ನವದೆಹಲಿ: COVID -19 ಮೊದಲಿಗೆ ಮದ್ದಿಲ್ಲದ ರೋಗ ಎಂಬ ಕಾರಣಕ್ಕೆ ಭಯ ಸೃಷ್ಟಿಸಿತ್ತು. ನಂತರ ಲಸಿಕೆ (Vaccine) ಬರುವುದು ತಡವಾಗುತ್ತದೆ ಎಂಬ ಆತಂಕ ಮನೆಮಾಡಿತ್ತು. ಇದಾದ ಮೇಲೆ ಕ್ರೂರಿ ಕೊರೋನಾಗೆ ಲಸಿಕೆ ಬಂದರೂ ದುಬಾರಿಯಾಗಿರಬಹುದು, ಉಳ್ಳವರಿಗೆ ಮಾತ್ರ ಸಿಗಬಹುದು ಎಂಬ ಕಳವಳ ಶುರುವಾಗಿತ್ತು. ಆದರೀಗ ಶುಭ ಸುದ್ದಿಯೊಂದು ಬಂದಿದೆ. ಇಡೀ ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಣೆ (COVID Vaccine free distribution) ಆಗಲಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ (Dr. Harshavrdhan) ಇಂಥದೊಂದು ಮಹತ್ವದ ಘೋಷಣೆ ಮಾಡಿದ್ದಾರೆ‌. ಕೊರೊನಾ ಲಸಿಕೆಯನ್ನು ವಿತರಿಸುವ ಪ್ರಕ್ರಿಯೆಯ ಬಗ್ಗೆ ಪರಿಶೀಲನೆ ನಡೆಸುವ ಸಲುವಾಗಿ ಇಂದು ದೇಶಾದ್ಯಂತ 'ಡ್ರೈ ರನ್' (Dry Run) ನಡೆಸಲಾಗುತ್ತಿದೆ.‌ ಈ ಡ್ರೈ ರನ್ ವೀಕ್ಷಣೆ ಮಾಡಲು ದೆಹಲಿಯ ಜಿಟಿಬಿ ಆಸ್ಪತ್ರೆ (GTB Hospital)ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಹರ್ಷವರ್ಧನ್ 'ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು' ಎಂದು ಘೋಷಿಸಿದ್ದಾರೆ‌.


ಇದನ್ನೂ ಓದಿ : Corona Vaccine ಅನುಮೋದನೆಯ ನಂತರ, ಇಂದಿನಿಂದ ದೇಶಾದ್ಯಂತ ಡ್ರೈ ರನ್ ಪ್ರಾರಂಭ


ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಡಾ.‌ ಹರ್ಷವರ್ಧನ್  (Dr. Harshavrdhan), ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಕೋವಿಡ್ ಲಸಿಕೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದಾರೆ.


Covaxin) ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಬಗ್ಗೆ ಮಹತ್ವದ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ (Subject Expert Committee) ಸಭೆ ನಡೆಯುತ್ತಿದೆ‌.


ಈ ವಾರದಲ್ಲಿ 3ನೇ ಬಾರಿ ಸಭೆ ನಡೆಸುತ್ತಿರುವ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿಯು ಭಾರತ್ ಬಯೋಟೆಕ್ (Bharath Biotech) ಸಂಸ್ಥೆಯಿಂದ ಕೋವ್ಯಾಕ್ಸಿನ್ ಲಸಿಕೆ ಪಡೆಯುವವರ ಸುರಕ್ಷತೆ ಬಗ್ಗೆ ಯಾವ ಮುನ್ನೆಚ್ಚರಿಕೆ ವಹಿಸಲಾಗಿದೆ? ಜೊತೆಗೆ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಆಗಿರಲಿದೆ? ಎಂಬ ಬಗ್ಗೆ ಹೆಚ್ಚುವರಿ ಮಾಹಿತಿ ಕೇಳಿದೆ. ಇಂದಿನ ಸಭೆಯಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಹೆಚ್ಚುವರಿ ಮಾಹಿತಿ ಸಲ್ಲಿಸಲಿದೆ.


ಇದನ್ನೂ ಓದಿ : ಜನವರಿ 8 ರಿಂದ ಭಾರತ-ಬ್ರಿಟನ್ ನಡುವಿನ ವಿಮಾನ ಸಂಚಾರ ಪುನರಾರಂಭ


ಬಯೋಟೆಕ್ ಸಂಸ್ಥೆಯು ಸಲ್ಲಿಸಲಿರುವ ಹೆಚ್ಚುವರಿ ಮಾಹಿತಿ ಆಧಾರದ ಮೇಲೆ ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿಯು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controler General Of India)ಕ್ಕೆ ಶಿಫಾರಸು ಮಾಡಲಿದೆ. ಸಬ್ಜಕ್ಟ್ ಎಕ್ಸಫರ್ಟ್ ಕಮಿಟಿ ಶಿಫಾರಸು ಆಧರಿಸಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.