Health Tipes: ಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ.. 

Basale Soppu: ಬಸಳೆ ಒಂದು ಬಾರಿ  ಚಪ್ಪರದಲ್ಲಿ ಹಬ್ಬಿದರೆ ಕಡಿಮೆ ಅಂದರೂ ಎರಡು ತಿಂಗಳ  ಮಟ್ಟಿಗೆ ಹಾಗೆ ಇರುತ್ತದೆ. ಬಸಳೆ ಸಾಂಬಾರಿಗೆ ರುಚಿ ಮಾತ್ರವಲ್ಲದೇ ಇದು ಆರೋಗ್ಯದ ದೃಷ್ಠಿಯಿಂದ ತುಂಬಾನೆ ಪ್ರಯೋಜನಕಾರಿಯಾಗಿದೆ.  

Written by - Zee Kannada News Desk | Last Updated : Mar 29, 2023, 11:32 AM IST
  • ಬಸಳೆ ಆರೋಗ್ಯಕ್ಕೆ ಮಾತ್ರವಲ್ಲದೇ ಸೌಂದರ್ಯಕ್ಕೂ ಪ್ರಯೋಜನ
  • ಬಸಳೆ ಸೊಪ್ಪು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ
  • ಮೂಳೆಗಳ ಆರೋಗ್ಯಕ್ಕೆ ಹೆಚ್ಚು ಉಪಯೋಗ
Health Tipes: ಬಸಳೆ ಸೊಪ್ಪು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಇದರಿಂದ ದುಬಾರಿ ಲಾಭ..  title=

Malabar: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮನೆಯ ಹಿತ್ತಲ್ಲಿ ಬಸಳೆ ಸೊಪ್ಪು ಬೆಳೆಯಲು ಆರಂಭಿಸುತ್ತಾರೆ. ತುಂಬಾ ನೀರಿನಾಂಶ ಹೆಚ್ಚಾದಲ್ಲಿ ಇದು ಬದುಕುವ ಸಾಧ್ಯತೆ ಕಡಿಮೆ ಹೆಚ್ಚು ನೀರು ಬೀಳುವ ಜಾಗದಲ್ಲಿ ಇದನ್ನು ನೆಡಬಾರದು. ಬಸಳೆ ಒಂದು ಬಾರಿ ಚಪ್ಪರದಲ್ಲಿ ಹಬ್ಬಿದರೆ ಕಡಿಮೆ ಅಂದರೂ ಎರಡು ತಿಂಗಳ ಮಟ್ಟಿಗೆ ಹಾಗೆ ಇರುತ್ತದೆ. ಬಸಳೆ ಸಾಂಬಾರಿಗೆ ರುಚಿ ಮಾತ್ರವಲ್ಲದೇ ಇದು ಆರೋಗ್ಯದ ದೃಷ್ಠಿಯಿಂದ ತುಂಬಾನೆ ಪ್ರಯೋಜನಕಾರಿಯಾಗಿದೆ.  

ಇದರಲ್ಲಿ ಕಡಿಮೆ ಕ್ಯಾಲೋರಿ ಅಂಶವಿದ್ದು, ವಿಟಮಿನ್ ' ಎ ', ವಿಟಮಿನ್ ' ಸಿ ', ವಿಟಮಿನ್ ' ಬಿ9 ', ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಷಿಯಂ, ಪೋಸ್ಫ್ಯಾರಸ್, ಪೊಟ್ಯಾಸಿಯಂ ಮತ್ತು ಇನ್ನಿತರ ಖನಿಜ ಸತ್ವಗಳನ್ನು ಹೊಂದಿದೆ. ಇದರ ಎಲೆಯನ್ನು ಹಸಿಯಾಗಿ ತಿನ್ನುವುದರಿಂದ ಬೇಸಿಗೆ ಉಷ್ಣದಿಂದ ಆಗುವ ಬಾಯಿ  ಹುಣ್ಣುನ್ನು ಕಡಿಮೆ ಮಾಡುತ್ತದೆ. 

ಬಸಳೆ ಸೊಪ್ಪಿನಲ್ಲಿ ಫೋಲೇಟ್ ಅಂಶ  ಹೆಚ್ಚಿರುವುದರಿಂದ ರಕ್ತದಲ್ಲಿನ ಹಿಮೋಸಿಸ್ಟಿನ್ ಅಂಶವನ್ನು ನಿಯಂತ್ರಿಸುತ್ತದೆ. ಈ ಹೀಮೋಸಿಸ್ಟಿನ್ ಅಂಶವು ಹಾರ್ಟ್ ಅಟ್ಯಾಕ್ ಗೆ ಹೆಚ್ಚು ಕಾರಣವಾಗುತ್ತದೆ. 

ಮಾನಸಿಕ ಖಿನ್ನತೆ ನಿವಾರಣೆ
ಫೋಲೇಟ್ ಸಾರವು   ಮನಸ್ಸಿನ ಮೇಲೆ  ಹೆಚ್ಚು ಪ್ರಭಾವಿತವಾಗಲು ಕಾರಣವಾಗುತ್ತದೆ ಆದ್ದರಿಂದ ಪ್ರತಿನಿತ್ಯ ಬಸಳೆ ಸೊಪ್ಪನ್ನು ಸೇವಿಸುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ. 

ಕಬ್ಬಿಣದ ಅಂಶ ಹೆಚ್ಚಿಸುತ್ತದೆ. ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಇದ್ದರೆ, ಅದರ ಪರಿಣಾಮವಾಗಿ ಅನೇಕ ರೋಗಗಳು ದೇಹಕ್ಕೆ ಅವಾರಿಸುತ್ತವೆ. ಕಬ್ಬಿಣ ಅಂಶ  ಹೆಚ್ಚಿಸಲು ಬಸಳೆ ಸೊಪ್ಪುನ್ನು ಸಹಕಾರಿ. 

ಸ್ನಾಯುಗಳ ಬಲ

ಬಸಳೆ ಸೊಪ್ಪುನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ  ದೇಹದ ಸ್ನಾಯುಗಳನ್ನು ಸಧೃಡವಾಗಿಸಲು ಸಹಕರಿಸುತ್ತದೆ. ಮೂಳೆಗಳ ಆರೋಗ್ಯಕ್ಕೆ ಹೆಚ್ಚು ಉಪಯೋಗವಾಗಿದೆ. 

ಇದನ್ನೂ ಓದಿ: ತೂಕ ಇಳಿಕೆಯಿಂದ ಹಿಡಿದು ಸುಂದರ ತ್ವಚೆ ಪಡೆಯುವವರೆಗೂ ತುಂಬಾ ಲಾಭದಾಯಕ ಈ ತರಕಾರಿ

ಕ್ಯಾನ್ಸರ್ ನಿಯಂತ್ರಣ
ಬಸಳೆ ಸೊಪ್ಪು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್  ತಡೆಯುವಲ್ಲಿ ಇದು ತುಂಬಾನೆ ಸಹಕಾರಿಯಾಗಿದೆ..ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧುಮೇಹದ ನಿಯಂತ್ರಣದಲ್ಲೂ ಸಹಕಾರಿಯಾಗಿದೆ. 

 ರಕ್ತದೊತ್ತಡ ನಿಯಂತ್ರಣ
 ರಕ್ತದೊತ್ತಡ ಸಮಸ್ಯೆಯಿಂದ ಬಳಲುವವರಿಗೆ ಬಸಳೆ ಸೊಪ್ಪು  ಪ್ರಯೋಜನವಾಗಿದೆ.  ಇದರಲ್ಲಿರುವ  ಪೊಟ್ಯಾಶಿಯಂ ಅಂಶವು  ರಕ್ತದೊತ್ತಡವನ್ನು  ನಿಯಂತ್ರಿಸುತ್ತದೆ. 

ತೂಕ ಇಳಿಕೆಗೆ ಸಹಕಾರಿ
ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹಾಗೂ ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಇದರಲ್ಲಿನ   ಫೈಬರ್ ಅಂಶವು   ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ. 

ರಕ್ತಹೀನತೆ ಸಮಸ್ಯೆ ನಿವಾರಣೆ
ಬಸಳೆ ಸೊಪ್ಪಿನಲ್ಲಿ ಕಬ್ಬಿಣದ ಅಂಶವು ಹೇರಳವಾಗಿದೆ. ದೇಹದಲ್ಲಿ ಕಬ್ಬಿಣ ಅಂಶ ಹೆಚ್ಚಿದಷ್ಟು  ರಕ್ತಹೀನತೆಯ ಸಮಸ್ಯೆಯನ್ನು ತಡೆಯುತ್ತದೆ. ದೇಹದಲ್ಲಿ ನಿಶಕ್ತಿ ತಡೆಗೆ ಕಬ್ಬಿಣ ಅಂಶ ಸಹಕಾರಿ

ಇದನ್ನೂ ಓದಿ: ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಬೇಸಿಗೆಯಲ್ಲಿ ಈ ಆಹಾರಗಳನ್ನು ತಪ್ಪದೇ ಸೇವಿಸಿ

 ಸೌಂದರ್ಯಕ್ಕೂ ಪ್ರಯೋಜನ
ಬಸಳೆ ಆರೋಗ್ಯಕ್ಕೆ ಮಾತ್ರವಲ್ಲದೇ  ಸೌಂದರ್ಯಕ್ಕೂ ಪ್ರಯೋಜನವಾಗಿದೆ.  ಸೌಂದರ್ಯ ಬಯಸುವ ಯುವತಿಯರು ಇದನ್ನು ಸೇವಿಸಬಹುದು ಅಥವಾ ಬಸಳೆ ಸೊಪ್ಪನ್ನು ಅರೆದು ಪೇಸ್ಟ್‌ ರೀತಿ ಮಾಡಿ  ಮುಖಕ್ಕೆ ಫೇಸ್‌ ಮಾಸ್ಕ್‌ಯಾಗಿ  ಬಳಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

 

Trending News