ನವದೆಹಲಿ : ಅಡುಗೆ ಮನೆಯಲ್ಲಿ ತಯಾರು ಮಾಡಿದ ಆಹಾರ ಪದಾರ್ಥಗಳು ಉಳಿಯಿತೆಂದರೆ ಅದನ್ನು ಬಿಸಿ ಮಾಡಿ ತಿನ್ನುವುದು ಸಾಮಾನ್ಯ. ಆದರೆ, ಈ ರೀತಿ ಆಹಾರ ಬಿಸಿ ಮಾಡಿ ತಿನ್ನುವಾಗಲೂ (Reheating a food) ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಯಾಕೆಂದರೆ ಕೆಲ ಆಹಾರಗಳನ್ನು ಮತ್ತೆ ಮತ್ತೆ ಬಿಸಿಮಾಡಿ ತಿಂದರೆ, ಅದು ಆರೋಗ್ಯಕ್ಕೆ ಹಾನಿಕರವಾಗಿ ಮಾರ್ಪಡಾಗಬಹುದು.  ಫ್ರಿಜ್ ನಲ್ಲಿ ಇಟ್ಟಿರುವ ಪ್ರತಿಯೊಂದು ಆಹಾರ ಪದಾರ್ಥವನ್ನು ಮತ್ತೆ ಬಿಸಿ ಮಾಡಿದ ನಂತರ ತಿನ್ನಲು ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು.  ಯಾಕೆಂದರೆ, ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿದರೆ, ಅದು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಎನ್ನಲಾಗಿದೆ.   


COMMERCIAL BREAK
SCROLL TO CONTINUE READING

ಈ ಐದು ಆಹಾರವನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ ತಿನ್ನಬೇಡಿ :
1. ಪಾಲಕ :
ಆಹಾರ ತಜ್ಞರ ಪ್ರಕಾರ, ಪಾಲಕ್ (Palak) ಅನ್ನು ಮತ್ತೆ ಬಿಸಿ ಮಾಡಿ ತಿನ್ನಬಾರದು. ಪಾಲಕ್ ಅನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಕ್ಯಾನ್ಸರ್ ನ ಅಪಾಯ ಹೆಚ್ಚಾಗುವ ಸಂಭವ ಇರುತ್ತದೆ. ಇದನ್ನು ಮತ್ತೆ ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ನೈಟ್ರೇಟ್‌ಗಳು, ಕ್ಯಾನ್ಸರ್ (Cancer) ಅಪಾಯವನ್ನು ಹೆಚ್ಚಿಸುವ ಅಂಶಗಳಾಗಿ ಪರಿವರ್ತನೆಯಾಗುತ್ತವೆ. 


ಇದನ್ನೂ ಓದಿ : Weight Loss Tips: ಮೊಸರನ್ನು ಈ ರೀತಿ ಬಳಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದಂತೆ!


2. ಆಲೂಗಡ್ಡೆ:
ಆಲೂಗಡ್ಡೆ  ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥಗಳಲ್ಲಿ ಒಂದು. ಪ್ರತಿ ಮನೆಗಳಲ್ಲಿ ಅಡುಗೆಯಲ್ಲಿ ಆಲೂಗಡ್ಡೆಯನ್ನು  (Potato) ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಬಿಸಿ ಮಾಡಿದಾಗ ಅದು ಬೊಟುಲಿಸಂನ ಎಂಬ ಅಪರೂಪದ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ.  ಇದನ್ನು ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯ (Digestion system) ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


3. ಮೊಟ್ಟೆ :
ಮೊಟ್ಟೆಗಳು (Egg) ನಮ್ಮ ದೇಹಕ್ಕೆ ಪ್ರಯೋಜನಕಾರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರೋಟೀನ್ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಆದರೆ, ಮೊಟ್ಟೆಯನ್ನು ಯಾವಾಗಲೂ  ಮತ್ತೆ ಬಿಸಿ ಮಾಡಿ ತಿನ್ನಬಾರದು. ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 


4. ಚಿಕನ್ : 
ಮೊಟ್ಟೆಗಳಂತೆ ಚಿಕನ್ ನಲ್ಲಿ (Chicken) ಕೂಡ ಪ್ರೋಟೀನ್‌ ಸಮೃದ್ಧವಾಗಿದೆ. ಚಿಕನ್ ಅನ್ನು ಮತ್ತೆ ಮತ್ತೆ ಬಿಸಿ ಮಾಡಿ ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. 


ಇದನ್ನೂ ಓದಿ : ಈ ಸಮಸ್ಯೆಗಳಿಂದ ಬಳಲುವವರು ಖಂಡಿತಾ ತಿನ್ನಬೇಕು ಪೇರಳೆ ಹಣ್ಣು


5. ಅನ್ನ : 
ಹೆಚ್ಚಿನ ಜನರು ರಾತ್ರಿಯ ಉಳಿದ ಅನ್ನವನ್ನು (Rice) ಮತ್ತೆ ಬಿಸಿ ಮಾಡಿ ತಿನ್ನುವುದನ್ನು ನಾವು ನೋಡುತ್ತೇವೆ. ಆದರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಬಹುದು.  ಅಕ್ಕಿಯಲ್ಲಿ ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾಗಳು ಇರುತ್ತವೆ. ಅಕ್ಕಿಯನ್ನು ಬೇಯಿಸುವಾಗ ಈ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಆದರೆ ಅನ್ನ ತಣ್ಣಗಾದಾಗ ಈ ರೋಗಾಣುಗಳು ಮತ್ತೆ ವೇಗವಾಗಿ ಬೆಳೆಯಲು ಆರಂಭಿಸುತ್ತವೆ. ಅಂತಹ ಸನ್ನಿವೇಶದಲ್ಲಿ, ಒಬ್ಬ ವ್ಯಕ್ತಿಯು ಅವುಗಳನ್ನು ಪುನಃ ಬಿಸಿ ಮಾಡಿ ತಿಂದರೆ ಅದು ಫುಡ್ ಪಾಯಿಸನ್ ಗೆ ಕಾರಣವಾಗಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ