ಬೆಂಗಳೂರು : ನಾವು ಮಾಡುವ ಪ್ರತಿಯೊಂದು ಅಡುಗೆಯಲ್ಲಿಯೂ   ಜೀರಿಗೆಯನ್ನು ಬಳಸುತ್ತೇವೆ.ಅದು ಸಾಂಬಾರ್, ರಸಂ, ಪಲ್ಯ ಏನೇ ಆಗಿರಲಿ ಅಲ್ಲಿ ಜೀರಿಗೆ ಬಳಕೆ ಇದ್ದೇ ಇರುತ್ತದೆ.ಆದರೆ, ಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ.ಅದರಲ್ಲಿಯೂ ಜೀರಿಗೆಯನ್ನು ಬೆಲ್ಲದ ಜೊತೆ ಸೇವಿಸಿದರೆ ದೇಹದ ಹಲವಾರು ಕಾಯಿಲೆಗಳಿಂದ ಶಾಶ್ವತ ಮುಕ್ತಿ ಸಿಗುತ್ತದೆ. 


COMMERCIAL BREAK
SCROLL TO CONTINUE READING

ಜೀರಿಗೆ ಮತ್ತು ಬೆಲ್ಲದ ನೀರನ್ನು ತಯಾರಿಸುವುದು ಹೇಗೆ? : 
ಎರಡು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಅದನ್ನು ಅರ್ಧದಷ್ಟಾಗುವವರೆಗೆ ಕುದಿಸಿ.ನಂತರ ಅದಕ್ಕೆ ಬೆಲ್ಲ ಸೇರಿಸಿ.ಈ ನೀರನ್ನು ತಣ್ಣಗಾಗಲು ಬಿಡಿ.ನಂತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.ಹೀಗೆ ಜೀರಿಗೆ ಬೆಲ್ಲದ ನೀರನ್ನು ಮುಂಜಾನೆ ಎದ್ದ ಕೂಡಲೇ ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. 


ಇದನ್ನೂ ಓದಿ : ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕ್ಕೆ ಗುಡ್ ಬೈ ಹೇಳಬಹುದು!


ಈ ಪಾನೀಯದ ಪ್ರಯೋಜನಗಳು :
ಹಿಮೋಗ್ಲೋಬಿನ್ ಕಡಿಮೆ ಇರುವವರು ಈ ಪಾನೀಯವನ್ನು ನಿತ್ಯ  ಸೇವಿಸಬೇಕು.ಈ ಪಾನೀಯವು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತಹೀನತೆಯಾಗದಂತೆ ನೋಡಿಕೊಳ್ಳುತ್ತದೆ.


ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :
ಪ್ರತಿದಿನ ಈ ಪಾನೀಯವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಇದು ದೇಹವನ್ನು ನಿರ್ವಿಷಗೊಳಿಸುತ್ತದೆ.ಹಾಗಾಗಿ ಇದನ್ನು ಖಾಲಿ ಹೊಟ್ಟೆಯಲ್ಲಿಯೇ ಸೇವಿಸಿದರೆ ಒಳ್ಳೆಯದು. 


ಇದನ್ನೂ ಓದಿ : ಔಷಧಿಯಿಂದ ಹಿಡಿದು ಸರ್ವ ಪ್ರಯತ್ನದ ನಂತರವೂ ಮಕ್ಕಳಾಗದಿರುವುದಕ್ಕೆ ಇದೇ ಕಾರಣ !ಇದೊಂದು ಹವ್ಯಾಸ ಬಿಟ್ಟು ನೋಡಿ


ಹೊಟ್ಟೆನೋವು, ಸೆಳೆತ,ಗ್ಯಾಸ್,ಮಲಬದ್ಧತೆ ಮುಂತಾದ ಹೊಟ್ಟೆಗೆ
ಸಂಬಂಧಿಸಿದ ಸಮಸ್ಯೆಗಳಿರುವವರು ಈ ಪಾನೀಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ.


ಮುಟ್ಟಿನ ನೋವು ನಿವಾರಣೆಗೆ :
ಹೆಚ್ಚಿನ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ.ಈ ನೋವಿನ ಸಮಸ್ಯೆಗೆ ಪರಿಹಾರವಾಗಿ ಜೀರಿಗೆ ಬೆಲ್ಲದ ನೀರನ್ನು ಸೇವಿಸಬಹುದು.ಅಲ್ಲದೆ, ಇದು ಸೊಂಟ,ಕೈ ಮತ್ತು ಕಾಲುಗಳು ಮತ್ತು ತಲೆನೋವಿನಂತಹ ಇತರ ದೈಹಿಕ ನೋವುಗಳಿಂದಲೂ ಪರಿಹಾರ ನೀಡುತ್ತದೆ.ಸೌಮ್ಯ ಜ್ವರದ ಸಂದರ್ಭದಲ್ಲಿಯೂ ಇದನ್ನು ಸೇವಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.