರಲಿದ್ದು, ಇದರ ಮೇಲೆ ಶೇ.5ರಷ್ಟು GST ಅನ್ವಯವಾಗಲಿದೆ. ಹೀಗಾಗಿ ವ್ಯಾಕಿನ ಒಟ್ಟು ಬೆಲೆ ರೂ.995.40 ಎಂದು ಡಾ.ರೆಡ್ಡಿಸ್ ಲ್ಯಾಬ್ ಘೋಷಿಸಿದೆ. ಆದರೆ, ಇದೇ ವೇಳೆ ಭಾರತೀಯ ಮಾರುಕಟ್ಟೆಯಲ್ಲಿ ಒಂದೊಮ್ಮೆ ಈ ಲಸಿಕೆಯ ಉತ್ಪಾದನೆ ಆರಂಭಗೊಂಡ ಬಳಿಕ ಇದರ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದೂ ಕೂಡ ಅದು ಹೇಳಿದೆ.
ಇದನ್ನೂ ಓದಿ- Mask: ಅಮೇರಿಕನ್ನರಿಗೆ ಬಿಗ್ ರಿಲೀಫ್, Corona vaccine ಪಡೆದವರು ಈ ನಿಯಮ ಪಾಲಿಸುವ ಅಗತ್ಯವಿಲ್ಲ
Imported doses of Sputnik V #COVID19 vaccine are presently priced at Rs 948 + 5% GST per dose, with the possibility of a lower price point when local supply begins: Dr. Reddy’s Laboratories pic.twitter.com/bEowM6ZhZY
— ANI (@ANI) May 14, 2021
ಮೇ 1 ರಂದು ಭಾರತ ತಲುಪಿತ್ತು ಸ್ಪುಟ್ನಿಕ್ V ಮೊದಲ Consignment
ರಷ್ಯಾದಲ್ಲಿ ತಯಾರಿಸಿದ ಸ್ಪುಟ್ನಿಕ್-ವಿ ಯ ಮೊದಲ ಸರಕು (ಸುಮಾರು ಒಂದೂವರೆ ಲಕ್ಷ ಡೋಸ್ ಗಳು) ಮೇ 1 ರಂದು ಭಾರತವನ್ನು ತಲುಪಿತ್ತು ಮತ್ತು ಎರಡನೇ ರವಾನೆಯೂ ಒಂದು ಅಥವಾ ಎರಡು ದಿನಗಳಲ್ಲಿ ಬರಲಿದೆ ಎನ್ನಲಾಗಿದೆ. ಈ ಲಸಿಕೆಯನ್ನು ಮೇ 13 ರಂದು ಕಸೌಲಿಯ ಸೆಂಟ್ರಲ್ ಡ್ರಗ್ಸ್ ರೆಗ್ಯುಲೇಟರಿ ಅನುಮೋದಿಸಿದೆ ಮತ್ತು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಡಾ. ರೆಡ್ಡಿಸ್ ಲ್ಯಾಬ್ ತಿಳಿಸಿದೆ. ಶುಕ್ರವಾರ ಲಸಿಕೆಯ ಸಾಫ್ಟ್ ಲಾಂಚ್ ಮಾಡಿರುವ , ಡಾ. ರೆಡ್ಡಿಸ್ ಲ್ಯಾಬ್ ಹೈದರಾಬಾದ್ನಲ್ಲಿರುವ ಓರ್ವ ವ್ಯಕ್ತಿಗೆ ಮೊದಲ ಲಸಿಕೆ ಪ್ರಮಾಣವನ್ನು ನೀಡಿದೆ.
ಇದನ್ನೂ ಓದಿ-Black Fungus: ಈ 10 ರಾಜ್ಯಗಳಲ್ಲಿ ಬ್ಲಾಕ್ ಫಂಗಸ್ ಹಾವಳಿ, ಅದರ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 343144 ಹೊಸ ಪ್ರಕರಣಗಳು
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3 ಲಕ್ಷ 43 ಸಾವಿರ 144 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ, ಈ ಅವಧಿಯಲ್ಲಿ 4000 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ ಭಾರತದಲ್ಲಿ ಸೋಂಕಿಗೆ ಒಳಗಾದ ಒಟ್ಟು ಜನರ ಸಂಖ್ಯೆ 2 ಕೋಟಿ 40 ಲಕ್ಷ 46 ಸಾವಿರ 809 ಕ್ಕೆ ಏರಿದ್ದರೆ, 2 ಲಕ್ಷ 62 ಸಾವಿರ 317 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 3 ಲಕ್ಷ 44 ಸಾವಿರ 776 ಜನರನ್ನು ಗುಣಪಡಿಸಲಾಗಿದ್ದು, ಕೋವಿಡ್ -19 (Covid-19) ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 2 ಕೋಟಿ 79 ಸಾವಿರ 599 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಸಕ್ರಿಯ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ (Coronavirus Active Cases in India) ಮತ್ತು ದೇಶಾದ್ಯಂತ 37 ಲಕ್ಷ 04 ಸಾವಿರ 829 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ- ಕರೋನಾ ಒಂದು ಪ್ರಾಣಿ.! ಅದಕ್ಕೂ ಜೀವಿಸುವ ಅಧಿಕಾರ ಇದೆ.! ಹೀಗೆಂದ ಮಹಾಶಯ ಯಾರು ಗೊತ್ತಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.