Health Tips: ಈ 4 ಪದಾರ್ಥಗಳೊಂದಿಗೆ ಅಪ್ಪಿತಪ್ಪಿಯೂ ಮೊಟ್ಟೆ ಸೇವಿಸಬೇಡಿ..!
Bad Food Combination: ಮೊಟ್ಟೆಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ 4 ವಸ್ತುಗಳ ಜೊತೆಗೆ ಮೊಟ್ಟೆಯನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ಕೋಳಿ ಮೊಟ್ಟೆಗಳನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಈ ಕಾರಣದಿಂದಾಗಿ ಬೆಳೆಯುತ್ತಿರುವ ಮಕ್ಕಳು ಅಥವಾ ಕ್ರೀಡಾಪಟುಗಳಿಗೆ ಮೊಟ್ಟೆಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮೊಟ್ಟೆಯ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ ಕೆಲವೊಮ್ಮೆ ಮೊಟ್ಟೆಗಳನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಮೊಟ್ಟೆಗಳೊಂದಿಗೆ ಎಂದಿಗೂ ಸೇವಿಸಬಾರದ ಕೆಲವು ಪದಾರ್ಥಗಳಿವೆ. ಒಂದು ವೇಳೆ ನೀವು ಮೊಟ್ಟೆಯೊಂದಿಗೆ ಈ ಪದಾರ್ಥಗಳನ್ನು ಸೇವಿಸಿದ್ರೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತೀರಿ. ಮೊಟ್ಟೆಯ ಜೊತೆಗೆ ಯಾವ ಯಾವ ಪದಾರ್ಥಗಳನ್ನು ತಿನ್ನಬಾರದು ಎಂದು ತಿಳಿಯಿರಿ.
ಮೊಟ್ಟೆಯೊಂದಿಗೆ ಯಾವ ಪದಾರ್ಥ ತಿನ್ನಬಾರದು?
ಮೊಟ್ಟೆಯೊಂದಿಗೆ ಸೋಯಾ ಉತ್ಪನ್ನ: ಆರೋಗ್ಯ ತಜ್ಞರ ಪ್ರಕಾರ ಮೊಟ್ಟೆಯ ಹೊರತಾಗಿ ಪ್ರೋಟೀನ್ ಹೇರಳವಾಗಿ ಕಂಡುಬರುವ ಇನ್ನೂ ಅನೇಕ ಆಹಾರಗಳಿವೆ. ಇವುಗಳಲ್ಲಿ ಸೋಯಾಬೀನ್ ಮತ್ತು ಸೋಯಾ ಉತ್ಪನ್ನಗಳು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಮೊಟ್ಟೆಯ ಜೊತೆಗೆ ಸೋಯಾ ಆಹಾರಗಳನ್ನು ಸೇವಿಸಿದರೆ ದೇಹದಲ್ಲಿ ಪ್ರೋಟೀನ್‌ನ ಪ್ರಮಾಣವು ಅಗತ್ಯಕ್ಕಿಂತ ಹೆಚ್ಚಾಗುತ್ತದೆ. ಅದನ್ನು ನಮ್ಮ ದೇಹವು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮ ಆರೋಗ್ಯ ಹಾಳಾಗಬಹುದು.
ಇದನ್ನೂ ಓದಿ: ಈ ಬೆಳೆಯಲ್ಲಿ ಅಡಗಿದ ಡೈಬೀಟಿಸ್ ಗೆ ಪಕ್ಕಾ ಚಿಕಿತ್ಸೆ, ಮಧುಮೇಹ ನಿಯಂತ್ರಣಕ್ಕೆ ಈ ರೀತಿ ಸೇವಿಸಿ!
ಮೊಟ್ಟೆಯೊಂದಿಗೆ ಬಾಳೆಹಣ್ಣು: ಫಿಟ್ ಆಗಿರಲು ಪ್ರತಿದಿನ ಬಾಳೆಹಣ್ಣು ತಿನ್ನಲು ಸಲಹೆ ನೀಡಲಾಗುತ್ತದೆ. ಇದು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಅದೇ ರೀತಿ ಮೊಟ್ಟೆ ಕೂಡ ಸೂಪರ್ ಫುಡ್ ಆಗಿದೆ. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನಬಾರದು. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ನೀವು ಎರಡೂ ಪದಾರ್ಥಗಳನ್ನು ತಿನ್ನಬೇಕಿದ್ದರೆ, ಅವುಗಳ ನಡುವೆ ಕನಿಷ್ಠ 2 ಗಂಟೆಗಳ ಅಂತರವಿರಬೇಕು.
ಮೊಟ್ಟೆಯೊಂದಿಗೆ ಸಿಹಿತಿಂಡಿ: ಮೊಟ್ಟೆಗಳೊಂದಿಗೆ ಸಿಹಿತಿಂಡಿಗಳು ಅಥವಾ ಯಾವುದೇ ಹೆಚ್ಚಿನ ಸಕ್ಕರೆ ಆಹಾರಗಳನ್ನು ತಿನ್ನುವುದು ಸರಿಯಲ್ಲ. ಹೀಗೆ ಮಾಡುವುದರಿಂದ ಹೊಟ್ಟೆನೋವು ಉಂಟಾಗುತ್ತದೆ. ನೀವು ಎರಡೂ ಪದಾರ್ಥಗಳನ್ನು ತಿನ್ನಲು ಬಯಸಿದರೆ, ಒಂದೊಂದಾಗಿ ತಿನ್ನಿರಿ. ಒಂದು ಪದಾರ್ಥ ತಿಂದ ಕನಿಷ್ಠ 1 ಗಂಟೆಯ ನಂತರ ಇನ್ನೊಂದು ಪದಾರ್ಥವನ್ನು ಸೇವಿಸುವುದು ಉತ್ತಮ. ಇದರಿಂದ ನಿಮ್ಮ ದೇಹವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ.
ಇದನ್ನೂ ಓದಿ: World Heart Day 2023: ಈ 5 ವೈದ್ಯಕೀಯ ಪರೀಕ್ಷೆಗಳು ಹೃದಯ ಸಮಸ್ಯೆ ಪತ್ತೆಹಚ್ಚಲು ಸಹಕಾರಿ
ಮೊಟ್ಟೆಯೊಂದಿಗೆ ಚಹಾ-ಕಾಫಿ ಕುಡಿಯುವುದು: ವೈದ್ಯರ ಪ್ರಕಾರ ಮೊಟ್ಟೆಯೊಂದಿಗೆ ಚಹಾ ಮತ್ತು ಕಾಫಿಯಂತಹ ಹೆಚ್ಚಿನ ಕೆಫೀನ್ ಪದಾರ್ಥಗಳನ್ನು ಸೇವಿಸಬಾರದು. ಇದಕ್ಕೆ ಕಾರಣವೆಂದರೆ ಹೆಚ್ಚಿನ ಕೆಫೀನ್ ಅಂಶವಿರುವ ಆಹಾರಗಳು ಮೊಟ್ಟೆಯಿಂದ ಒದಗಿಸುವ ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಹೊಟ್ಟೆನೋವು ಮತ್ತು ಅಜೀರ್ಣವನ್ನು ಸಹ ಎದುರಿಸಬೇಕಾಗುತ್ತದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.