ಬೆಳಗಿನ ಉಪಹಾರ ರುಚಿಕರವಾಗಿದ್ದರೆ ಆಹಾ... ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಆದರೆ, ಸ್ವಲ್ಪ ವ್ಯತ್ಯಾಸವಾದರೂ ಬೆಳಿಗ್ಗೆಯಿಂದಲೇ ಕಿರಿ-ಕಿರಿಯೂ ಆರಂಭವಾಗುತ್ತದೆ. ಕೆಲವರು ಎಷ್ಟೇ ತರಕಾರಿ ಹಾಕಿ ಏನೇ ಮಾಡಿದರೂ ಸೈಡ್ ಅಲ್ಲಿ ನೆಂಚಿಕೊಳ್ಳೋಕೆ ಒಂದು ಚಟ್ನಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ. ಆದರೆ ದಿನ ಯಾವ ಚಟ್ನಿ ಮಾಡೋದು ಎಂಬುದು ಮಹಿಳೆಯರ ಚಿಂತೆ. ನಿಮ್ಮ ಈ ಚಿಂತೆಗೆ ನಾವು ಪರಿಹಾರವನ್ನು ತಂದಿದ್ದೇವೆ. ಬೆಳಗಿನ ಉಪಹಾರದಲ್ಲಿ ಎಲ್ಲರಿಗೂ ಇಷ್ಟವಾಗುವ ಆರೋಗ್ಯಕರವಾದ ಚಟ್ನಿಗಳ ಬಗ್ಗೆ ಇಲ್ಲಿದೆ ಮಾಹಿತಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕರಿಬೇವಿನ ಸೊಪ್ಪಿನಿಂದ ತಯಾರಿಸಿದ ಚಟ್ನಿಯಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಇದಲ್ಲದೆ, ಕ್ಯಾಲ್ಸಿಯಂ ಮತ್ತು ಅನೇಕ ಜೀವಸತ್ವಗಳ ಪ್ರಮಾಣವೂ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಕೂದಲು ಕಪ್ಪು, ದಪ್ಪ ಮತ್ತು ಬಲವಾಗಿ ಉಳಿಯುತ್ತದೆ. ಈ ಚಟ್ನಿಯನ್ನು ಸೇವಿಸುವುದರಿಂದ ನಿಮ್ಮ ದೇಹವು ರಕ್ತಹೀನತೆ, ಅಧಿಕ ಬಿಪಿ ಮತ್ತು ಮಧುಮೇಹದಂತಹ ಸಮಸ್ಯೆಗಳಿಂದ ದೂರವಿರುತ್ತದೆ.
ಬೇಸಿಗೆ ಕಾಲದಲ್ಲಿ ಪುದೀನಾ ಚಟ್ನಿ ತುಂಬಾ ಇಷ್ಟವಾಗುತ್ತದೆ, ಏಕೆಂದರೆ ಇದರ ಪರಿಣಾಮ ತಂಪಾಗಿರುತ್ತದೆ. ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದರಲ್ಲಿರುತ್ತವೆ, ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
ಕೊತ್ತಂಬರಿ ಸೊಪ್ಪಿನ ಚಟ್ನಿ ಬಹುತೇಕ ಎಲ್ಲ ಮನೆಯಲ್ಲೂ ಇಷ್ಟವಾಗುತ್ತದೆ. ಇದರಲ್ಲಿ ವಿಟಮಿನ್-ಸಿ ಮತ್ತು ಪ್ರೊಟೀನ್ ಅಧಿಕವಾಗಿದೆ. ಬೆಳಗಿನ ಉಪಹಾರದಲ್ಲಿ ಈ ಚಟ್ನಿ ಸೇವನೆಯಿಂದ ಮಧುಮೇಹದಂತಹ ಸಮಸ್ಯೆ ದೂರವಾಗುತ್ತದೆ. ಕೊತ್ತಂಬರಿ ಸೊಪ್ಪಿನ ಜೊತೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಬೆರೆಸಿ ತಯಾರಿಸಿದ ಚಟ್ನಿ ತಿನ್ನುವುದರಿಂದ ಕರುಳಿನ ಸಮಸ್ಯೆ, ಜ್ವರ, ಭೇದಿ ಮುಂತಾದ ರೋಗಗಳು ಬರುವುದಿಲ್ಲ.
ಆಮ್ಲಾ ಅಥವಾ ನೆಲ್ಲಿಕಾಯಿ ಚಟ್ನಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ನಿಮ್ಮ ದೇಹವನ್ನು ಎಲ್ಲಾ ಸಮಸ್ಯೆಗಳಿಂದ ದೂರವಿಡುತ್ತವೆ. ಅಲ್ಲದೆ, ಈ ಚಟ್ನಿಯಲ್ಲಿ ಶುಂಠಿ ಮತ್ತು ನಿಂಬೆ ಬೆರೆಸಿ ಸೇವಿಸುವುದರಿಂದ ಹೃದ್ರೋಗ ದೂರವಾಗುತ್ತದೆ.
ಬೆಳ್ಳುಳ್ಳಿ ಪ್ರಬಲವಾದ ನೈಸರ್ಗಿಕ ಪ್ರತಿಜೀವಕ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಮೂಲಿಕೆಯಾಗಿದೆ. ವಯಸ್ಸಾದಂತೆ ಉಂಟಾಗುವ ದೈಹಿಕ ಬದಲಾವಣೆಗಳನ್ನು ಕಡಿಮೆ ಮಾಡಲು ಮತ್ತು ಹಲವು ಬಗೆಯ ರೋಗಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ.
ಟೊಮೆಟೊದಲ್ಲಿ ವಿಟಮಿನ್ ಸಿ, ಲೈಕೋಪೀನ್, ವಿಟಮಿನ್ ಕೆ, ಪೊಟ್ಯಾಸಿಯಮ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದರೊಂದಿಗೆ, ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಅಂಶಗಳು ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಈ ಚಟ್ನಿ ತಿನ್ನುವುದು ತುಂಬಾ ಪ್ರಯೋಜನಕಾರಿ.