ಒಡೆದ ಹಾಲನ್ನು ಎಸೆಯುವ ಮುನ್ನ ಅದರ ಉಪಯೋಗ ತಿಳಿಯಿರಿ
ಹಾಲನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆರೋಗ್ಯದ ಜೊತೆಗೆ ಹಾಲು ಚರ್ಮಕ್ಕೆ (benefits of sour milk) ಕೂಡಾ ಬಹಳ ಉಪಯುಕ್ತವಾಗಿದೆ.
ನವದೆಹಲಿ : ಹಾಲನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಹಾಲು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆರೋಗ್ಯದ ಜೊತೆಗೆ ಹಾಲು ಚರ್ಮಕ್ಕೆ (benefits of sour milk) ಕೂಡಾ ಬಹಳ ಉಪಯುಕ್ತವಾಗಿದೆ. ಕೆಲವೊಮ್ಮೆ ಮನೆಗೆ ತಂದಿರುವ ಹಾಲು ಒಡೆದು ಹೋಗುತ್ತದೆ. ಹಾಲು ಒಡೆದಿದೆ ಎಂದಾಕ್ಷಣ ಅದನ್ನು ಎಸೆಯುವವರೇ ಹೆಚ್ಚು. ಆದರೆ ಒಡೆದಿರುವ ಹಾಲನ್ನು ಕೂಡಾ ಈ ರೀತಿಯಾಗಿ ಬಳಸಿಕೊಳ್ಳಬಹುದು. ಒಡೆದ ಹಾಲಿನಿಂದ ಮನೆಯಲ್ಲಿಯೇ ಪನೀರ್ (Paneer) ತಯಾರಿಸಬಹುದು. ಅಲ್ಲದೆ ಅದರ ನೀರು ಬಹಳ ಪ್ರಯೋಜನಕಾರಿಯಾಗಿದೆ. ಒಡೆದ ಹಾಲಿನ ನೀರು ಚರ್ಮದ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದೆ. ಈ ನೀರಿನಿಂದ ನೈಟ್ ಸೀರಮ್ ತಯಾರಿಸಬಹುದು.
ಒಡೆದ ಹಾಲಿನಿಂದ ನೈಟ್ ಸಿರಮ್ ತಯಾರಿಸುವುದು ಹೇಗೆ ?
ಇದಕ್ಕಾಗಿ, ಒಡೆದ ಹಾಲನ್ನು ಫಿಲ್ಟರ್ ಮಾಡಿ, ನೀರನ್ನು (water) ಬೇರ್ಪಡಿಸಿ. ಈಗ ಬೇರ್ಪಡಿಸಿದ ನೀರಿಗೆ 1 ಚಮಚ ಗ್ಲಿಸರಿನ್, ಒಂದು ಚಿಟಿಕೆ ಅರಿಶಿನ (turmeric) ಮತ್ತು ಒಂದು ಚಿಟಿಕೆ ಉಪ್ಪು (salt) ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಹೀಗೆ ತಯಾರಿಸಿದ ಮಿಶ್ರಣವನ್ನು ಗಾಜಿನ ಬಾಟಲಿಯಲ್ಲಿ ತುಂಬಿಸಿ ಫ್ರಿಜ್ ನಲ್ಲಿಡಿ. ಇಷ್ಟು ಮಾಡಿದರೆ, ನಿಮ್ಮ ರಾತ್ರಿ ಸಿರಮ್ ಸಿದ್ಧವಾಗುತ್ತದೆ.
ಇದನ್ನೂ ಓದಿ : Remedies For Dark Circles: ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ಈ ಉಪಾಯ ಮಾಡಿ
ಒಡೆದ ಹಾಲಿನ ಸಿರಮ್ ಬಳಕೆ ಹೇಗೆ ?
ಸಿರಮ್ ಬಳಸುವ ಮುನ್ನ ಮೊದಲು ಫೇಸ್ ವಾಶ್ ನಿಂದ (Face was) ಮುಖವನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಹತ್ತಿಯ ಸಹಾಯದಿಂದ, ಸಿರಮ್ ಅನ್ನು ಮುಖದ ಮೇಲೆ ಹಚ್ಚಿ. ನಂತರ ಹಗುರವಾಗಿ, ಮಸಾಜ್ ಮಾಡಿ. ಮಸಾಜ್ ಮಾಡಿದ ನಂತರ ರಾತ್ರಿಯಿಡಿ ಹಾಗೆಯೇ ಬಿಡಿ. ನಂತರ ಬೆಳಗ್ಗೆ ಮುಖವನ್ನು ಸ್ವಚ್ಛಗೊಳಿಸಿ.
ಒಡೆದ ಹಾಲಿನಿಂದ ನೈಟ್ ಸಿರಮ್ ಪ್ರಯೋಜನಗಳು :
-ಇದು ಚರ್ಮವನ್ನು (Skin care) ಆಳವಾಗಿ ಪೋಷಿಸುತ್ತದೆ.
- ಡೆಡ್ ಸೆಲ್ ಗಳನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ.
-ಕಲೆಗಳು, ಮೊಡವೆಗಳು (Pimple), ಮಚ್ಚೆಗಳು, ಡಾರ್ಕ್ ಸರ್ಕಲ್ ಇತ್ಯಾದಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ಚರ್ಮವನ್ನು ಮೋಯಿಸ್ಚರ್ ಮಾಡುತ್ತದೆ
ಇದನ್ನೂ ಓದಿ : Monsoon Food Tips : ಮಳೆಗಾಲದಲ್ಲಿ ಸೇವಿಸಬಾರದವು ಈ ಹಸಿರು ತರಕಾರಿಗಳನ್ನು : ಯಾಕೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.