ಶುಗರ್ ಲೆಸ್ ಟೀ ಇಷ್ಟವಿಲ್ಲವೇ! ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಈ ಸ್ಪೆಷಲ್ ಟೀ
Tea For Diabetics: ನೀವು ಚಹಾ ಪ್ರಿಯರೇ? ಆದರೆ, ಮಧುಮೇಹದಿಂದಾಗಿ ಶುಗರ್ ಲೆಸ್ ಚಹಾ ಸೇವಿಸಲು ಇಷ್ಟವಾಗುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಚಹಾದಲ್ಲಿ ಸಕ್ಕರೆಗೆ ಪರ್ಯಾಯವಾಗಿ ಈ ಒಂದು ಸಿಹಿ ಪದಾರ್ಥವನ್ನು ಬಳಸಿದರೆ ಲಭ್ಯವಾಗಲಿದೆ ಹಲವು ಅದ್ಭುತ ಪ್ರಯೋಜನಗಳು.
Jaggery Tea In Diabetes: ನೀವು ಚಹಾ ಪ್ರಿಯರೇ! ಮಧುಮೇಹದಿಂದಾಗಿ ನಿಮಗೆ ಇಷ್ಟವಿಲ್ಲದಿದ್ದರೂ ಶುಗರ್ ಲೆಸ್ ಟೀ ಕುಡಿಯಬೇಕೇ? ಡೋಂಟ್ ವರಿ. ನೀವು ಮಧುಮೆಹಿಗಳಾಗಿದ್ದರೆ ಸಕ್ಕರೆಗಿಂತ ಬೆಲ್ಲದ ಚಹಾ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ವಾಸ್ತವವಾಗಿ, ಬೆಲ್ಲದಲ್ಲಿ ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇದೆ. ಇದಲ್ಲದೆ, ಬೆಲ್ಲವು ಎಲ್ಲಾ ಖನಿಜಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವುದರಿಂದ ಸುರಕ್ಷಿತವಾಗಿದೆ ಎಂದು ಭಾವಿಸಲಾಗಿದೆ. ಹಾಗಾಗಿಯೇ, ಮಧುಮೆಹಿಗಳಿಗೆ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲವನ್ನು ಬಳಸಲು ಸೂಚಿಸಲಾಗುತ್ತದೆ.
ಬೆಲ್ಲವು ಕಬ್ಬಿನ ರಸದ ಸಾಂದ್ರತೆಯಿಂದ ಮಾಡಿದ ನೈಸರ್ಗಿಕ, ಸಾಂಪ್ರದಾಯಿಕ ಸಿಹಿಕಾರಕವಾಗಿದೆ, ಇದನ್ನು ಪ್ರಾಥಮಿಕವಾಗಿ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್‌ನಲ್ಲಿ ಸೇವಿಸಲಾಗುತ್ತದೆ. ಬೆಲ್ಲ ಮತ್ತು ಜೇನುತುಪ್ಪವನ್ನು ಬಿಳಿ ಮತ್ತು ಕಂದು ಸಕ್ಕರೆಗೆ ಆರೋಗ್ಯಕರ ಪರ್ಯಾಯವೆಂದು ಒಪ್ಪಿಕೊಳ್ಳಲಾಗಿದೆ.
ಇದನ್ನೂ ಓದಿ- ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಕಹಿ ಜ್ಯೂಸ್- ತೂಕ ಇಳಿಕೆ ಜೊತೆಗೆ ಸಿಗುತ್ತೆ ಹಲವು ಅದ್ಭುತ ಲಾಭ
ಗ್ರೇಟರ್ ನೋಯ್ಡಾದ GIMS ಆಸ್ಪತ್ರೆಯ ಪ್ರಸಿದ್ಧ ಆಹಾರ ತಜ್ಞರಾದ ಆಯುಷಿ ಯಾದವ್ ಅವರ ಪ್ರಕಾರ, ಮಧುಮೇಹ ರೋಗಿಗಳಿಗೆ ಶುಗರ್ ಲೆಸ್ ಚಹಾ ಇಷ್ಟವಿಲ್ಲದಿದ್ದರೆ, ಅವರು ಸಕ್ಕರೆ ಬದಲಿಗೆ ಸ್ವಲ್ಪವೇ ಸ್ವಲ್ಪ ಬೆಲ್ಲವನ್ನು ಬೆರೆಸಿ ಚಹಾ ಕುಡಿಯಬಹುದು. ಇದರಿಂದ ಮಧುಮೇಹಿಗಳಿಗೆ ಸಿಹಿಯ ಹಂಬಲ ಕಡಿಮೆಯಾಗುವುದರ ಜೊತೆಗೆ, ತುಂಬಾ ಅಲ್ಪ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಮಧುಮೆಹಿಗಳಿಗೆ ತುಂಬಾ ಪ್ರಯೋಜನಕಾರಿ ಬೆಲ್ಲದ ಟೀ:
* ಬ್ಲಡ್ ಶುಗರ್:
ಆಹಾರ ತಜ್ಞರಾದ ಆಯುಷಿ ಯಾದವ್ ಅವರ ಪ್ರಕಾರ, ಮಧುಮೇಹದ ಸ್ಥಿತಿಯಲ್ಲಿ ನೀವು ಸಕ್ಕರೆಯ ಬದಲಿಗೆ ಬೆಲ್ಲದ ಚಹಾವನ್ನು ಸೇವಿಸಿದರೆ ಅದರಿಂದ ಹಲವು ಪ್ರಯೋಜನಗಳಿವೆ. ಅದರಲ್ಲೂ ಮುಖ್ಯವಾಗಿ, ನೀವು ಸ್ವಲ್ಪವೇ ಸ್ವಲ್ಪ ಬೆಲ್ಲವನ್ನು ಚಹಾದಲ್ಲಿ ಬೆರೆಸಿ ಕುಡಿದರೆ ಅದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಅನಿಯಂತ್ರಿತವಾಗಿರುವುದಿಲ್ಲ.
* ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ:
ಬೆಲ್ಲದ ಚಹಾ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪ್ರಯೋಜನವನ್ನು ಬೀರುತ್ತದೆ. ಮಾತ್ರವಲ್ಲ, ಉದರದ ಆರೋಗ್ಯಕ್ಕೂ ಪ್ರಯೋಜನಕಾರಿ.
ಇದನ್ನೂ ಓದಿ- Health Tipes: ಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ..
* ರಕ್ತಹೀನತೆ:
ಬೆಲ್ಲವು ಕಬ್ಬಿಣದ ಸಮೃದ್ಧ ಮೂಲವಾಗಿದೆ, ಇದು ಹಿಮೋಗ್ಲೋಬಿನ್ನ ಪ್ರಮುಖ ಅಂಶವಾಗಿದೆ. ಬೆಲ್ಲದ ಚಹಾ ಸೇವನೆಯು ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಉಪಯುಕ್ತವಾಗಿದೆ.
* ತೂಕ ಇಳಿಕೆ:
ನಿಯಂತ್ರಿತ ಪ್ರಮಾಣದ ಬೆಲ್ಲವು ತೂಕ ನಷ್ಟದ ಪ್ರಯಾಣದಲ್ಲಿ ಸಹಾಯ ಮಾಡುತ್ತದೆ, ವಿಶೇಷವಾಗಿ ಹೊಟ್ಟೆಯ ಪ್ರದೇಶದಿಂದ ಹೆಚ್ಚುವರಿ ಕಿಲೋಗಳನ್ನು ಹೊರಹಾಕಲು ಹೆಣಗಾಡುವವರಿಗೆ ಬೆಲ್ಲದ ಚಹಾ ತುಂಬಾ ಪ್ರಯೋಜನಕಾರಿ ಆಗಿದೆ.
* ರೋಗನಿರೋಧಕ ಶಕ್ತಿ:
ಬೆಲ್ಲದ ಚಹಾ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.