ಆತಂಕವನ್ನು ಮರೆಮಾಚುವುದು ಮಾನಸಿಕ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ..?
Anxiety : ಆತಂಕ ಸಾಮಾನ್ಯವಾಗಿ ಎಲ್ಲರನ್ನು ಒಂದಲ್ಲ ಒಮ್ಮೆ ಕಾಡುವ ಮಾನಸಿಕ ಸಮಸ್ಯೆ. ಈ ಸಮಸ್ಯೆಗೆ ಇಂತಹದೇ ಆದ ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಕೆಲವು ಇದನ್ನು ಅನಿವಾರ್ಯ ಕಾರಣಗಳಿಂದ ಮುಚ್ಚಿಡುತ್ತಾರೆ. ನೋವನ್ನು ಮರೆಮಾಚಲು ಕೆಲವು ಜನ ತಾವು ಏನು ಆಗಿಲ್ಲ ಎನ್ನುವ ರೀತಿಯಲ್ಲಿ ನಗುತ್ತಿರುತ್ತಾರೆ.
Mental Health : ಮನುಷ್ಯನಿಗೆ ಆತಂಕವೆನ್ನುವುದು ಸಹಜ ಸ್ಥಿತಿ. ಆದರೆ ಅದನ್ನು ಮರೆಮಾಚುವುದು ಕಷ್ಟದ ಸಂಗತಿ. ನಮ್ಮ ಮನದ ಭಾವನೆಗಳು, ಕಷ್ಟ ಸುಖವನ್ನು ನಾವು ಇತರರೊಂದಿಗೆ ಹಂಚಿಕೊಳ್ಳಲು ಸಾಧ್ಯವೇ ಇಲ್ಲವೆಂದಾಗ ಅದನ್ನು ಮುಚ್ಚಿಡಲು ಪ್ರಯತ್ನಿಸುತ್ತೇವೆ. ಆದರೆ ಎಲ್ಲಾ ಸಂದರ್ಭದಲ್ಲೂ ಆತಂಕವನ್ನು ಮುಚ್ಚಿಡಲು ಸಾಧ್ಯವಿಲ್ಲ.
ಒಬ್ಬರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಅವರೊಂದಿಗೆ ಮಾತನಾಡಲೇ ಬೇಕು ಎಂದೇನಿಲ್ಲ. ಅವರ ಮುಖ ಲಕ್ಷಣಗಳು ಅವರ ಹಾವ ಭಾವಗಳೇ ಸಾಕು. ಮನೋ ಚಿಕಿತ್ಸಕರ ಪ್ರಕಾರ ಆತಂಕವನ್ನು ಮರೆಮಾಚುವುದು ಜೀವನದಲ್ಲಿ ಹಲವು ರೀತಿಯ ಪರಿಣಾಮಗಳಿಗೆ ಕಾರಣವಾಗಬಹುದು. ನಮ್ಮ ಆತಂಕ ಇತರರಿಗೆ ಗೊತ್ತಾಗಬಾರದೆಂದು ನಾವು ಹರಸಾಹಸ ಪಡುತ್ತೇವೆ.
ಇದನ್ನೂ ಓದಿ-ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್‌ಗಳಿಗೆ ಚಿಕಿತ್ಸೆ ನೀಡಲು ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು
ಆದರೆ ಆತಂಕವನ್ನು ನಿಭಾಯಿಸುವುದು ಅದರ ಮೂಲ ಲಕ್ಷಣಗಳನ್ನು ತಿಳಿಯುವುದು ಎಲ್ಲರಿಗೂ ಅವಶ್ಯವಾದುದು ಏಕೆಂದರೆ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಕುಗ್ಗದೇ ಸಂತೋಷವಾದಾಗ ಹಿಗ್ಗದೇ ಇರಬೇಕು ಅದು ದೇಹದ ಆರೋಗ್ಯಕ್ಕು ಮಾನಸಿಕ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಹಾಗಾದರೆ ಆತಂಕವನ್ನು ಮರೆಮಾಚುವ ವಿಧಾನಗಳ ಬಗ್ಗೆ ತಿಳಿಯೋಣ ಬನ್ನಿ.
1. ನಾವು ಅನುಭವಿಸುತ್ತಿರುವ ನೋವನ್ನು ಮರೆಮಾಚಲು ಮತ್ತು ನಗಲು ಪ್ರಯತ್ನಿಸುವುದು ನಾವು ಹೊಂದಿರುವ ಆತಂಕದ ಭಾವನೆಗಳನ್ನು ಮರೆಮಾಚುವ ಒಂದು ಶ್ರೇಷ್ಠ ಮಾರ್ಗವಾಗಿದೆ.
2. ಸಾಮಾನ್ಯವಾಗಿ ನಮ್ಮ ಭಾವನೆಗಳ ಬಗ್ಗೆ ಮಾತನಾಡಲು ಭಯಪಡುತ್ತೇವೆ ಮತ್ತು ಮೌನವಾಗಿರಲು ಪ್ರಯತ್ನಿಸುತ್ತೇವೆ.
3. ಆತಂಕ ಸಂಭವಿಸಿದಾಗ ದೇಹದ ನರಗಳು ಬಿಗಿದಂತಾಗುತ್ತವೆ. ಇದರ ಜೊತೆಗೆ ಚಡಪಡಿಕೆ ಉಂಟಾಗುತ್ತದೆ. ಅದನ್ನು ನಿಯಂತ್ರಿಸುವ ಲಕ್ಷಣವನ್ನು ಕೆಲವರು ಹೊಂದಿರುತ್ತಾರೆ.
4. ಕೆಲವು ಆತಂಕದ ಭಾವನೆಗಳಿಗೆ ಸೋತು ಜನರಿಂದ ದೂರ ಉಳಿದು ಒಬ್ಬಂಟಿಯಾಗಿರಲು ಪ್ರಯತ್ನಿಸುತ್ತಾರೆ.
5. ಆತಂಕವನ್ನು ತೋರ್ಪಡಿಸಲು ಆಗದೆ ಇದ್ದವರು ತಮ್ಮ ಕೆಲಸದಲ್ಲಿ ಬ್ಯೂಸಿಯಾಗಿರುವಂತೆ ನಟಿಸುತ್ತಾರೆ.
6. ನಮ್ಮನ್ನು ಮಾನಸಿಕವಾಗಿ ಕುಗ್ಗಿಸುವ ಇನ್ನೊಂದು ವಿಚಾರವೆಂದರೆ ನಮ್ಮ ಭಾವನೆಗಳನ್ನು ಯಾರು ಹೀಯಾಳಿಸಿ ಬಿಡುತ್ತಾರೋ ಎನ್ನುವ ಭಯ.
ಇದನ್ನೂ ಓದಿ-Remedies For Headache: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ