Daily night hair care: ಇಂದಿನ ಪೀಳಿಗೆ ಕೂದಲು ಉದುರುವ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದೆ. ಇಂದು ನಾವು ನಿಮಗೆ ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಸಲು ಮಾಡಬೇಕಾದ ಕ್ರಮಗಳ ಕುರಿತು ತಿಳಿಸುತ್ತೇವೆ.. ನಿಮ್ಮ ಕೂದಲನ್ನು ಬಲವಾಗಿ ಮತ್ತು ಸುಂದರವಾಗಿಸಲು ನೀವು ವಿವಿಧ ವಿಧಾನಗಳನ್ನು ಪ್ರಯತ್ನಿಸಿರಬಹುದು, ಆದರೆ ಈ ವಿಧಾನ ನಿಮ್ಮನ್ನು ಅಚ್ಚರಿಗೊಳಿಸುತ್ತದೆ..


COMMERCIAL BREAK
SCROLL TO CONTINUE READING

ಹೌದು.. ಕೂದಲನ್ನು ಆರೋಗ್ಯಕರವಾಗಿಸಲು ನೀವು ಬಯಸಿದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ಐದು ಸರಳ ಕೆಲಸಗಳನ್ನು ಮಾಡಿದರೆ ಕೂದಲು ಸುಂದರ, ಹೊಳೆಯುವ ಮತ್ತು ಉದ್ದವಾಗುತ್ತವೆ. ಇದನ್ನು ಮಾಡಲು ನಿಮಗೆ ಹೆಚ್ಚು ಶ್ರಮ ಅಥವಾ ಸಮಯದ ಅಗತ್ಯವಿಲ್ಲದ.


ಇದನ್ನೂ ಓದಿ: ಕೂದಲು ಉದುರುವುದಕ್ಕೆ ಕೊನೆಯೇ ಇಲ್ಲವೇ..! ಹಾಗಿದ್ರೆ ಈ ಆಹಾರಗಳಿಗೆ ಹೇಳಿ ಗುಡ್‌ ಬೈ..


ಮಲಗುವ ಮುನ್ನ ಕೂದಲನ್ನು ಶುಚಿಗೊಳಿಸಿ : ಮೊದಲನೆಯದಾಗಿ, ರಾತ್ರಿ ಮಲಗುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಬೇಕು.


ಎಣ್ಣೆ ಹಚ್ಚಿ : ರಾತ್ರಿ ಮಲಗುವ ಮುನ್ನ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಬೆಚ್ಚಗಾಗಿಸಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಐದರಿಂದ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದಾಗಿ ಕೂದಲಿನ ಬೇರುಗಳು ಬಲವಾಗಿರುತ್ತವೆ. ಮರುದಿನ ಬೆಳಿಗ್ಗೆ ಶಾಂಪೂ ಹಚ್ಚಿ ತಲೆ ತೊಳೆದುಕೊಳ್ಳಿ. ಮರೆಯಬೇಡಿ.


ಕೂದಲನ್ನು ಸಂಪೂರ್ಣವಾಗಿ ಒಣಗಿಸಿ: ಇಡೀ ದಿನದ ಕೆಲಸದಿಂದ ಕೂದಲು ಬೆವರಿನಿಂದ ತೇವವಾಗಿದ್ದರೆ, ಮೊದಲು ಅದನ್ನು ಸಂಪೂರ್ಣವಾಗಿ ಒಣಗಿಸಿ. ಒದ್ದೆಯಾದ ಕೂದಲಿನಲ್ಲಿ ಮಲಗುವುದರಿಂದ ಅವು ಹೆಚ್ಚು ಒಡೆಯುತ್ತದೆ.


ಇದನ್ನೂ ಓದಿ:ರಾತ್ರಿ ಮಲಗುವ ಮುನ್ನ ಬ್ರಾ ಧರಿಸಿದರೆ ಸ್ತನ ಕ್ಯಾನ್ಸರ್ ಬರುತ್ತದೆಯೇ.? ಸತ್ಯ ಇಲ್ಲಿದೆ


ಒಂದು ಸ್ಯಾಟಿನ್ ಸ್ಕಾರ್ಫ್ : ರಾತ್ರಿ ಮಲಗುವ ಮುನ್ನ ನಿಮ್ಮ ಕೂದಲನ್ನು ಸ್ಯಾಟಿನ್ ಬಟ್ಟೆಯಿಂದ ಮುಚ್ಚುವ ಅಭ್ಯಾಸವನ್ನು ಮಾಡಿಕೊಳ್ಳಿ, ಇದರಿಂದ ನಿಮ್ಮ ಕೂದಲಿನಲ್ಲಿ ಸಿಕ್ಕುಗಳು ಕಡಿಮೆಯಾಗುತ್ತವೆ. ಅಲ್ಲದೆ, ನಿಮ್ಮ ಕೂದಲನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿಸಲು, ನೀವು ಮಲಗುವ ಮೊದಲು ಮತ್ತು ಬೆಳಿಗ್ಗೆ ಏಳುವ ಮೊದಲು ಉತ್ತಮ ಪ್ರಮಾಣದ ನೀರನ್ನು ಕುಡಿಯಬೇಕು.


(ನಿರಾಕರಣೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ