ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು
Drumstick leaves Benefits: ಮುಂಜಾನೆ ನುಗ್ಗೆ ಸೊಪ್ಪಿನ ಕಷಾಯವನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ಇದನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಹಲ್ಲುಗಳನ್ನು ಗಟ್ಟಿಯಾಗಿಸಲು ಇದು ಪ್ರಯೋಜನಕಾರಿಯಾಗಿದೆ.
Drumstick leaves Benefits : ನುಗ್ಗೆ ಸೊಪ್ಪು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇದರ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳು ಹತ್ತಿರವೂ ಸುಳಿಯದಂತೆ ನೋಡಿಕೊಳ್ಳಬಹುದು. ಇದರ ಎಲೆಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದರ ಎಲೆಗಳನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಮುಂಜಾನೆ ನುಗ್ಗೆ ಸೊಪ್ಪಿನ ಕಷಾಯವನ್ನು ಸೇವಿಸುವುದು ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ಇದನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು ಮಾತ್ರವಲ್ಲದೆ, ಹಲ್ಲುಗಳನ್ನು ಗಟ್ಟಿಯಾಗಿಸಲು ಇದು ಪ್ರಯೋಜನಕಾರಿಯಾಗಿದೆ.
ನುಗ್ಗೆ ಸೊಪ್ಪಿನ ಕಷಾಯವನ್ನು ಬಳಸಬಹುದು :
ನುಗ್ಗೆ ಸೊಪ್ಪನ್ನು ನಾನಾ ವಿಧಾನಗಳಲ್ಲಿ ಬಳಸಬಹುದು. ನುಗ್ಗೆ ಸೊಪ್ಪಿನ ಕಷಾಯವನ್ನು ತಯಾರಿಸಿ ಸೇವಿಸಬಹುದು. ಇದಕ್ಕಾಗಿ, ಮೊದಲು ಒಂದು ಪಾತ್ರೆಯಲ್ಲಿ ಎರಡು ಕಪ್ ನೀರನ್ನು ಬಿಸಿ ಮಾಡಿ. ಈ ನೀರು ಬಿಸಿಯಾದ ನಂತರ ಅದಕ್ಕೆ ನುಗ್ಗೆ ಸೊಪ್ಪನ್ನು ಸೇರಿಸಿ. ಬೇಕಿದ್ದರೆ ನುಗ್ಗೆ ಬೀಜಗಳನ್ನು ಕೂಡಾ ಸೇರಿಸಬಹುದು. ಈ ನೀರು ಅರ್ಧದಷ್ಟು ಕಡಿಮೆಯಾಗುವವರೆಗೂ ಕುದಿಸಿ. ನಂತರ ಅದಕ್ಕೆ ಕರಿಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ. ಫಿಲ್ಟರ್ ಮಾಡಿ ಮತ್ತು ಕುಡಿಯಬಹುದು.
ಇದನ್ನೂ ಓದಿ : IVF ಜೋಡಿಯ ಪ್ರಯಾಣ: ಬದುಕಿನ ಪವಾಡ ಸೃಷ್ಟಿಸಲು ವಿಜ್ಞಾನಕ್ಕೆ ಮಾನವೀಯ ಸ್ಪರ್ಶ
ಅಲ್ಲದೆ ನುಗ್ಗೆ ಸೊಪ್ಪಿನ ಪಲ್ಯವನ್ನು ಮಾಡಿ ಕೂಡಾ ಅದನ್ನು ಸೇವಿಸಬಹುದು. ಪಲ್ಯವನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ತಯಾರಿಸಲಾಗುತ್ತದೆ. ಬೇರೆ ಸೊಪ್ಪಿನ ಪಲ್ಯ ಮಾಡುವಂತೆಯೇ ನುಗ್ಗೆ ಸೊಪ್ಪಿನ ಪಲ್ಯವನ್ನು ಕೂಡಾ ಮಾಡಬಹುದು. ಆದರೆ ಇದರಲ್ಲಿ ಸ್ವಳಪ್ ಕಹಿ ಅಂಶ ಇರುತ್ತದೆ ಅಷ್ಟೇ.
ನುಗ್ಗೆ ಸೊಪ್ಪಿನಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಯಾವುವು ?
- ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುತ್ತದೆ. ಇದು ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ.
- ರಕ್ತವನ್ನು ಶುಚಿಗೊಳಿಸುವಲ್ಲಿಯೂ ನುಗ್ಗೆ ಸೊಪ್ಪು ತುಂಬಾ ಉಪಯುಕ್ತವಾಗಿವೆ.
-ಮಧುಮೇಹ ಮತ್ತು ಹೃದ್ರೋಗಿಗಳಿಗೆ ಈ ಸೊಪ್ಪು ವರದಾನವೇ ಸರಿ.
ಇದನ್ನೂ ಓದಿ : Weight Loss By Black Pepper: ಕರಿಮೆಣಸಿನಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ, ಹೇಗೆ ಇಲ್ಲಿ ತಿಳಿದುಕೊಳ್ಳಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ