Remedies For Dark Circles: ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ಈ ಉಪಾಯ ಮಾಡಿ

Remedies For Dark Circles: ದೇಹದ ಕಳಪೆ ಮಟ್ಟದ  ಜೀರ್ಣಕ್ರಿಯೆಯಿಂದಾಗಿ, ಹಲವು ಬಾರಿ ಮುಖದ ಮೇಲೆ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ನೀವು ಅದನ್ನು ತೊಡೆದುಹಾಕಬಹುದು.

Written by - Nitin Tabib | Last Updated : Aug 29, 2021, 01:57 PM IST
  • ಹಾಲು-ಬಾದಾಮಿ ಶೇಕ್ ನೀಡುತ್ತೆ ಪರಿಹಾರ.
  • ಸೂರ್ಯಕಾಂತಿಯ ಬೀಜಗಳಿಂದ ಕಪ್ಪು ವರ್ತುಲ ನಿವಾರಣೆಯಾಗುತ್ತವೆ
  • ಆಹಾರದಲ್ಲಿ ಹಸಿರು ತರಕಾರಿಯನ್ನು ಹೆಚ್ಚಿಗೆ ಬಳಸಿ
Remedies For Dark Circles: ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಗೆ ಈ ಉಪಾಯ ಮಾಡಿ title=
How To Get Rid Of Dark Circles (File Photo)

ನವದೆಹಲಿ: Remedies For Dark Circles - ಸುಂದರವಾಗಿ ಕಾಣಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಆದರೆ ಹಲವು ಬಾರಿ ಇದು ಸಂಭವಿಸದಿದ್ದಾಗ ಜನರು ಖಿನ್ನತೆಗೆ ಒಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಗುಡ್ ಲುಕ್ಸ್  ಅಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮೊಬೈಲ್ ಮತ್ತು ಲ್ಯಾಪ್ ಟಾಪ್ ನಲ್ಲಿ ಗಂಟೆಗಟ್ಟಲೆ ಕೆಲಸ ಮಾಡುವುದರಿಂದ, ಜನರ ಕಣ್ಣುಗಳ ಸುತ್ತ ಕಪ್ಪು ವರ್ತುಲ (Dark Circles) ಕಾಣಿಸಿಕೊಳ್ಳಲು ಆರಂಭಿಸುತ್ತದೆ.  ನಿಮಗೂ ಈ ಸಮಸ್ಯೆ ಇದ್ದರೆ, ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಕಪ್ಪು ವರ್ತುಲಗಳನ್ನು ಹೋಗಲಾಡಿಸಬಹುದು.

ಕಡಲೆಕಾಯಿ ಕಪ್ಪು ವರ್ತುಲದಿಂದ ಪರಿಹಾರ ಒದಗಿಸುತ್ತದೆ
ನೆಲಗಡಲೆ ಮುಖದ ಮೇಲಿನ ಕಪ್ಪು ವರ್ತುಲಗಳನ್ನು ತೆಗೆದುಹಾಕುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಹೆಚ್ಚಿನ ಜನರು ಚಳಿಗಾಲದಲ್ಲಿ ಕಡಲೆಕಾಯಿಯನ್ನು ತಿನ್ನುತ್ತಾರೆ. ಇದು ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಆದರೆ ಬೇಸಿಗೆ ಕಾಲದಲ್ಲಿಯೂ ನೀವು ಕಡಲೆಕಾಯಿಯನ್ನು ಸಣ್ಣ ಪ್ರಮಾಣದಲ್ಲಿ ತಿನ್ನಬಹುದು. ಈ ಕಾರಣದಿಂದಾಗಿ, ದೇಹದಲ್ಲಿ ರಕ್ತದ ಹರಿವು ವೇಗವಾಗುತ್ತದೆ ಮತ್ತು ಜೀವಕೋಶಗಳು ತ್ವರಿತವಾಗಿ ದುರಸ್ತಿಗೊಳ್ಳುತ್ತವೆ.

ಪಪ್ಪಾಯಿ ಸೇವನೆಯಿಂದ ಮಾಯವಾಗುತ್ತವೆ ಈ ಕಪ್ಪು ಕಲೆಗಳು
ಪಪ್ಪಾಯಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದು ಮುಖದ ಮೇಲಿನ  ಕಪ್ಪು ವರ್ತುಲಗಳನ್ನು ಸುಲಭವಾಗಿ ನಿವಾರಿಸುತ್ತದೆ.  ಕಳಪೆ ಜೀರ್ಣಕ್ರಿಯೆಯಿಂದಾಗಿ, ಮುಖದ ಮೇಲೆ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಪಪ್ಪಾಯಿ ವಿಟಮಿನ್ A ಮತ್ತು ವಿಟಮಿನ್ C ಆಗರವಾಗಿದೆ.

ಬಾದಾಮಿ ಮತ್ತು ಹಾಲು ಸೇವನೆಯಿಂದ ಕಪ್ಪು ಕಲೆ ಮಾಯವಾಗುತ್ತವೆ
ಬಾದಾಮಿ ಆರೋಗ್ಯಕ್ಕೆ (Health Tips) ತುಂಬಾ ಒಳ್ಳೆಯದು. ನಿಮ್ಮ ಮುಖದಲ್ಲಿ ಕಪ್ಪು ವರ್ತುಲಗಳಿದ್ದರೆ,  ನಿತ್ಯ ಬೆಳಗ್ಗೆ ಅಥವಾ ಮಧ್ಯಾಹ್ನ 1 ಗ್ಲಾಸ್ ಹಾಲು ಕುಡಿಯಿರಿ (Milk-Badam Shake) ಮತ್ತು 20 ಬಾದಾಮಿಗಳನ್ನು  ಸೇವಿಸಿ. ಬಾದಾಮಿಯನ್ನು ನೇರವಾಗಿ ತಿನ್ನಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಹಾಲಿನಲ್ಲಿ ಬಾದಾಮಿ ಪುಡಿ ಹಾಗೂ ಜೇನುತುಪ್ಪವನ್ನು ಬೆರೆಸಿ ಸೇವಿಸಿ.

ಬೀಟ್ ರೂಟ್ ಸೇವನೆಯಿಂದ ಮುಖ ಕಾಂತಿಯುತವಾಗುತ್ತದೆ
ಬೀಟ್ ರೂಟ್ ನಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಖನಿಜಾಂಶಗಳು ಮತ್ತು ವಿಟಮಿನ್ ಗಳು ಹೇರಳ ಪ್ರಮಾಣದಲ್ಲಿವೆ. ಬೀಟ್ರೂಟ್ ತಿನ್ನುವುದರಿಂದ ಮುಖದ ಮೇಲಿನ ಕಪ್ಪು ಕಲೆ ನಿವಾರಣೆಯಾಗುತ್ತವೆ. ಆದರೆ ಬಹುತೇಕ ಜನರಿಗೆ ಬೀಟ್ರೂಟ್ ರುಚಿಯನ್ನು ಇಷ್ಟವಾಗುವುದಿಲ್ಲ. ಹೀಗಾಗಿ ಅವರು ಕ್ಯಾರೆಟ್, ದಾಳಿಂಬೆ ಮತ್ತು ಟೊಮೆಟೊ ಜೊತೆ ಬೀಟ್ ಜ್ಯೂಸ್ ಕುಡಿಯಬಹುದು ಅಥವಾ ಬೀಟ್ ರೂಟ್ ಅನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು.

ಇದನ್ನೂ ಓದಿ-Stretch Marks Removal: ಸ್ಟ್ರೆಚ್ ಮಾರ್ಕ್ಸ್ ತೆಗೆಯಲು ಬಹಳ ಸಹಕಾರಿ ಈ 4 ವಸ್ತುಗಳು

ಮುಖದ ಮೇಲಿನ ಕಪ್ಪು ವರ್ತುಲಗಳ ನಿವಾರಣೆಗೆ ಸೂರ್ಯಕಾಂತಿ ಬೀಜ ಸೇವಿಸಿ (Home Remedies)
ಸೂರ್ಯಕಾಂತಿ ಬೀಜಗಳು ಮುಖದ ಮೇಲಿನ ಕಪ್ಪು ವರ್ತುಲಗಳನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿವೆ. ಇವು  ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅರ್ಧ ಕಪ್ ಸೂರ್ಯಕಾಂತಿ ಬೀಜಗಳನ್ನು ದಿನಕ್ಕೆ ಒಮ್ಮೆ ತಿನ್ನಿರಿ. ಇದರೊಂದಿಗೆ, ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಿರಿ. ಹೀಗೆ ಮಾಡುವುದರಿಂದ ನೀವು ಕಪ್ಪು ವರ್ತುಲಗಳನ್ನು ಹೋಗಲಾಡಿಸಬಹುದು.

ಇದನ್ನೂ ಓದಿ-Weight Loss: ಎಲ್ಲಾ ಪ್ರಯತ್ನಗಳ ಬಳಿಕವೂ ತೂಕ ಇಳಿಯುತ್ತಿಲ್ಲವೇ, ಈಗಲೇ ಎಚ್ಚೆತ್ತುಕೊಳ್ಳಿ

ಹಸಿರು ತರಕಾರಿ ಸೇವನೆಯಿಂದ ಕಪ್ಪುವರ್ತುಲಗಳು ಮಾಯವಾಗುತ್ತವೆ (How To Get Rid Of Dark Circles)
ಪ್ರತಿಯೊಂದು ಋತುವಿನಲ್ಲಿ  ವಿವಿಧ ರೀತಿಯ ಹಸಿರು ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅವುಗಳಲ್ಲಿ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿರುತ್ತವೆ. ಹಸಿರು ತರಕಾರಿಗಳು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ಮುಖದ ಮೇಲಿನ ಕಪ್ಪು ವರ್ತುಲಗಳು ಮಾಯವಾಗುತವೆ.

(ಸೂಚನೆ - ಇಲ್ಲಿ ನೀಡಲಾಗಿರುವ ಮಾಹಿತಿ, ಮನೆ ಉಪಾಯಗಳು ಹಾಗೂ ಸಾಮಾನ್ಯ ನಂಬಿಕೆಗಳನ್ನು ಆಧರಿಸಿವೆ. ಇವುಗಳನ್ನು ಅನುಸರಿಸುವ ಮುನ್ನ ನುರಿತ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಉಪಾಯಗಳನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Monsoon Food Tips : ಮಳೆಗಾಲದಲ್ಲಿ ಸೇವಿಸಬಾರದವು ಈ ಹಸಿರು ತರಕಾರಿಗಳನ್ನು : ಯಾಕೆ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News