Diabetes Symptoms : ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿಯದ್ದಾಗಿರುತ್ತದೆ ಎಂದು ಬಹುತೇಕರು ಭಾವಿಸಿರುತ್ತಾರೆ. ಆದರೆ ಇದು ನಿಜವಲ್ಲ. ಈ ರೋಗದ ಲಕ್ಷಣಗಳು ಪುರುಷರು ಮತ್ತು ಮಹಿಳೆಯರಲ್ಲಿ  ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಮಧುಮೇಹದಲ್ಲಿ ಆಗಾಗ ಮೂತ್ರವಿಸರ್ಜನೆ,  ಅಧಿಕ ಬಾಯಾರಿಕೆ ಮತ್ತು ದೃಷ್ಟಿ ಮಂದವಾಗುವುದು  ಪ್ರಮುಖ  ಲಕ್ಷಣಗಳಾಗಿರುತ್ತವೆ ಎನ್ನುವುದೇ ಸಾಮಾನ್ಯವಾಗಿ ಇರುವ ತಿಳುವಳಿಕೆ. ಆದರೆ, ಮಹಿಳೆಯರಲ್ಲಿ ಇದಕ್ಕಿಂತ ಭಿನ್ನವಾದ  ರೋಗಲಕ್ಷಣಗಳು ಗೋಚರಿಸುತ್ತವೆ. 


COMMERCIAL BREAK
SCROLL TO CONTINUE READING

ತಜ್ಞರ ಪ್ರಕಾರ ಮಹಿಳೆಯರಲ್ಲಿ ಮಧುಮೇಹದ ಕೆಲವು ಲಕ್ಷಣಗಳು  ಬೇರೆಯೇ ಆಗಿರುತ್ತದೆ. ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಯೋನಿ ಶಿಲೀಂಧ್ರ ಸೋಂಕುಗಳು ಮತ್ತು ಮೂತ್ರದ ಸೋಂಕುಗಳು ಕಾಣಿಸಿಕೊಳ್ಳುತ್ತವೆ.  ಮಧುಮೇಹ ಇರುವಾಗ ಪುರುಷರಿಗಿಂತ ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಇದರ ಜೊತೆಗೆ,  ಮಹಿಳೆಯರು  ಇರ್ರೆಗ್ಯುಲರ್ ಪೀರಿಯೇಡಸ್, ಬಂಜೆತನ ಮತ್ತು ಲೈಂಗಿಕ  ರೋಗಗಳ ಅಪಾಯವನ್ನು ಎದುರಿಸುತ್ತಾರೆ. 


ಇದನ್ನೂ ಓದಿ : Weight Loss Workout: ಬೊಜ್ಜು & ತೂಕ ನಷ್ಟಕ್ಕೆ ಇಲ್ಲಿವೆ ನೋಡಿ 6 ಸರಳ ಸೂತ್ರಗಳು


ಪುರುಷರು ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ಮಧುಮೇಹವನ್ನು ನಿಯಂತ್ರಿಸುವ ವಿಧಾನಗಳು ಕೂಡಾ ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿರಬಹುದು. ಮಹಿಳೆಯರಿಗಿಂತ ಪುರುಷರು ಮಧುಮೇಹಕ್ಕೆ ಹೆಚ್ಚು ಒಳಗಾಗುತ್ತಾರೆ. ಮಹಿಳೆಯರಿಗೆ, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯು ಅವರ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೀಗಾದಾಗ ಮಧುಮೇಹ ಕಾಣಿಸಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಹೃದ್ರೋಗ ಮತ್ತು ಖಿನ್ನತೆಯಂತಹ ಅಪಾಯವನ್ನು ಮಹಿಳೆಯರು  ಎದುರಿಸಬೇಕಾಗಬಹುದು.  


ಮಧುಮೇಹದ ರೋಗಲಕ್ಷಣಗಳನ್ನು ಹೇಗೆ ನಿರ್ವಹಿಸುವುದು ? : 
ಸೋಂಕುಗಳು ಮತ್ತು ಯುಟಿಐಗಳನ್ನು ತಪ್ಪಿಸಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು  ನಾರ್ಮಲ್ ರೇಂಜ್ ಗೆ ಹತ್ತಿರದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. UTI ಗಳನ್ನು ತಡೆಗಟ್ಟಲು  ಸಾಕಷ್ಟು ನೀರು ಕುಡಿಯುವುದು, ಹತ್ತಿ ಬಟ್ಟೆಯ ಒಳ ಉಡುಪುಗಳನ್ನು ಧರಿಸುವುದು, ಮೂತ್ರಕೋಶವು ತುಂಬುವವರೆಗೆ ಕಾಯುವ ಬದಲು  ಆಗಾಗ ಮೂತ್ರ ವಿಸರ್ಜನೆ ಮಾಡುವುದು ಮುಂತಾದ ಕ್ರಮಗಳನ್ನು ಅನುಸರಿಸಬಹುದು. 


ಇದನ್ನೂ ಓದಿ : ತೂಕ ಇಳಿಕೆ ಜೊತೆಗೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಹುರಿಗಡಲೆ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ