ಲೋಕಲ್ ಸರ್ಕಲ್ಸ್ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ನೀಡುವ ಬಗ್ಗೆ ಭಾರತದಲ್ಲಿ ಕೋವಿಡ್ -19 ಪ್ರಯೋಗಗಳನ್ನು ನಡೆಸಲು ಕೇಂದ್ರ ಸರ್ಕಾರವು ಫಿಜರ್ ಮತ್ತು ಮಾಡ್ರೆನಾ ಕಂಪನಿಗಳಿಗೂ ಅವಕಾಶ ನೀಡುವ ಬಗ್ಗೆಯೂ ಸಮೀಕ್ಷೆಯಲ್ಲಿ ನಡೆಸಿದೆ. ಈ ಸಮೀಕ್ಷೆಗಳಲ್ಲೂ ಆಶ್ಚರ್ಯಕರವಾದ ಅಭಿಪ್ರಾಯಗಳೇ ಲಭ್ಯವಾಗಿವೆ.
ಕೊರೋನಾ ಲಸಿಕೆಗಳಲ್ಲಿ ಹಂದಿ ಮಾಂಸದ ಅಂಶವಿದೆ. ಹಂದಿ ಮಾಂಸ ಸೇವನೆ ಧರ್ಮ ನಿಷಿದ್ಧವಾಗಿರುವ ಕಾರಣ ಮುಸ್ಲಿಮರು ಲಸಿಕೆ ಪಡೆಯಬಾರದು ಎಂಬ ವದಂತಿ ಎದ್ದಿದೆ. ಈ ಹಿನ್ನಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಜಮಾತ್-ಎ-ಇಸ್ಲಾಂ-ಹಿಂದ್, 'ಇದು ಆಧಾರರಹಿತ ಸುದ್ದಿ' ಎಂದು ಹೇಳಿದೆ.
ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಜನವರಿ 13 ರಿಂದ ಇಡೀ ದೇಶದಲ್ಲಿ ಪ್ರಾರಂಭವಾಗಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸುಳಿವು ನೀಡಿದೆ. ಈ ಹಿನ್ನಲೆಯಲ್ಲಿ ಲಸಿಕೆ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗಳಿವೆ. ಈ ಪ್ರಕ್ರಿಯೆಯ ಬಗೆಗಿನ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಇಂದು ದೇಶಾದ್ಯಂತ ನಡೆಯುತ್ತಿರುವ 'ಕೋವಿಡ್ ಡ್ರೈ ರನ್' ವೀಕ್ಷಣೆ ಮಾಡಲು ದೆಹಲಿಯ ಜಿಟಿಬಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಈ ಮಹತ್ವದ ಘೋಷಣೆ ಮಾಡಿದ್ದಾರೆ.
ಡ್ರೈ ರನ್ ಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಯಕರ್ತರಿಗೆ ದೇಶದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದೆ. ನಾವು ವಿಶೇಷ ತಂಡವನ್ನು ಸಹ ರಚಿಸಿದ್ದೇವೆ, ಅದು ಸಂಪೂರ್ಣ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಈ ಡ್ರೈ ರನ್ ನಲ್ಲಿ ಲಸಿಕೆ ನೀಡಲಾಗುವುದಿಲ್ಲ, ಜನರ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.