24x7 Covid-19 Vaccination:ಇನ್ಮುಂದೆ ಹಗಲು-ರಾತ್ರಿ ಯಾವಾಗ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು
24x7 Covid-19 Vaccination: ಕೊವಿಡ್ - 19 ಲಸಿಕಾಕರಣ ಮಹಾಅಭಿಯಾನದ ವೇಗವನ್ನು ಹೆಚ್ಚಿಸಲು ಸರ್ಕಾರ ಈ ಹೆಜ್ಜೆಯನ್ನಿಟ್ಟಿದೆ.
ನವದೆಹಲಿ: 24x7 Covid-19 Vaccination - ಕೋವಿಡ್ -19 ಲಸಿಕೆ ಡೋಸ್ ತೆಗೆದುಕೊಳ್ಳುವ ಸಮಯದ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ (Modi Government) ತೆಗೆದುಹಾಕಿದೆ. ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಈ ಹೆಜ್ಜೆಯನ್ನು ಇಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ (Dr. Harsh Vardhan) ಹೇಳಿದ್ದಾರೆ. ಇದೀಗ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ 24 ಗಂಟೆಗಳ ಕಾಲ (24x7 Covid-19 Vaccination) ಲಸಿಕೆ ಪಡೆಯಬಹುದು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ನಾಗರಿಕರ ಆರೋಗ್ಯ ಮತ್ತು ಸಮಯದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
Corona Vaccine) ಅಭಿಯಾನವನ್ನು ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆಸ್ಪತ್ರೆಗಳು ನಿರ್ಧರಿಸಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್
Co-WIN 2.0 ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲು ಮಾತ್ರ ಸೀಮಿತವಾಗಿಲ್ಲ. ಅದರ ಮೇಲಿನ ನಿರ್ಬಂಧವನ್ನು ಕೂಡ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಸಂಜೆ ಐದರ ಬಳಿಕವೂ ಕೂಡ ಲಸಿಕೆಯ ಅಭಿಯಾನ ಮುಂದುವರೆಸುವ ಕ್ಷಮತೆ ಮತ್ತು ವ್ಯವಸ್ಥೆ ಆಸ್ಪತ್ರೆಯ ಬಳಿ ಇದ್ದರೆ , ಸಂಬಂಧಿತ ರಾಜ್ಯ ಸರ್ಕಾರದೊಂದಿಗೆ ಪರಾಮರ್ಶೆ ನಡೆಸಿ ಸಂಜೆ 5 ಗಂಟೆಯ ನಂತರವೂ ಕೂಡ ಲಸಿಕೆ ಅಭಿಯಾನ ಮುಂದುವರೆಸಬಹುದು ಮತ್ತು ಈ ಕುರಿತು ಎಲ್ಲ ರಾಜ್ಯ ಸರ್ಕಾರಗಳ ಜೊತೆಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ- SII ಹಾಗೂ Bharat Biotech ಕಂಪನಿಗಳನ್ನು ಗುರಿಯಾಗಿಸಿದ China Hackers, ಕಾರಣ ಇಲ್ಲಿದೆ
ಲಸಿಕಾಕರಣದ ಎರಡನೇ ಹಂತ ಮಾ.1 ರಿಂದ ಜಾರಿಯಲ್ಲಿದೆ
ಕೊವಿಡ್-19 ಲಸಿಕೆಯ ಎರಡನೇ ಡೋಸ್ ನೀಡುವಿಕೆಯನ್ನು ಫೆ.13 ರಿಂದ ಆರಂಭಿಸಲಾಗಿದೆ. ಮೊದಲ ಡೋಸ್ ನೀಡಿದವರಿಗೆ 28 ದಿನಗಳ ಬಳಿಕ ಎರಡನೇ ಡೋಸ್ ನೀಡಲಾಗುತ್ತಿದೆ. ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಎರಡನೇ ಡೋಸ್ ನೀಡುವ ಕಾರ್ಯ ಮಾ.2 ರಿಂದ ಆರಂಭಗೊಂಡಿದೆ. ಇನ್ನೊಂದೆಡೆ ಕೊವಿಡ್ -19 ಲಸಿಕೆಯ ಹಂತದ ಅಭಿಯಾನ ಅಂದರೆ 60 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಈ ಮೊದಲೇ ಯಾವುದಾದರೊಂದು ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಅಭಿಯಾನ ಮಾ.1 ರಿಂದ ಆರಂಭಗೊಂಡಿದೆ.
ಇದನ್ನೂ ಓದಿ- Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.