ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು!

Vision Improve Tips: ತಂತ್ರಜ್ಞಾನ ಮುಂದುವರೆದಂತೆ ಗ್ಯಾಜೆಟ್ಗಳ ಬಳಕೆ ಹೆಚ್ಚಾಗಿದೆ. ಏನೇ ಆದರೂ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಗ್ಯಾಜೆಟ್ ಗಳ ಬಳಕೆಯಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಇದು ದೃಷ್ಟಿ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. 

Written by - Yashaswini V | Last Updated : Jul 16, 2024, 01:06 PM IST
  • ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಕಣ್ಣಿನ ವ್ಯಾಯಾಮಗಳು ನೈಸರ್ಗಿಕ ಚಿಕಿತ್ಸೆ ಆಗಿವೆ.
  • ನಿತ್ಯ ಕಣ್ಣಿನ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.
ನಿತ್ಯ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಕೇವಲ ತಿಂಗಳಲ್ಲಿ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು!  title=

Eyesight Improve Tips: ಇತ್ತೀಚಿನ ದಿನಗಳಲ್ಲಿ ಟಿವಿ, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಹೀಗೆ ಗ್ಯಾಜೆಟ್ಸ್ ಗಳ ಅತಿಯಾದ ಬಳಕೆಯಿಂದಾಗಿ ತುಂಬಾ ಸಣ್ಣ ವಯಸ್ಸಿನಲ್ಲಿಯೇ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ, ಸಣ್ಣ ಮಕ್ಕಳು ಅತಿ ಸಣ್ಣ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಾಗಿದೆ. 

ಕನ್ನಡಕ ಧರಿಸುವುದರಿಂದ ತಕ್ಷಣದ ಸಮಸ್ಯೆ ಬಗೆಹರಿಯಬಹುದು. ಆದರೆ, ಆರೋಗ್ಯಕರ ದೃಷ್ಟಿಯನ್ನು (Eyesight) ಕಾಪಾಡಿಕೊಳ್ಳಲು ಕೆಲವು ಆಹಾರಗಳು ನಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಕಣ್ಣಿನ ಡ್ಯಾಮೇಜ್ ಅನ್ನು ಸಂಪೂರ್ಣವಾಗಿ ಸರಿಪಡಿಸಲು ಒಂದು ಚಮತ್ಕಾರಿ ಪುಡಿಯನ್ನು ಹಾಲಿಗೆ ಬೆರೆಸಿ ಸೇವಿಸುವುದು ಹೆಚ್ಚು ಪ್ರಯೋಜನಾರಿ ಎಂದು ಸಾಬೀತುಪಡಿಸಬಹುದು. 

ಇದನ್ನೂ ಓದಿ- ಹಾಲನ್ನು ಈ ರೀತಿ ಬಳಸಿ ತ್ವಚೆಯ ಸಮಸ್ಯೆಗಳಿಗೆ ಹೇಳಿ ಗುಡ್ ಬೈ

ದೃಷ್ಟಿ ಸುಧಾರಣೆಗೆ ಚಮತ್ಕಾರಿ ಪುಡಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: 
ಒಂದು ಮುಷ್ಟಿ ಬಾದಾಮಿ, ಅರ್ಧ ಕಪ್ ಸೋಂಪು, ಬಿಳಿ ಕಲ್ಲು ಸಕ್ಕರೆ, ಒಂದು ಚಮಚ ಕಾಳು ಮೆಣಸು. 

ಇದನ್ನೂ ಓದಿ- ಕೊಬ್ಬರಿ ಎಣ್ಣೆಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು

ಪುಡಿ ತಯಾರಿಸುವ ವಿಧಾನ: 
ಒಂದು ಮಿಕ್ಸರ್ ಜಾರ್ ನಲ್ಲಿ ಒಂದು ಹಿಡಿ ಬಾದಾಮಿಯೊಂದಿಗೆ ಅರ್ಧ ಕಪ್ ಸೋಂಪು, ಬಿಳಿ ಸಕ್ಕರೆ, ಒಂದು ಸಣ್ಣ ಚಮಚ ಕಾಳು ಮೆಣಸನ್ನು ಹಾಕಿ ನುಣ್ಣಗೆ ರುಬ್ಬಿ. ಈ ರುಬ್ಬಿಟ್ಟ ಪುಡಿಯನ್ನು ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸಿಟ್ಟು ನಿತ್ಯ  ಒಂದು ಲೋಟ ಹಾಲಿಗೆ ಒಂದು ಚಮಚ ಈ ಪುಡಿಯನ್ನು ಬೆರೆಸಿ ಕುಡಿಯಿರಿ. ಪ್ರತಿದಿನ ಈ ಚಮತ್ಕಾರಿ ಪುಡಿ ಬೆರೆಸಿ ಹಾಲು ಕುಡಿಯುವುದರಿಂದ ಕೇವಲ ತಿಂಗಳಲ್ಲಿ ದೃಷ್ಟಿ ಸುಧಾರಣೆಯಾಗಿ (Eyesight Improve) ನಿಮ್ಮ ಕನ್ನಡಕಕ್ಕೆ ಗುಡ್ ಬೈ ಹೇಳಬಹುದು. 

ಕಣ್ಣಿನ ವ್ಯಾಯಾಮ: 
ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಕಣ್ಣಿನ ವ್ಯಾಯಾಮಗಳು ನೈಸರ್ಗಿಕ ಚಿಕಿತ್ಸೆ ಆಗಿವೆ. ಹಾಗಾಗಿ, ನಿತ್ಯ ಕಣ್ಣಿನ ವ್ಯಾಯಾಮಗಳನ್ನು ಮಾಡುವ ಮೂಲಕ ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News