Weight Loss tips : ತೂಕ ಇಳಿಸುವ ಪ್ರಯಾಣ ಸುಲಭವಲ್ಲ. ಮೊದಲನೆಯದಾಗಿ, ತೂಕವನ್ನು ಕಳೆದುಕೊಳ್ಳಲು ಮತ್ತು ನಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಾಕಷ್ಟು ತಾಳ್ಮೆ ಮತ್ತು ಪ್ರೇರಣೆ ಅವಶ್ಯಕ. ಆಹಾರ ಪದ್ದತಿಯಿಂದ ಮತ್ತು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೂ, ಕೆಲವೊಮ್ಮೆ ಜನರು ಕೆಲವು ತಪ್ಪುಗಳಿಂದ ತೂಕವನ್ನು ಕಳೆದುಕೊಳ್ಳುವ ಅವರ ಪ್ರಯತ್ನಗಳು ವಿಫಲವಾಗುತ್ತವೆ. ಅದಕ್ಕೆ ಕಾರಣ ಹಲವು.


COMMERCIAL BREAK
SCROLL TO CONTINUE READING

ಸೋಷಿಯಲ್‌ ಮೀಡಿಯಾ ಅನುಸರಿಸಬೇಡಿ : ಇಂಟರ್‌ನೆಟ್‌ನಲ್ಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ತೂಕ ನಷ್ಟದ ಬಗ್ಗೆ ಹೇಳುತ್ತಾರೆ. ಆದ್ರೆ, ತಜ್ಞರ ಸಲಹೆಯನ್ನು ತೆಗೆದುಕೊಂಡು, ಆಹಾರ ಮತ್ತು ವ್ಯಾಯಾಮ ಮಾಡುವುದು ಉತ್ತಮ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಪರಿಣಿತರು ಎಂದು ಹೇಳಿಕೊಂಡು ಚಿತ್ರ ವಿಚಿತ್ರ ಸಲಹೆಗಳನ್ನು ನೀಡುತ್ತಾರೆ. ಅವುಗಳನ್ನ ನೀವು ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿರಿ. ನಿಮ್ಮ ಆರೋಗ್ಯಕ್ಕೆ ಯಾವುದು ಸರಿ ಎಂದು ತಿಳಿದುಕೊಳ್ಳಿ. 


ಇದನ್ನೂ ಓದಿ: Onion Benefits: ಪ್ರತಿದಿನ ಒಂದು ಈರುಳ್ಳಿ ತಿನ್ನುವುದರಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ?


ಅನಗತ್ಯವಾಗಿ ಹಸಿವಿನಿಂದ ಬಳಲಬೇಡಿ : ತೂಕ ಇಳಿಸಿಕೊಳ್ಳಲು ನೀವು ಕಡಿಮೆ ತಿನ್ನಬೇಕು ಎಂದು ನೀವು ಭಾವಿಸಿರಬಹುದು, ಆದರೆ ಅದು ನಿಜವಲ್ಲ. ಆಹಾರ ಸೇವನೆಯನ್ನು ಕಡಿತಗೊಳಿಸುವುದೇ ದೊಡ್ಡ ತಪ್ಪು. ನಿಮಗೆ ಹಸಿವಾದಾಗ ಆರೋಗ್ಯಯುತ ಪದಾರ್ಥಗಳನ್ನು ತಿನ್ನಿ.


ತೂಕ ಇಳಿಸಿಕೊಳ್ಳಲು ಆತುರಪಡಬೇಡಿ : ನಿಮ್ಮ ದೇಹವು ಯಾವುದೇ ಹೊಸ ಪ್ರಚೋದನೆಗೆ ಹೊಂದಿಕೊಳ್ಳಲು ಸುಮಾರು 12 ವಾರಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ, ನಿಮ್ಮ ದೇಹಕ್ಕೆ ಅಗತ್ಯವಿರುವ ಸಮಯವನ್ನು ನೀಡಿ. ಆರೋಗ್ಯಕರ ತೂಕ ನಷ್ಟವು ಒಂದು ವರ್ಷದಲ್ಲಿ ನಿಮ್ಮ ಒಟ್ಟು ದೇಹದ ತೂಕದ 10 ಪ್ರತಿಶತವಾಗಿದೆ. ನೀವು ನಿಧಾನವಾಗಿ ಸ್ವಲ್ಪ ಸ್ವಲ್ಪ ತೂಕವನ್ನು ಕಳೆದುಕೊಂಡರೆ ಮಾತ್ರ ನೀವು ಆರೋಗ್ಯವಾಗಿರಲು ಸಾಧ್ಯ.


ತೀವ್ರವಾದ ವ್ಯಾಯಾಮದಲ್ಲಿ ತೊಡಗಬೇಡಿ : ಒಂದೇ ದಿನದಲ್ಲಿ ತೂಕ ನಷ್ಟವಾಗಬೇಕು ಅಂತ ನಿರ್ಧರಿಸಿದವರ ಹಾಗೆ ಒಂದೇ ದಿನ ಎಲ್ಲಾ ವ್ಯಾಯಾಮವನ್ನು ಮಾಡಬೇಡಿ. ನಿಧಾನವಾಗಿ, ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ ಮಾಡಲು ಪ್ರಯತ್ನಿಸಿ. ಪ್ರತಿದಿನ ಸುಮಾರು ಅರ್ಧ ಗಂಟೆ ವ್ಯಾಯಾಮ ಮಾಡುವುದು ಸೂಕ್ತ.


ಇದನ್ನೂ ಓದಿ: ತುಳಸಿ ಜೊತೆ ಈ ಒಂದು ವಸ್ತು ಸೇರಿಸಿ ಬಳಸಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ!


ನಿದ್ರೆ ಕಡಿಮೆ ಮಾಡಬೇಡಿ : ತೂಕವನ್ನು ಕಳೆದುಕೊಳ್ಳುವಾಗ ಸರಿಯಾದ ನಿದ್ರೆ ಅತ್ಯಗತ್ಯ. ನಿದ್ರೆಯ ಕೊರತೆಯು ತೂಕ ಹೆಚ್ಚಾಗಿಸುತ್ತದೆ. ಅಲ್ಲದೆ, ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೇಹವು ಬೇಗನೆ ಆಯಾಸಗೊಳ್ಳುತ್ತದೆ. ರಿಫ್ರೆಶ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.


ಹಕ್ಕು ನಿರಾಕರಣೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಇದು ಯಾವುದೇ ಔಷಧಿ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ