Covid-19 Warning Signs: ಶರೀರದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ - Randeep Guleria
Covid-19 Warning Signs - ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ನಿಲ್ಲುವ ಮಾತೆ ಎತ್ತುತ್ತಿಲ್ಲ. ಕಳೆದ ಕೆಲ ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ ಕೂಡ ಸಾವನ್ನಪ್ಪುತ್ತಿರುವವರ ಗ್ರಾಫ್ ಮಾತ್ರ ಇಲಿಕೆಯಗುತ್ತಿಲ್ಲ. ದೆಹಲಿ ಹಾಗೂ ನೋಯ್ಡಾಗಳಲ್ಲಿ ಆಕ್ಸಿಜನ್ ಬ್ಯಾಂಕ್ ಗಳು ತೆರೆದುಕೊಳ್ಳುತ್ತಿದ್ದಂತೆ ಸಂಕಷ್ಟ ಸ್ವಲ್ಪ ದೂರಾಗಿದೆ ಎಂಬ ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ನವದೆಹಲಿ: Covid-19 Warning Signs - ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ (Coronavirus Second Wave) ನಿಲ್ಲುವ ಮಾತೆ ಎತ್ತುತ್ತಿಲ್ಲ. ಕಳೆದ ಕೆಲ ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಯುತ್ತಿದ್ದರೂ ಕೂಡ ಸಾವನ್ನಪ್ಪುತ್ತಿರುವವರ ಗ್ರಾಫ್ ನಲ್ಲಿ ಮಾತ್ರ ಇಳಿಕೆಯಾಗುತ್ತಿಲ್ಲ ದೆಹಲಿ ಹಾಗೂ ನೋಯ್ಡಾಗಳಲ್ಲಿ ಆಕ್ಸಿಜನ್ ಬ್ಯಾಂಕ್ ಗಳು ತೆರೆದುಕೊಳ್ಳುತ್ತಿದ್ದಂತೆ ಸಂಕಷ್ಟ ಸ್ವಲ್ಪ ದೂರಾಗಿದೆ ಎಂಬ ಭರವಸೆ ವ್ಯಕ್ತಪಡಿಸಲಾಗುತ್ತಿದೆ. ಏತನ್ಮಧ್ಯೆ, ಕರೋನಾ ಸೋಂಕಿನ ಕುರಿತು ಜನರ ಕುತೂಹಲ ಮತ್ತು ಪ್ರಶ್ನೆಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ ಜನರು ಕರೋನದ ರೋಗಲಕ್ಷಣಗಳ ಬಗ್ಗೆ ಭಯಭೀತರಾಗಿದ್ದಾರೆ ಮತ್ತು ದೇಶದ ದೊಡ್ಡ ಮತ್ತು ಖ್ಯಾತ ವೈದ್ಯರಿಂದ ಇಂತಹ ಪ್ರಶ್ನೆಗಳ ಉತ್ತರಗಳಿಗಾಗಿ ಎದುರು ನೋಡುತ್ತಿದ್ದಾರೆ.
AIIMS ನಿರ್ದೇಶಕರ ಸಲಹೆ ಏನು?
ಈ ನಡುವೆ ಮಹಾಮಾರಿಯಾಗಿ ಮಾರ್ಪಟ್ಟಿರುವ ಈ ರೋಗದ ವಾರ್ನಿಂಗ್ ಸೈನ್ ಗಳನ್ನು ಹೇಗೆ ಗುರುತಿಸಬೇಕು ಎಂಬುದರ ಕುರಿತು AIIMS ನಿರ್ದೇಶಕ ರಣದೀಪ್ ಗುಲೇರಿಯಾ (Dr. Randeep Guleria) ಹೇಳಿದ್ದಾರೆ ಮತ್ತು ಅವಶ್ಯಕತೆ ಎನಿಸಿದಲ್ಲಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದಾರೆ. ಡಾ.ಗುಲೇರಿಯಾ ತಮ್ಮ ಈ ಸಲಹೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ MyGovIndia (@mygovindia) ಮೇಲೂ ಕೂಡ ಹಂಚಿಕೊಂಡಿದ್ದಾರೆ. ತಮ್ಮ ಈ ಸಲಹೆಯಲ್ಲಿ ಅವರು ತಕ್ಷಣ ಆಸ್ಪತ್ರೆಗೆ ಧಾವಿಸುವ ಬದಲು ರೋಗದ ಲಕ್ಷಣಗಳನ್ನು ಗುರುತಿಸಬೇಕು ಹಾಗೂ ಅವಶ್ಯಕತೆ ಬಿದ್ದಲ್ಲಿ ಮಾತ್ರ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಇಲ್ಲಿದೆ ಟ್ವೀಟ್
ಹಳ್ಳಿ ಮತ್ತು ಅರೆ ನಗರಗಳಲ್ಲಿ ಕೊರೊನಾ ತಡೆಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದ ಕೇಂದ್ರ
Coronavirus) ಮ್ಯೂಟೆಶನ್ ಗೊಂಡು ಇಷ್ಟೊಂದು ಹಾನಿ ತಲುಪಿಸಲಿದೆ ಎಂಬುದನ್ನು ಯಾರೂ ಅಂದಾಜಿಸಿರಲಿಲ್ಲ. ದೇಶಾದ್ಯಂತ ನಿತ್ಯ 4 ಲಕ್ಷ ಹೊಸ ಕೊರೊನಾ ಸೊಂಕಿತರು ಪತ್ತೆಯಾಗುವ ಶಂಕೆ ಇತ್ತು ಆದರೆ, ಸೋಂಕಿತರ ಸಂಖ್ಯೆ ಇಷ್ಟೊಂದು ವೇಗವಾಗಿ ಹರಡಲಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ.
ಇದನ್ನೂ ಓದಿ-"ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ "
ಮಹಾಮಾರಿಯಿಂದ ದೇಶದ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಬಿದ್ದ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಲಕ್ಷಣಗಳಿಲ್ಲದ ಅಥವಾ ಸ್ವಲ್ಪ ಚೇತರಿಸಿಕೊಂಡ ಜನರು ಮನೆಯಲ್ಲಿಯೇ ಕೊರೊನಾ (Covid-19) ಸೋಂಕಿನ ಮೇಲೆ ಗೆಲುವು ಸಾಧಿಸುತ್ತಿದ್ದರೆ, ಇದು ದೇಶದ ಪಾಲಿಗೆ ಒಂದು ಒಳ್ಳೆಯ ಸಂಕೇತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಪರೀಕ್ಷೆ ಮಾಡಿಸುವ ಮುನ್ನ ಲಕ್ಷಣಗಳಿಂದ ದೊರೆತ ಸಂಕೇತಗಳನ್ನು ಅರಿತ ಬಳಿಕವೆ ಆಸ್ಪತ್ರೆಗೆ ಧಾವಿಸುವುದು ಉತ್ತಮ.
ಇದನ್ನೂ ಓದಿ-Raghuram Rajan : 'ಸ್ವಾತಂತ್ರ್ಯ ನಂತ್ರ ಭಾರತ ಎದುರಿಸುತ್ತಿರುವ ಅತೀ ದೊಡ್ಡ ಸವಾಲು ಕೋವಿಡ್'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.