Triphala for Control Blood Sugar Level: ಮಧುಮೇಹಕ್ಕೆ ಆಯುರ್ವೇದದಲ್ಲಿಯೂ ಕೂಡ ಪರಿಹಾರವಿದೆ. ಆಯುರ್ವೇದ ತಜ್ಞರ ಪ್ರಕಾರ, ಗಿಡಮೂಲಿಕೆಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಅಂತಹ ಗಿಡಮೂಲಿಕೆಗಳಲ್ಲಿ ಒಂದು ತ್ರಿಫಲ.  ತ್ರಿಫಲದ ಸಹಾಯದಿಂದ ಮಧುಮೆಹಿಗಳು ತುಂಬಾ ಸುಲಭವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಮಧುಮೇಹ ರೋಗಿಗಳಿಗೆ ತ್ರಿಫಲ ಚೂರ್ಣದ ಪ್ರಯೋಜನಗಳೇನು? ಅದನ್ನು ಯಾವ ರೀತಿ ಸೇವಿಸಬೇಕು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ತ್ರಿಫಲ ಚೂರ್ಣ ಮಧುಮೆಹಿಗಳಿಗೆ ಹೇಗೆ ಪ್ರಯೋಜನಕಾರಿ?
ಮಧುಮೆಹಿಗಳಿಗೆ ವರದಾನ ಎಂದು ಬಣ್ಣಿಸಲ್ಪಡುವ ತ್ರಿಫಲ ಚೂರ್ಣವನ್ನು ಕಪ್ಪು ಮೈರೋಬಾಲನ್, ಬಹೇಡಾ ಮತ್ತು ಆಮ್ಲಾವನ್ನು ಬೆರೆಸಿ ತಯಾರಿಸಲಾಗುತ್ತದೆ. ಹರಾದ್ ಮತ್ತು ಬಹೇಡಾ ಜೀರ್ಣಕಾರಿ ಕಿಣ್ವಗಳನ್ನು ನಿಯಂತ್ರಿಸುತ್ತದೆ. ನೆಲ್ಲಿಕಾಯಿಯಲ್ಲಿ ಆಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿ ಕಂಡು ಬರುತ್ತವೆ. ಇವೆಲ್ಲವೂ ಸಹ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗಿವೆ. 


ಆಯುರ್ವೇದ ತಜ್ಞರ ಪ್ರಕಾರ, ತ್ರಿಫಲ ಸೇವನೆಯಿಂದ ನಮ್ಮ ಮೇದೋಜ್ಜೀರಕ ಗ್ರಂಥಿಯು ಆರೋಗ್ಯಕರವಾಗಿತ್ತದೆ. ಈ ಮೂಲಿಕೆಯು ಮಧುಮೇಹ ರೋಗಿಗಳಿಗೆ ಬಹಳ ಮುಖ್ಯವಾದ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವ ಅಂಗವನ್ನು ಪ್ರಚೋದಿಸುತ್ತದೆ.


ಇದನ್ನೂ ಓದಿ- ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಸುಧಾರಿತ ಸ್ಟ್ರೋಕ್ ನಿರ್ವಹಣೆ


ಮಧುಮೇಹಿಗಳು ತ್ರಿಫಲವನ್ನು ಹಲವು ವಿಧಗಳಲ್ಲಿ ಬಳಸಬಹುದು. ಅವುಗಳೆಂದರೆ 
ದೇಸಿ ತುಪ್ಪದೊಂದಿಗೆ ತ್ರಿಫಲ ಸೇವನೆ:

ಆಯುರ್ವೇದದಲ್ಲಿ ದೇಸಿ ತುಪ್ಪದೊಂದಿಗೆ ತ್ರಿಫಲ ಸೇವನೆಯನ್ನು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದಕ್ಕಾಗಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ. ಇದಾದ ನಂತರ ಅದಕ್ಕೆ ತ್ರಿಫಲ ಪುಡಿಯನ್ನು ಬೆರೆಸಿ ತಿನ್ನಿ. ಇದರಿಂದ ದೇಹವನ್ನು ನಿರ್ವಿಷಗೊಳಿಸಬಹುದು. ಇದರೊಂದಿಗೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಮಾತ್ರವಲ್ಲ, ದೇಹದಲ್ಲಿ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ.


ತ್ರಿಫಲವನ್ನು ಮಜ್ಜಿಗೆಯೊಂದಿಗೆ ಸೇವಿಸಿ: 
ಮಜ್ಜಿಗೆಯೊಂದಿಗೆ ತ್ರಿಫಲ ಚೂರ್ಣವನ್ನು ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಮಧುಮೇಹಿಗಳು ಮಧ್ಯಾಹ್ನದ ಊಟದ ನಂತರ 1 ಲೋಟ ಮಜ್ಜಿಗೆಗೆ 1 ಚಮಚ ತ್ರಿಫಲ ಬೆರೆಸಿ ಕುಡಿಯವುದರಿಂದ  ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಕಾರಿ. ಇದು ನಿಮ್ಮ ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. 


ಇದನ್ನೂ ಓದಿ- Diabetes : ಮಧುಮೇಹಕ್ಕೆ ರಾಮಬಾಣ ಈ ಎಲೆ, ಪ್ರತಿನಿತ್ಯ ಹೀಗೆ ಸೇವಿಸಿ.!


ಮಧುಮೆಹಿಗಳಿಗೆ ತ್ರಿಫಲ ಕಷಾಯ: 
ಮಧುಮೇಹ ರೋಗಿಗಳಿಗೆ ತ್ರಿಫಲ ಕಷಾಯವನ್ನು ತುಂಬಾ ಆರೋಗ್ಯಕರ ಎನ್ನಲಾಗುತ್ತದೆ. ಈ ಕಷಾಯವನ್ನು ತಯಾರಿಸಲು, ಒಂದು ಚಮಚ ತ್ರಿಫಲ ಪುಡಿಯನ್ನು 1 ಕಪ್ ನೀರಿನಲ್ಲಿ ಮಿಶ್ರಣ ಮಾಡಿ. ಅದನ್ನು ಬಿಸಿ ಮಾಡಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ತಿದಿನ ಖಾಲಿ ಹೊಟ್ಟೆಯಲ್ಲಿ ಈ ತ್ರಿಫಲ ಕಷಾಯವನ್ನು ಕುಡಿಯುತ್ತಾ ಬಂದರೆ ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕಾರಣವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.