ನವದೆಹಲಿ: ಓಡಾಟದಿಂದ ಕೂಡಿದ ಜೀವನ ಮತ್ತು ಮಾಲಿನ್ಯದಿಂದಾಗಿ, ಅನೇಕ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ಇಂತಹ ಜನರು ಗಂಭೀರ ಕಾಯಿಲೆಗಳ ಕಾರಣ ಕೊರೊನಾ ಸೊಂಕಿಗೂ ಕೂಡ ಗುರಿಯಾಗುತ್ತಿದ್ದಾರೆ. ಇಂತಹ  ಪರಿಸ್ಥಿತಿಯಲ್ಲಿ, ಉತ್ತಮ ಆರೋಗ್ಯ ವಿಮಾ (Health Insurance) ಯೋಜನೆಯನ್ನು ಹೊಂದಿರುವುದು ಬಹಳ ಮುಖ್ಯ. ಆದರೂ ವಿಮಾ ಕಂಪನಿಗಳು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಪ್ರತ್ಯೇಕ ವಿಮಾ ಪಾಲಿಸಿಯನ್ನು ಜಾರಿಗೊಳಿಸುತ್ತವೆ. ಈ ಪಾಲಿಸಿಯನ್ನು ಕ್ರಿಟಿಕಲ್ ಹೆಲ್ತ್ ಇನ್ಶುರೆನ್ಸ್ ಪಾಲಿಸಿ ಎಂದು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಎಸ್‌ಬಿಐನ ಈ ಆಫರ್ ಅಡಿಯಲ್ಲಿ ಕೇವಲ 1300 ರೂಪಾಯಿಗಳಿಗೆ ಪಡೆಯಿರಿ Health insurance


ಈ ಕಾಯಿಲೆಗಳನ್ನು ಕೂಡ ಕವರ್ ಮಾಡಲಾಗುತ್ತದೆ
ಈ ಪಾಲಿಸಿ ಅಡಿ  ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ, ಡಯಾಲಿಸಿಸ್, ಪಾರ್ಶ್ವವಾಯು, ಮುಖ್ಯ ಅಂಗಾಂಗ ಕಸಿ, ತೆರೆದ ಎದೆಯ ಸಿಎಬಿಜಿ, ಹೃದಯ ಕವಾಟ, ಕೋಮಾ, ಅಂಗಗಳ ಶಾಶ್ವತ ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ಕೊನೆಯ ಹಂತದ ಯಕೃತ್ತಿನ ಕಾಯಿಲೆ, ಕೊನೆಯ ಹಂತದ ಶ್ವಾಸಕೋಶ ರೋಗದಂತಹ ರೋಗಗಳು ಕೂಡ ಶಾಮೀಲಾಗಿವೆ. ಕಾಯಿಲೆಗಳನ್ನು ಆಯ್ಕೆ ಮಾಡುವ ಅಧಿಕಾರ ವಿಮಾ ಕಂಪನಿಗಳ ಮೇಲೆ ಅವಲಂಭಿಸಿದೆ. ಹೀಗಾಗಿ ಒಂದೇ ಪಾಲಸಿಯಲ್ಲಿ ಎಲ್ಲ ಗಂಭೀರ ಕಾಯಿಲೆಗಳನ್ನು ಶಾಮೀಲುಗೊಳಿಸಲು ಪಾಲಸಿಯ ನಿಯಮ ಹಾಗೂ ಷರತ್ತುಗಳನ್ನು ತುಂಬಾ ಗಮನವಿಟ್ಟು ಓದಿ.


ಇದನ್ನು ಓದಿ- ಈ ವಿಮಾ ಪಾಲಿಸಿಯಲ್ಲಿ ಸಿಗಲಿದೆ 5 ಲಕ್ಷಕ್ಕಿಂತ ಹೆಚ್ಚಿನ ವಿಮಾ ರಕ್ಷಣೆ


ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತದೆ
ಈ ರೀತಿಯ ಪಾಲಸಿ ಪಡೆದ ಪಾಲಸಿಧಾರಕರಿಗೆ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತದೆ. ಹೌದು ಕ್ರಿಟಿಕಲ್ ಇಲ್ನೆಸ್ ಇನ್ಸೂರೆನ್ಸ್ ಪಾಲಸಿ ಮೇಲೆ ಟ್ಯಾಕ್ಸ್ ರಿಯಾಯಿತಿ ಕೂಡ ಸಿಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿ 25,000 ರೂ.ಗಳ ವರೆಗೆ ಹಾಗೂ ಹಿರಿಯ ನಾಗರಿಕರಿಗೆ 50,000 ರೂ.ಗಳ ತೆರಿಗೆ ವಿನಾಯ್ತಿ ಸಿಗುತ್ತದೆ. ಕ್ರಿಟಿಕಲ್ ಇಲ್ಲ್ನೆಸ್ ಪಾಲಸಿಯ ಅಡಿ ಹೆಸರಿಸಲಾಗಿರುವ ಕಾಯಿಲೆಯ ಕುರಿತು ಮಾತ್ರ ಡಿಫೈನ್ ಮಾಡುತ್ತವೆ.


ಇದನ್ನು ಓದಿ- Insurance ಅವಧಿ ಆಯ್ಕೆಗೆ IRDAI ನಿಂದ ಸಿಕ್ತು ಸ್ವಾತಂತ್ರ್ಯ...ಇಲ್ಲಿದೆ ಡಿಟೇಲ್ಸ್


ಕ್ಲೇಮ್ ಗಾಗಿ ಬಿಲ್ ನೀಡುವ ಆವಶ್ಯಕತೆ ಇಲ್ಲ
ಪಾಲಸಿಯ ಅವಧಿಯಲ್ಲಿ ಚಿಕಿತ್ಸೆಗಾಗಿ ಆಗುವ ವೆಚ್ಚವನ್ನು ಕ್ಲೇಮ್ ಮಾಡಲು ಯಾವುದೇ ರೀತಿಯ ಪಾವತಿ ನೀಡುವ ಅವಶ್ಯಕತೆ ಇಲ್ಲ. ವೈದ್ಯಕೀಯ ಪರೀಕ್ಷೆಯ ವೇಳೆ ಗಂಭೀರ ರೋಗದ ಪುಷ್ಟಿಯಾದ ಬಳಿಕ ವಿಮಾ ಕಂಪನಿಗಳು ಒಂದೇ ಕಂತಿಯಲ್ಲಿ ಹಣ ನೀಡುತ್ತವೆ. ಇದಲ್ಲದೆ ವಿಮಾ ಹಣವನ್ನು ಪಡೆಯಲು ನೀವು ಯಾವುದೇ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಕೂಡ ಇಲ್ಲ.