ಟೊಮೇಟೊ ಐಸ್ ಕ್ಯೂಬ್‌ನಿಂದ ಕೇವಲ 15 ನಿಮಿಷಗಳಲ್ಲಿ ಫೇರ್ ಸ್ಕಿನ್..! ಹೀಗೆ ಮಾಡಿ

Glowing Skin tips : ಅನೇಕ ಜನರು ಫೇರ್ ಸ್ಕಿನ್ ಪಡೆಯಲು ವಿವಿಧ ರೀತಿಯ ರಾಸಾಯನಿಕಗಳನ್ನು, ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರ ಬದಲಿಗೆ ಟೊಮೆಟೊ ಐಸ್ ಕ್ಯೂಬ್ ಗಳನ್ನು ಬಳಸಿ ನೈಸರ್ಗಿಕವಾಗಿ ಉತ್ತಮ ಫಲಿತಾಂಶ ಪಡೆಯಬಹುದು.. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Sep 28, 2023, 08:22 PM IST
  • ಸೂರ್ಯನ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮವು ಸುಕ್ಕಾಗುತ್ತದೆ.
  • ಫೇರ್ ಸ್ಕಿನ್ ಪಡೆಯಲು ವಿವಿಧ ರೀತಿಯ ರಾಸಾಯನಿಕಗಳನ್ನು, ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ.
  • ಟೊಮೇಟೊ ಐಸ್ ಕ್ಯೂಬ್ ಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಫೇರ್ ಸ್ಕಿನ್ ಪಡೆಯಬಹುದು.
ಟೊಮೇಟೊ ಐಸ್ ಕ್ಯೂಬ್‌ನಿಂದ ಕೇವಲ 15 ನಿಮಿಷಗಳಲ್ಲಿ ಫೇರ್ ಸ್ಕಿನ್..! ಹೀಗೆ ಮಾಡಿ title=

Home made skin glow : ಸೂರ್ಯನ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮವು ಸುಕ್ಕಾಗುತ್ತದೆ. ಹೊಳಪು ಕಡಿಮೆಯಾಗುತ್ತದೆ.. ಹಲವು ರೀತಿಯ ತ್ವಚೆಯ ಸಮಸ್ಯೆಗಳು ಬರುತ್ತಿವೆ. ವಿಶೇಷವಾಗಿ ಹಗಲಿನಲ್ಲಿ ಹೊರಗೆ ಹೋಗುವ ಮಹಿಳೆಯರಲ್ಲಿ ಡೆಡ್‌ ಸ್ಕಿನ್‌ ಮತ್ತು ಟ್ಯಾನಿಂಗ್ ನಂತಹ ಚರ್ಮದ ಸಮಸ್ಯೆಗಳು ಕಂಡುಬರುತ್ತವೆ. 

ಅನೇಕ ಜನರು ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ವಿವಿಧ ತ್ವಚೆ ಉತ್ಪನ್ನಗಳನ್ನು ಬಳಸುತ್ತಾರೆ. ಆದರೂ, ಯಾವುದೇ ಫಲಿತಾಂಶಗಳನ್ನು ಪಡೆಯಲಾಗುವುದಿಲ್ಲ. ಇವುಗಳ ಬದಲಿಗೆ ಯಾವುದೇ ಖರ್ಚಿಲ್ಲದೆ ಟೊಮೇಟೊ ಐಸ್ ಕ್ಯೂಬ್ ಗಳನ್ನು ಬಳಸಿ ಫೇರ್ ಸ್ಕಿನ್ ಪಡೆಯುವುದಲ್ಲದೆ, ಎಲ್ಲಾ ರೀತಿಯ ತ್ವಚೆಯ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಬನ್ನಿ ಈ ಐಸ್ ಕ್ಯೂಬ್ ತಯಾರಿಸುವುದು ಹೇಗೆ ಎಂದು ತಿಳಿಯೋಣ. 

ಟೊಮೆಟೊ ಐಸ್ ಕ್ಯೂಬ್‌ಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು

  • 2 ಟೊಮ್ಯಾಟೊ 
  • 1 ಚಮಚ ಜೇನುತುಪ್ಪ 
  • ನೀರು

ಟೊಮೇಟೊ ಐಸ್ ಕ್ಯೂಬ್ ಗಳನ್ನು ಮಾಡುವ ವಿಧಾನ

  • ಈ ಐಸ್ ಕ್ಯೂಬ್ ಗಳನ್ನು ತಯಾರಿಸಲು ನೀವು ಮೊದಲು 2 ಮಾಗಿದ ಟೊಮೇಟೊಗಳನ್ನು ತೆಗೆದುಕೊಳ್ಳಬೇಕು. 
  • ಅವುಗಳನ್ನು ಮಿಕ್ಸಿಗೆ ಹಾಕಿ ಮೃದುವಾದ ಪೇಸ್ಟ್ ಮಾಡಿ.
  • ಅದಕ್ಕೆ 1 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ
  • ಈ ಮಿಶ್ರಣವನ್ನು ಐಸ್ ಮೋಲ್ಡ್‌ಗಳಲ್ಲಿ ಹಾಕಿ 2 ರಿಂದ 3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ.

ಟೊಮೆಟೊ ಐಸ್ ಕ್ಯೂಬ್ ಗಳನ್ನು ಹಚ್ಚುವ ವಿಧಾನ

  • ಟೊಮೇಟೊ ಐಸ್ ಕ್ಯೂಬ್ ಗಳನ್ನು ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾದ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
  • ಅದರ ನಂತರ ಸಿದ್ಧಪಡಿಸಿದ ಐಸ್‌ ಕ್ಯೂಬ್‌ ಅನ್ನು ಮುಖದ ಮೇಲೆ ಅನ್ವಯಿಸಬೇಕು. 
  • ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ 
  • ಈ ಕ್ಯೂಬ್‌ಗಳನ್ನು ವಾರಕ್ಕೆ 1 ರಿಂದ 2 ಬಾರಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News