Black Carrot Benefits: ಚಳಿಗಾಲ ಮತ್ತು ಬಿಸಿ ಬಿಸಿ ಹಲ್ವಾ... ಹೌದು, ಗಜ್ಜರಿ ಹಲ್ವಾ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ? ಚಳಿಗಾಲ ಬಂತೆಂದರೆ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಜ್ಜರಿ ಬರಲಾರಂಭಿಸುತ್ತದೆ. ಈ ಋತುವಿನಲ್ಲಿ, ಹೆಚ್ಚಿನ ಜನರು ಕ್ಯಾರೆಟ್ ಹಲ್ವಾ ಅನ್ನು ತಿನ್ನಲು ಇಷ್ಟಪಡುತ್ತಾರೆ, ಏಕೆಂದರೆ ಕ್ಯಾರೆಟ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ನೀವು ಸಾಮಾನ್ಯ ಅಂದರೆ ಕೆಂಪು ಕ್ಯಾರೆಟ್ ಬದಲಿಗೆ ಕಪ್ಪು ಕ್ಯಾರೆಟ್ ಹಲ್ವಾ ಸೇವಿಸಿದರೆ ಹೇಗೆ? ಈಗ ನೀವು ಸ್ವಲ್ಪ ಹಿಂದೇಟು ಹಾಕಬಹುದು. ಆದರೆ ಕೆಂಪು ಕ್ಯಾರೆಟ್ ಸೇವನೆಯಿಂದ ಸಿಗುವ ಲಾಭಗಳ ಹಲವು ಪಟ್ಟು ಹೆಚ್ಚು ಲಾಭವನ್ನು ನೀವು ಕಪ್ಪು ಕ್ಯಾರೆಟ್ ನಿಂದ ಸಿಗುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ನಿಮಗೆ ಎಲ್ಲಾದರೂ ಕಪ್ಪು ಕ್ಯಾರೆಟ್ ಕಂಡರೆ ತಕ್ಷಣ ಅದನ್ನು ಖರೀದಿಸಿ. ಏಕೆಂದರೆ ಅದರಿಂದ ನೀವು ಪಡೆಯುವ ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.


COMMERCIAL BREAK
SCROLL TO CONTINUE READING

ಕಪ್ಪು ಕ್ಯಾರೆಟ್ನ ಪ್ರಯೋಜನಗಳು
ಆರೋಗ್ಯಕರ ಜೀರ್ಣಕ್ರಿಯೆ

ನೀವು ಕೆಂಪು ಕ್ಯಾರೆಟ್‌ಗಳ ಬದಲಿಗೆ ಕಪ್ಪು ಕ್ಯಾರೆಟ್‌ಗಳನ್ನು ಸೇವಿಸಿದರೆ, ನಿಮ್ಮ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ಏಕೆಂದರೆ ಇದು ಹೇರಳ ಪ್ರಮಾಣದ ಫೈಬರ್ ನಿಂದ ಸಮೃದ್ಧವಾಗಿದೆ. ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಮುಂತಾದ ಜೀರ್ಣಕಾರಿ ಸಮಸ್ಯೆಗಳಿಗೆ ಇದು ಸಹಾಯಕವಾಗಿದೆ.


ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು
ಕಪ್ಪು ಕ್ಯಾರೆಟ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಆಂಥೋಸಯಾನಿನ್‌ಗಳಿವೆ. ಇದರಿಂದಾಗಿ ಕ್ಯಾನ್ಸರ್ ಕೋಶಗಳು ಬೆಳೆಯುವುದಿಲ್ಲ ಮತ್ತು ದೇಹದಲ್ಲಿ ಇದರಿಂದ ಉರಿಯೂತವೂ ಕಡಿಮೆಯಾಗುತ್ತದೆ. ಹೀಗಾಗಿ ನೀವು ಈ ಚಳಿಗಾಲದಲ್ಲಿ ಕಪ್ಪು ಕ್ಯಾರೆಟ್ ಅನ್ನು ಟ್ರೈ ಮಾಡಬಹುದು.


ಹೃದಯದ ಆರೋಗ್ಯ
ಕಪ್ಪು ಕ್ಯಾರೆಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಇದು ಹೃದಯದಲ್ಲಿ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಪ್ಲೇಟ್ಲೆಟ್ಗಳ ಕೆಲಸವನ್ನು ಸಹ  ಇದು ಸುಧಾರಿಸುತ್ತದೆ. ಅಂತಹ ಕೆಲವು ಪೋಷಕಾಂಶಗಳು ಕಪ್ಪು ಕ್ಯಾರೆಟ್‌ನಲ್ಲಿವೆ, ಇದು ರಕ್ತನಾಳಗಳಿಗೆ ವಿಶ್ರಮಿಸಲು ಸಹಾಯ ಮಾಡುತ್ತದೆ. ನೀವು ಬಯಸಿದರೆ, ನೀವು ಬೆಳಗ್ಗೆ ಕಪ್ಪು ಕ್ಯಾರೆಟ್ ರಸವನ್ನು ಕುಡಿಯಬಹುದು. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.


ಇದನ್ನೂ ಓದಿ-ಮಧುಮೇಹಿಗಳು ಮನೆಯಲ್ಲಿಯೇ ಬೆಳೆಸಬಹುದು ಈ ಇನ್ಸುಲಿನ್ ಸಸ್ಯ, ನೀಡುತ್ತೆ ಹಲವು ಲಾಭಗಳು


ಉತ್ತಮ ದೃಷ್ಟಿ
ಕೆಂಪು ಕ್ಯಾರೆಟ್ ತಿನ್ನುವುದರಿಂದ ಅದು ಕಣ್ಣುಗಳಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ, ಕಪ್ಪು ಕ್ಯಾರೆಟ್ ಕೂಡ ದೃಷ್ಟಿಗೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಗ್ಲುಕೋಮಾ ಮತ್ತು ರೆಟಿನಾದ ಉರಿಯೂತದಿಂದ ಬಳಲುತ್ತಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ನೀವು ನಿಯಮಿತವಾಗಿ ಕಪ್ಪು ಕ್ಯಾರೆಟ್ ಅನ್ನು ಸೇವಿಸಿದರೆ, ಕಣ್ಣುಗಳಿಗೆ ರಕ್ತದ ಹರಿವು ಸರಿಯಾಗಿರುತ್ತದೆ.


ಇದನ್ನೂ ಓದಿ-ನೀವು ಆರೋಗ್ಯಕರ ಪದ್ಧತಿಯಲ್ಲಿ ನೀರು ಕುಡಿಯುತ್ತೀರಾ? ಈ ಬೇಸಿಕ್ ನಿಯಮಗಳು ನಿಮಗೆ ಗೊತ್ತಿರಲಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.