Juice for Diabetes : ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಜನರ ಆಹಾರ ಪದ್ದತಿಯಲ್ಲಿ ಕೂಡಾ ಸಾಕಷ್ಟು ಬದಲಾವಣೆಯಾಗಿದೆ. ಜನರು ಜಂಕ್ ಫುಡ್ ನತ್ತ ಹೆಚ್ಚು  ಹೆಚ್ಚು ವಾಲುತ್ತಿದ್ದಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಮಧುಮೇಹ ಒಮ್ಮೆ ಕಾಣಿಸಿಕೊಂಡರೆ ನಂತರ, ಆಹಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನೆಚ್ಚಿನ ಆಹಾರಗಳನ್ನು ತಿನ್ನುವುದು ಸಾಧ್ಯವಾಗುವುದಿಲ್ಲ. ಔಷಧಿಗಳ ಮೇಲೆಯೇ  ಅವಲಂಬಿತರಾಗಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹವನ್ನು ನಿಯಂತ್ರಿಸುವ ಆರೋಗ್ಯ ಸಲಹೆಗಳನ್ನು ಪಡೆಯುವುದು ಅವಶ್ಯಕ. 


COMMERCIAL BREAK
SCROLL TO CONTINUE READING

ಮನೆಯಲ್ಲಿ ಸುಲಭವಾಗಿ ಈ ಜ್ಯೂಸ್ ತಯಾರಿಸಿ : 
ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮಧುಮೇಹ ನಿಯಂತ್ರಣಕ್ಕೆ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳಿವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಮಧುಮೇಹ ನಿಯಂತ್ರಣಕ್ಕೆ  ಬಹಳ ಸಹಕಾರಿಯಾಗುವುದು. ಇದರೊಂದಿಗೆ ಹೊಟ್ಟೆಗೆ ಸಂಬಂಧಿಸಿದ ಇತರ ಸಮಸ್ಯೆಗಳೂ ದೂರವಾಗುತ್ತವೆ. 


ಇದನ್ನೂ ಓದಿ : ಕಿಡ್ನಿ ಆರೋಗ್ಯಕ್ಕೆ ಮಾರಕ ಈ ಐದು ಅಭ್ಯಾಸಗಳು.! ಇಂದೇ ಸರಿಪಡಿಸಿಕೊಳ್ಳಿ


 ನೆಲ್ಲಿಕಾಯಿ ಜ್ಯೂಸ್ :
 ಮಧುಮೇಹ ರೋಗಿಗಳಿಗೆ ನೆಲ್ಲಿ ಕಾಯಿ ಜ್ಯೂಸ್ ತುಂಬಾ ಪ್ರಯೋಜನಕಾರಿ. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿ ಸಾಕಷ್ಟು ಸಹಕಾರಿಯಾಗುತ್ತದೆ. 


ಹಾಗಲಕಾಯಿಯ ರಸ :
ಹಾಗಲಕಾಯಿಯನ್ನು ಮಧುಮೇಹಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಹಾಗಲಕಾಯಿ ರಸದಲ್ಲಿ ಅನೇಕ ಪೋಷಕಾಂಶಗಳಿದ್ದು, ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ಹಾಗಲಕಾಯಿ ರಸವು ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : Soaked Peanuts Benefits : 'ನೆನೆಸಿದ ಕಡಲೆಬೀಜ' ಆರೋಗ್ಯಕೆ ಎಷ್ಟು ಪ್ರಯೋಜನ ಗೊತ್ತಾ?


ಗ್ರೀನ್ ಟೀ :
ಇತ್ತೀಚಿನ ದಿನಗಳಲ್ಲಿ, ಸಾಂಪ್ರದಾಯಿಕ ಚಹಾದ ಬದಲಿಗೆ, ಜನರು ಹೆಚ್ಚು ಗ್ರೀನ್ ಟೀ ಸೇವಿಸಲು ಪ್ರಾರಂಭಿಸಿದ್ದಾರೆ. ಸ್ಥೂಲಕಾಯತೆಯನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಗ್ರೀನ್ ಟೀಯನ್ನು   ನಿತ್ಯ ಸೇವಿಸಿದರೆ ಟೈಪ್ 2 ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.  


ಎಳನೀರು : 
ಎಳನೀರು ಕೂಡಾ ಆರೋಗ್ಯಕ್ಕೆ ಪ್ರಯೋಜನಕಾರಿ. ಅದರಲ್ಲೂ ಮಧುಮೇಹ ರೋಗಿಗಳಿಗೆ  ಎಳನೀರು ಸಂಜೀವಿನಿ ಇದ್ದಂತೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ, ಪೊಟ್ಯಾಸಿಯಮ್, ಎಲೆಕ್ಟ್ರೋಲೈಟ್ಸ್ ಮತ್ತು ಎಂಜೈಮ್ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.