ನೈಸರ್ಗಿಕವಾಗಿ ಮೂಳೆಗಳನ್ನು ಬಲಪಡಿಸಲು ಈ ಟಿಪ್ಸ್ ಅನುಸರಿಸಿ

                       

ಮೂಳೆಗಳನ್ನು ಬಲಪಡಿಸಲು ಈ ಸಲಹೆಗಳನ್ನು ತಪ್ಪದೇ ಅನುಸರಿಸಿ: ಜೀವನ ಶೈಲಿಯಲ್ಲಿನ ಬದಲಾವಣೆ ಹಾಗೂ ವಯೋಸಹಜತೆಯಿಂದಾಗಿ ಮೂಳೆಗಳು ದುರ್ಬಲಗೊಳ್ಳುವುದು ಸರ್ವೇ ಸಾಮಾನ್ಯ. ಆದರೆ, ನೀವು ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು. ಅಂತಹ ಕೆಲವು ಸಲಹೆಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೂಳೆಗಳು ಬಲವಾಗಿರಲು ಕ್ಯಾಲ್ಸಿಯಂ ಅಗತ್ಯ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗಾಗಿ, ಕ್ಯಾಲ್ಸಿಯಂ ಭರಿತ ಆಹಾರಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಿ. ಈ ಮೂಲಕ ನಿಮ್ಮ ಮೂಳೆಗಳನ್ನು ಬಲಪಡಿಸಬಹುದು.

2 /5

ಕ್ಯಾಲ್ಸಿಯಂ  ಮಾತ್ರವಲ್ಲ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಸಾಕಷ್ಟು ಪ್ರೋಟೀನ್ ಕೂಡ ಅಗತ್ಯ. ಪ್ರೋಟೀನ್ ನಮ್ಮ ದೆಹಲ್ದಲ್ಲಿ ಮೂಳೆಗಳನ್ನು ನಿರ್ಮಿಸುವುದರ ಜೊತೆಗೆ ಅವುಗಳು ಸುಲಭವಾಗಿ ಮುರಿಯುವುದಂತೆ ತಡೆಗಟ್ಟಲು ಸಹಕಾರಿ ಆಗಿದೆ. ಹಾಗಾಗಿ ಬಲವಾದ ಮೂಳೆಗಳು ನಿಮ್ಮದಾಗಬೇಕಿದ್ದರೆ ನಿಮ್ಮ ದಿನನಿತ್ಯದ ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ತಪ್ಪದೇ ಸೇವಿಸಿ.

3 /5

ಉತ್ತಮವಾದ ಬಲಿಷ್ಠವಾದ ಮೂಳೆಗಳನ್ನು ಪಡೆಯಲು ತಪ್ಪದೇ ನಿಮ್ಮ ಆಹಾರದಲ್ಲಿ ಒಮೆಗಾ-3 ಭರಿತ ಆಹಾರಗಳನ್ನು ಸೇರಿಸಿ. ಒಮೆಗಾ-3 ಮೂಳೆಗಳ ರಚನೆಯನ್ನು ಉತ್ತೇಜಿಸುವುದರ ಜೊತೆಗೆ ಅದನ್ನು ಬಲಪಡಿಸುತ್ತದೆ.

4 /5

ಉತ್ತಮ ಆರೋಗ್ಯಕ್ಕೆ ಹಸಿರು ತರಕಾರಿಗಳ ಕೊಡುಗೆ ಅಪಾರ. ನಿತ್ಯ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಹಸಿರು ತರಕಾರಿಗಳನ್ನು ತಪ್ಪದೇ ಸವಿಯಿರಿ  

5 /5

ಆರೋಗ್ಯಕರ ಜೀವನಕ್ಕೆ ಕೇವಲ ಆಹಾರ-ಪಾನೀಯದ ಬಗ್ಗೆ ಮಾತ್ರ ಕಾಳಜಿ ವಹಿಸಿದರೆ ಸಾಲದು, ನಿತ್ಯ ಯೋಗ-ವ್ಯಾಯಾಮದಂತಹ ಚಟುವಟಿಕೆಗಳನ್ನೂ ಸಹ ಮೈಗೂಡಿಸಿಕೊಳ್ಳಬೇಕು. ಪ್ರತಿ ದಿನ ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಮಾಡುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಲಿದೆ. ಇದಲ್ಲದೆ, ಮೂಳೆಗಳು ಬಲು ಬೇಗ ದುರ್ಬಲಗೊಳ್ಳುವುದನ್ನು ಸಹ ತಪ್ಪಿಸಬಹುದು.