ಬಿಪಿ ನಿಯಂತ್ರಣಕ್ಕೆ ಬಾಳೆಹಣ್ಣು: ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಪ್ರಯೋಜನಗಳಿವೆ ಎಂದು ನಿಮಗೆ ತಿಳಿದೇ ಇದೆ. ಆದರೆ ಬಾಳೆಹಣ್ಣು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ?  ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದರ ಸೇವನೆಯಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ  ಮೂಳೆಗಳು ಬಲವಾಗಿರುತ್ತವೆ. ಬೇಸಿಗೆಯಲ್ಲಿ ಬಾಳೆಹಣ್ಣನ್ನು ಶಕ್ತಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಕೆಲವರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಲು ಇಷ್ಟಪಡುತ್ತಾರೆ. ಹಾಗಾದರೆ ಬಾಳೆಹಣ್ಣು ತಿನ್ನುವುದರಿಂದ ಆಗುವ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ. 


COMMERCIAL BREAK
SCROLL TO CONTINUE READING

ಬಾಳೆಹಣ್ಣು ಬೇಗ ಹೊಟ್ಟೆ ತುಂಬಿಸುತ್ತದೆ:
ಬಾಳೆಹಣ್ಣಿನಲ್ಲಿ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳಿವೆ. ಇದನ್ನು ತಿಂದರೆ ಹೊಟ್ಟೆ ಬೇಗ ತುಂಬುತ್ತದೆ. ಬೆಳಿಗ್ಗೆ ಆಫೀಸ್ ಅಥವಾ ಕಾಲೇಜಿಗೆ ಹೋಗುವಾಗ ಬೆಳಗಿನ ಉಪಹಾರ ಸ್ಕಿಪ್ ಮಾಡಿದರೆ ಬಾಳೆಹಣ್ಣನ್ನಾದರೂ ತಿಂದು ಹೊರಡಿ. ಏಕೆಂದರೆ ಬಾಳೆಹಣ್ಣು ತಿಂದರೆ ತ್ವರಿತ ಶಕ್ತಿ ಬರುತ್ತದೆ. 


ಇದನ್ನೂ ಓದಿ- ನೈಸರ್ಗಿಕವಾಗಿ ಮೂಳೆಗಳನ್ನು ಬಲಪಡಿಸಲು ಈ ಟಿಪ್ಸ್ ಅನುಸರಿಸಿ


ಒತ್ತಡವನ್ನು ನಿವಾರಿಸಲು ಸಹಕಾರಿ:
ಒತ್ತಡವನ್ನು ನಿವಾರಿಸುವಲ್ಲಿ ಕೂಡ ಬಾಳೆಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಟ್ರಿಪ್ಟೊಫಾನ್ ಎಂಬ ಅಂಶವು ಬಾಳೆಹಣ್ಣಿನಲ್ಲಿ ಕಂಡುಬರುತ್ತದೆ. ಈ ಟ್ರಿಪ್ಟೊಫಾನ್‌ನಿಂದಾಗಿ ನಮ್ಮ ದೇಹದಲ್ಲಿ ಸಿರೊಟೋನಿನ್ ಉತ್ಪತ್ತಿಯಾಗುತ್ತದೆ. ಸಿರೊಟೋನಿನ್ ಅನ್ನು ಸಂತೋಷದ ಹಾರ್ಮೋನ್ ಎಂದೂ ಕರೆಯುತ್ತಾರೆ. ಇದು ಒತ್ತಡವನ್ನು ದೂರ ಇಡುತ್ತದೆ. 


ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ:
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಕೂಡ ಬಾಳೆಹಣ್ಣು  ತುಂಬಾ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಬಾಳೆಹಣ್ಣು  ಒಳಗೊಂಡಿರುವ ಪಿಷ್ಟವು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಮುಖ್ಯವಾದ ಉತ್ತಮ ಬ್ಯಾಕ್ಟೀರಿಯಾಗಳಿಗೆ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣು ಆ್ಯಸಿಡ್ ವಿರೋಧಿಯಾಗಿದೆ, ಆದ್ದರಿಂದ ನಿಮಗೆ ಎದೆಯುರಿ ಸಮಸ್ಯೆ ಇದ್ದರೆ, ಬಾಳೆಹಣ್ಣು ಸೇವಿಸುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. 


ಇದನ್ನೂ ಓದಿ- ಬೆಳಗಿನ ಉಪಾಹಾರಕ್ಕಾಗಿ 6 ಬಗೆಯ ಆರೋಗ್ಯಕರ ಚಟ್ನಿಗಳು!


ಮೂಳೆಗಳು ಬಲವಾಗಿರುತ್ತವೆ:
ಮೂಳೆಗಳನ್ನು ಬಲಪಡಿಸಲು ಬಾಳೆಹಣ್ಣನ್ನು ಸೇವಿಸಬೇಕು. 30 ನೇ ವಯಸ್ಸಿನ ಬಳಿಕ ಹೆಚ್ಚಿನ ಜನರು ಮೂಳೆಗಳಲ್ಲಿನ ನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಪ್ರತಿದಿನ ಒಂದು ಬಾಳೆಹಣ್ಣು ಸೇವಿಸುವುದು ನಿಮಗೆ ಪರಿಹಾರ ನೀಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.