Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ

100%  Discount On Health Insurance Policy Renewal - ಖಾಸಗಿ ವಲಯದ ಆರೋಗ್ಯ ವಿಮಾ ಕಂಪನಿಗಳು (Private Health Insurance Companies)ತಮ್ಮ ಗ್ರಾಹಕರಿಗೆ ಪಾಲಸಿ ನವೀಕರಣದ ಪ್ರೀಮಿಯಂ ಮೇಲೆ  ಶೇ.80 ರಿಂದ ಶೇ.100 ರಷ್ಟು ರಿಯಾಯಿತಿ ನೀಡುತ್ತಿವೆ. ಇದಲ್ಲದೆ, ಇನ್ನೂ ಅನೇಕ ಪ್ರಯೋಜನಗಳನ್ನುಕಂಪನಿಗಳು ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ ಒದಗಿಸಲು ಮುಂದಾಗಿವೆ.

Written by - Nitin Tabib | Last Updated : Feb 28, 2021, 05:46 PM IST
  • ಆರೋಗ್ಯ ವಿಮೆಯ ಮೇಲೆ ಖಾಸಗಿ ವಿಮಾ ಕಂಪನಿಗಳ ಕೊಡುಗೆ.
  • ಪ್ರೀಮಿಯಂ ಪಾವತಿಯ ಮೇಲೆ ಶೇ.100 ರಷ್ಟು ರಿಯಾಯಿತಿ ನೀಡುತ್ತಿರುವ ಕಂಪನಿಗಳು.
  • ಯಾವ ಕಂಪನಿಗಳು ಎಷ್ಟು ರಿಯಾಯಿತಿ ನೀಡುತ್ತಿವೆ ನೋಡೋಣ ಬನ್ನಿ.
Health Insurance Policy ನವೀಕರಿಸಿದರೆ ಶೇ.100 ರಷ್ಟು ರಿಯಾಯಿತಿ title=
100% Discount On Health Insurance Policy (File Photo)

ನವದೆಹಲಿ:  100%  Discount On Health Insurance Policy Renewal - ಖಾಸಗಿ ವಲಯದ ಆರೋಗ್ಯ ವಿಮಾ ಕಂಪನಿಗಳು (Private health)ತಮ್ಮ ಗ್ರಾಹಕರಿಗೆ ಪಾಲಸಿ ನವೀಕರಣದ ಪ್ರೀಮಿಯಂ ಮೇಲೆ  ಶೇ.80 ರಿಂದ ಶೇ.100 ರಷ್ಟು ರಿಯಾಯಿತಿ ನೀಡುತ್ತಿವೆ. ಇದಲ್ಲದೆ, ಇನ್ನೂ ಅನೇಕ ಪ್ರಯೋಜನಗಳನ್ನುಕಂಪನಿಗಳು ತಮ್ಮ ಗ್ರಾಹಕರಿಗೆ ಗ್ರಾಹಕರಿಗೆ ಒದಗಿಸಲು ಮುಂದಾಗಿವೆ.ಹೆಚ್ಚಿನ ಆರೋಗ್ಯ ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಕ್ಲೈಮ್ ಫ್ರೀ ಇಯರ್ಸ್ ಗೆ ನೋ ಕ್ಲೈಮ್ ಬೋನಸ್ ನೀಡುತ್ತವೆ. ಆದರೆ ಇದು ಶೇ.25 ರಿಂದ ಶೇ. 50 ರಷ್ಟು ಮಾತ್ರ ಇರುತ್ತದೆ. ಇದೇ ವೇಳೆ, ಆದಿತ್ಯ ಬಿರ್ಲಾ ಆರೋಗ್ಯ ವಿಮೆ (Aditya Birla Health Insurance) 'ಅಕ್ವಿಟ್ ಡೇಸ್' ಪೂರ್ಣಗೊಳಿಸಿದ ನಂತರ ಶೇ. 100 ರಷ್ಟು ಪ್ರೀಮಿಯಂ ಲಾಭವನ್ನು ನೀಡುತ್ತಿದೆ.

ಮತ್ತೊಂದು ಕಂಪನಿ, ಫ್ಯೂಚರ್ ಜೆನೆರಾಲಿ (Future Generali), ಈ ತಿಂಗಳು ಒಂದು ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ, ಹಿಂದಿನ ಪಾಲಿಸಿ ವರ್ಷದಲ್ಲಿ ಗ್ರಾಹಕರು ಯಾವುದೇ ರೀತಿಯ ಕ್ಲೈಮ್ (Claim) ಮಾಡದಿದ್ದರೆ, ಅಂತಹ ಗ್ರಾಹಕರಿಗೆ ಪಾಲಿಸಿಯ ನವೀಕರಣದ ಮೇಲೆ ಶೇ.80 ರಷ್ಟು ರಿಯಾಯಿತಿ ನೀಡಲಾಗುವುದು ಎಂದಿದೆ.

ಶೇ.100 ರಷ್ಟು ರಿಯಾಯಿತಿ ನೀಡುವ ಏಕಮಾತ್ರ ಕಂಪನಿ
ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ರಿಟರ್ನ್ ಪಡೆದ ಬಳಿಕ ಪಾಲಸಿ ಧಾರಕರಿಗೆ ಶೇ.100 ರಷ್ಟು ರಿಟರ್ನ್ ನೀಡುತ್ತಿದೆ. ಇದಲ್ಲದೆ, 'ಆಕ್ಟಿವ್ ಹೆಲ್ತ್ ಆಪ್' ಮೂಲಕ ಕಂಪನಿ ತನ್ನ ಗ್ರಾಹಕರ ಆರೋಗ್ಯದ ಕಡೆಗೆ ಗಮನಹರಿಸಲಿದೆ. ಈ ಕುರಿತು ಕಳೆದ ವಾರವಷ್ಟೇ ಹೇಳಿಕೆ ನೀಡಿದ್ದ ಕಂಪನಿ, ಪ್ರಿಮಿಯಂ ಮೇಲೆ ಶೇ.100 ರಷ್ಟು ರಿಯಾಯಿತಿ ನೀಡುವ ಏಕಮೇವ ಕಂಪನಿಯಾಗಿರುವುದಾಗಿ ಘೋಷಿಸಿತ್ತು.

ಇದನ್ನೂ ಓದಿ-SBIನ ಈ ಯೋಜನೆಯಲ್ಲಿ ತಿಂಗಳಿಗೆ 1000 ರೂ.ಉಳಿತಾಯ ಮಾಡಿದ್ರೆ, 1.59ಲಕ್ಷ ಗ್ಯಾರಂಟಿ ರಿಟರ್ನ್

ಎಲ್ಲರಿಗೆ ಅತ್ಯಾವಶ್ಯಕ ಆರೋಗ್ಯ ವಿಮೆ
ಪ್ರತಿ ವಯಸ್ಸಿನ ವ್ಯಕ್ತಿಗೆ ಆರೋಗ್ಯ ವಿಮೆ ಮಹತ್ವಪೂರ್ಣವಾಗಿದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ಯಾವುದೇ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ವಯಸ್ಸು ಮತ್ತು ಆರೋಗ್ಯವನ್ನು ಒಂದೇ ದೃಷ್ಠಿಯಿಂದ ನೋಡುವುದು ಸರಿಯಲ್ಲ. ಇನ್ನೊಂದೆಡೆ ಹಣದುಬ್ಬರ ಕೂಡ ಭಾರಿ ವೇಗವಾಗಿ ಬೆಳೆಯುತ್ತಿದೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡ ದುಬಾರಿಯಾಗಿದೆ.

ಇದನ್ನೂ ಓದಿ- Petrol-Diesel Rate: ಈ ದೇಶಗಳಲ್ಲಿ ಬಿಡಿಕಾಸಿಗೆ ಮಾರಾಟವಾಗುತ್ತದಂತೆ ಪೆಟ್ರೋಲ್-ಡಿಸೇಲ್

ಆರೋಗ್ಯ ವಿಮೆಯ ಲಾಭಗಳು
ವಿಮಾ ಕಂಪನಿಗಳು ಒಂದು ನಿರ್ದಿಷ್ಟ ಪ್ರಮಾಣದ ಆರೋಗ್ಯ ವಿಮೆಯ ಚಿಕಿತ್ಸೆಗೆ ಹಣ ಪಾವತಿಸುತ್ತವೆ ಮತ್ತು ಚಿಕಿತ್ಸೆಯ ಸಮಯದಲ್ಲಿ ನಿಮಗೆ ಹಣದ ಮುಗ್ಗಟ್ಟು ಎದುರಾಗುವುದಿಲ್ಲ. ವಿಮಾ ಕಂಪನಿಗಳು ಅನೇಕ ಉತ್ತಮ ಆಸ್ಪತ್ರೆಗಳೊಂದಿಗೆ ಹೊಂದಾಣಿಕೆಗಳನ್ನು ಹೊಂದಿವೆ ಮತ್ತು ನೀವು ಆ ಆಸ್ಪತ್ರೆಗಳಿಗೆ ಹೋಗಿ ನಿಮ್ಮ ದಾಖಲೆಗಳನ್ನು ತೋರಿಸಿ, ನಿರ್ದಿಷ್ಟ ಮೊತ್ತಕ್ಕೆ ಚಿಕಿತ್ಸೆ ಪಡೆಯಬಹುದು. ಇದರೊಂದಿಗೆ, ಅನೇಕ ಕಂಪನಿಗಳು ಪಾಲಿಸಿಯಲ್ಲಿ ಆರೋಗ್ಯ ತಪಾಸಣೆಯನ್ನು ಸೇರಿಸುವ ಆಯ್ಕೆಯನ್ನು ಸಹ ನೀಡುತ್ತವೆ. ಪ್ರೀಮಿಯಂ ಅನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ನೀವು ಈ ಸೌಲಭ್ಯಗಳ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-IRDAI ಹೊಸ ಪ್ರಸ್ತಾಪ, ವಿಮಾ ಪ್ರೀಮಿಯಂಗೆ ಸಂಬಂಧಿಸಿದಂತೆ ಪಾಲಿಸಿದಾರರಿಗೆ ಸಿಗಲಿದೆ ಈ ಅನುಕೂಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News