ಒಂದು ತಿಂಗಳಲ್ಲಿ 3 ಕೆಜಿ ತೂಕ ಕಳೆದುಕೊಳ್ಳಬಹುದು ! ಈ ಜ್ಯೂಸ್ ಒಮ್ಮೆ ಟ್ರೈ ಮಾಡಿ

Ash Gourd Benefits for weight lose :ಕೆಲವೊಂದು  ಮನೆಮದ್ದುಗಳನ್ನು ನಿಯಮಿತವಾಗಿ ಅನುಸರಿಸಿಕೊಂಡು ಬರುವುದರಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅದೂ ಕೂಡಾ ಒಂದೇ ತಿಂಗಳಲ್ಲಿ ಕನಿಷ್ಠ 3 ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಬಹುದು.  

Written by - Ranjitha R K | Last Updated : May 26, 2023, 12:18 PM IST
  • ತೂಕ ಹೆಚ್ಚಿಸಿಕೊಳ್ಳುವುದು ಸುಲಭ.
  • ತೂಕವನ್ನು ಕಡಿಮೆ ಮಾಡುವುದು ಬಹು ದೊಡ್ಡ ಸವಾಲು.
  • ಮನೆಮದ್ದುಗಳ ಸಹಾಯದಿಂದ ತೂಕವನ್ನು ಕಳೆದುಕೊಳ್ಳಬಹುದು
ಒಂದು ತಿಂಗಳಲ್ಲಿ 3 ಕೆಜಿ ತೂಕ ಕಳೆದುಕೊಳ್ಳಬಹುದು ! ಈ ಜ್ಯೂಸ್ ಒಮ್ಮೆ ಟ್ರೈ ಮಾಡಿ

Ash Gourd Benefits for weight lose : ತೂಕ ಹೆಚ್ಚಿಸಿಕೊಳ್ಳುವುದು ಸುಲಭ. ಆದರೆ ಹೆಚ್ಚಿದ ತೂಕವನ್ನು ಕಡಿಮೆ ಮಾಡುವುದು ಬಹು ದೊಡ್ಡ ಸವಾಲು. ಆದರೆ ಕೆಲವೊಂದು  ಮನೆಮದ್ದುಗಳನ್ನು ನಿಯಮಿತವಾಗಿ ಅನುಸರಿಸಿಕೊಂಡು ಬರುವುದರಿಂದ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಅದೂ ಕೂಡಾ ಒಂದೇ ತಿಂಗಳಲ್ಲಿ ಕನಿಷ್ಠ 3 ಕೆಜಿಯಷ್ಟು ತೂಕವನ್ನು ಕಡಿಮೆ ಮಾಡಬಹುದು. ಈ ಚಮತ್ಕಾರ ಹೇಗೆ ಎಂದು ನೋಡುವುದಾದರೆ, ಅದು ಈ ತರಕಾರಿಯ ಜ್ಯೂಸ್ ನಿಂದ. ಈ ಜ್ಯೂಸ್  ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಇದಲ್ಲದೆ, ಈ ರಸವು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ದೇಹ ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಆ ಜ್ಯೂಸ್ ಯಾವುದು ಮತ್ತು ಅದನು ತಯಾರಿಸುವುದು ಹೇಗೆ ನೋಡೋಣ. 

ಕುಂಬಳಕಾಯಿಯಲ್ಲಿನ ಪೋಷಕಾಂಶಗಳು :
ಕುಂಬಳಕಾಯಿಯು ಹಸಿರು ತರಕಾರಿಯಾಗಿದ್ದು ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ಕಬ್ಬಿಣ, ಫೋಲೇಟ್, ಮೆಗ್ನೀಸಿಯಮ್, ಸತು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದಲ್ಲದೆ, ಕುಂಬಳಕಾಯಿಯು ಸಾಕಷ್ಟು ಪ್ರಮಾಣದ ನೀರನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಸೇವಿಸುವುದರಿಂದ ಹೊಟ್ಟೆಯು ಆರೋಗ್ಯಕರವಾಗಿರುತ್ತದೆ. ಕುಂಬಳಕಾಯಿ ರಸವನ್ನು ಕುಡಿಯುವುದರಿಂದ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಸಹಾಯವಾಗುತ್ತದೆ. ಕುಂಬಳಕಾಯಿ ಜ್ಯೂಸ್ ಅನ್ನು ತಯಾರಿಸುವುದು ಕೂಡಾ ಸುಲಭ. 

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ಮೂರು ವಸ್ತುಗಳನ್ನು ಸೇವಿಸಿದರೆ ವಿಷದಂತೆ ಕಾಡುವುದು ಆರೋಗ್ಯವನ್ನು

ಹೊಟ್ಟೆಯ ಕೊಬ್ಬು ಕರಗುತ್ತದೆ : 
ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡುವುದು ತುಂಬಾ ಕಷ್ಟ.  ಆದರೆ ಈ ರಸದ ಸಹಾಯದಿಂದ ನೀವು ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ತೂಕವನ್ನು ಕಳೆದುಕೊಳ್ಳುವ ಉದ್ದೇಶದಿಂದ ಆಹಾರಕ್ರಮವನ್ನು ಅನುಸರಿಸುತ್ತಿದ್ದೀರಿ ಎಂದಾದರೆ   ಈ ಪರಿಪೂರ್ಣ ಸಲಹೆಯನ್ನು ತಪ್ಪದೇ ಪಾಲಿಸಿ. 

ಚಯಾಪಚಯ ಸುಧಾರಿಸುತ್ತದೆ : 
ಕುಂಬಳಕಾಯಿ ಅಲೋವೆರಾ ಮತ್ತು ನಿಂಬೆ ರಸದೊಂದಿಗೆ ದಿನವನ್ನು ಪ್ರಾರಂಭಿಸಬೇಕು. ಈ ಮೂರೂ ವಸ್ತುಗಳು ದೇಹವನ್ನು ಪೋಷಿಸುತ್ತದೆ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುಂಬಳಕಾಯಿ ಜ್ಯೂಸ್  ಕುಡಿಯುವುದರಿಂದ ಚಯಾಪಚಯವನ್ನು  ಚುರುಕಾಗುತ್ತದೆ. ಚಯಾಪಚಯ  ಸರಿಯಾಗಿದ್ದರೆ ತೂಕವನ್ನು ಕಳೆದುಕೊಳ್ಳುವುದು ಸುಲಭವಾಗುತ್ತದೆ.

ಇದನ್ನೂ ಓದಿ : Bottle Gourd Benefits: ಸೋರೆಕಾಯಿ ಕಂಡರೆ ಸಿಡಿಮಿಡಿ ಮಾಡುವವರು ಈ ಲೇಖನ ಓದಿ...

ತೂಕ ನಷ್ಟಕ್ಕೆ ಕುಂಬಳಕಾಯಿ ಜ್ಯೂಸ್ ರೆಸಿಪಿ  : 
ಕುಂಬಳಕಾಯಿ ಜ್ಯೂಸ್ ಮಾಡುವಾಗ ಬೇರೆ ಯಾವುದೇ ತರಕಾರಿಯನ್ನು ಬಳಸಬೇಡಿ.  ಕುಂಬಳಕಾಯಿಯ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ ಜ್ಯೂಸ್ ತೆಗೆದುಕೊಳ್ಳಿ. ಈಗ ಈ ಜ್ಯೂಸ್ ಗೆ  2 ಚಮಚ ಅಲೋವೆರಾ ರಸ, ಉಪ್ಪು, ನಿಂಬೆ ಮತ್ತು ಪುದೀನ ಎಲೆಗಳನ್ನು  ಬೆರೆಸಿ ಕುಡಿಯಿರಿ. ಇಲ್ಲಿ  ನೆನಪಿಡಬೇಕಾದ ಇನ್ನೊಂದು ವಿಷಯವೆಂದರೆ,  ಈ ಜ್ಯೂಸ್ ಅನ್ನು ತಯಾರಿಸಿದ ತಕ್ಷಣ ಸೇವಿಸಬೇಕು. ಇದನ್ನೂ ತಯಾರಿಸಿಟ್ಟು ಬಹಳ ಹೊತ್ತಿನ ನಂತರ ಸೇವಿಸಿದರೆ ಈ ಜ್ಯೂಸ್ ಅಗತ್ಯ ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News