Eating Garlic Alert: ಈ ಜನರ ಪಾಲಿಗೆ ವಿಷಕ್ಕಿಂತ ಕಮ್ಮಿ ಏನಿಲ್ಲ ಬೆಳ್ಳುಳ್ಳಿ, ತಿನ್ನುವ ಮೊದಲು ಹಾನಿಯನ್ನು ತಿಳಿದುಕೊಳ್ಳಿ
Harful Effects Of Eating Garlic - ಅನೇಕ ಜನರಿಗೆ, ಬೆಳ್ಳುಳ್ಳಿ ವಿಷಕ್ಕಿಂತ ಕಡಿಮೆಯಿಲ್ಲ. ನೀವೂ ಕೂಡ ಯೋಚಿಸದೆ ಬೆಳ್ಳುಳ್ಳಿಯನ್ನು ತಿನ್ನಲು ಹೊರಟಿದ್ದರೆ ಸ್ವಲ್ಪ ಗಮನ ಕೊಡಿ. ಇದು ನಿಮಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.
ನವದೆಹಲಿ: Garlic Bad Impacts - ಬೆಳ್ಳುಳ್ಳಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ, ಆದರೆ ಪ್ರತಿಯೊಬ್ಬರ ಆರೋಗ್ಯಕ್ಕೆ ಎಲ್ಲವೂ ಒಳ್ಳೆಯದಾಗಿರಬೇಕು ಎಂದು ಯೋಚಿಸುವುದು ಸರಿಯಲ್ಲ. ನಮ್ಮ ಮನೆಗಳಲ್ಲಿ, ಬೆಳ್ಳುಳ್ಳಿಯನ್ನು (Garlic) ದಾಲ್ ರುಚಿ ಹೆಚ್ಚಿಸಲು ಅಥವಾ ತರಕಾರಿಗಳ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ತಿಂದರೆ ದೇಹ ಆರೋಗ್ಯವನ್ತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಜನರಿಗೆ, ಬೆಳ್ಳುಳ್ಳಿ ವಿಷಕ್ಕಿಂತ ಕಡಿಮೆಯಿಲ್ಲ. ಹಾಗಾದರೆ ಬೆಳ್ಳುಳ್ಳಿಯನ್ನು ಯಾರು ತಿನ್ನಬಾರದು ಎಂದು ತಿಳಿಯೋಣ ಬನ್ನಿ.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನಬೇಡಿ (Garlic Side Effects)
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಅನೇಕ ಜನರಲ್ಲಿ ಎದೆಯುರಿ, ವಾಕರಿಕೆ ಮತ್ತು ವಾಂತಿ ಸಮಸ್ಯೆ ಉಂಟಾಗುತ್ತದೆ. ಬೆಳ್ಳುಳ್ಳಿ ಆಮ್ಲೀಯತೆಯನ್ನು ಉಂಟುಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ. ಹಾಗಾಗಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನದಿರಲು ಪ್ರಯತ್ನಿಸಿ. ಇಲ್ಲದಿದ್ದರೆ ನಿಮ್ಮ ಸಮಸ್ಯೆ ಹೆಚ್ಚಾಗುವುದು ಖಂಡಿತ.
ಇದನ್ನೂ ಓದಿ-Egg : ಪ್ರತಿದಿನ ಮೊಟ್ಟೆ ತಿನ್ನುವುದು ಈ ಗಂಭೀರ ಕಾಯಿಲೆಗೆ ಅಹ್ವಾನ ನೀಡಿದಂತೆ!
ಬೆಳ್ಳುಳ್ಳಿಯನ್ನು ಔಷಧದೊಂದಿಗೆ ಬಳಸಬೇಡಿ
ಮಾಧ್ಯಮ ವರದಿಗಳ ಪ್ರಕಾರ, ಬೆಳ್ಳುಳ್ಳಿಯನ್ನು ನೈಸರ್ಗಿಕ ರಕ್ತ ತೆಳುವಾಗಿಸುವ ಅಂಶವೆಂದು ಪರಿಗಣಿಸಲಾಗಿದೆ, ಆದ್ದರಿಂದ ನಾವು ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಮತ್ತು ರಕ್ತ ತೆಳುವಾಗಿಸುವ ಔಷಧಿಗಳಾದ ವಾರ್ಫರಿನ್, ಆಸ್ಪಿರಿನ್ ಇತ್ಯಾದಿಗಳ ಜೊತೆಗೆ ಸೇವಿಸಬಾರದು. ಏಕೆಂದರೆ ರಕ್ತ ತೆಳುವಾಗಿಸುವ ಔಷಧಿಗಳು ಮತ್ತು ಬೆಳ್ಳುಳ್ಳಿಯ ಸಂಯೋಜಿತ ಪರಿಣಾಮಗಳು ಅಪಾಯಕಾರಿಯಾಗಿವೆ. ಇದು ಅಪಾಯವನ್ನು ಹೆಚ್ಚಿಸಬಹುದು.
ಗರ್ಭಿಣಿಯರು ಬೆಳ್ಳುಳ್ಳಿ ತಿನ್ನಬಾರದು
ಗರ್ಭಿಣಿಯರು ಅಥವಾ ಹಾಲುಣಿಸುವ ಮಹಿಳೆಯರು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಲೇಬರ್ ಪೆನ್ ಪ್ರೇರೇಪಿಸುತ್ತದೆ ಎಂದು ಹೇಳಲಾಗಿದೆ. ಅದೇ ಸಮಯದಲ್ಲಿ, ಹಾಲುಣಿಸುವ ತಾಯಂದಿರು ಹೆಚ್ಚು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು ಏಕೆಂದರೆ ಅದು ಹಾಲಿನ ರುಚಿಯನ್ನು ಬದಲಾಯಿಸುತ್ತದೆ.
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ ಬಳಸಬೇಕು. ಯಾವುದೇ ಒಂದು ಕಾಯಿಲೆ ಅಥವಾ ಸಮಸ್ಯೆಗೆ ಇದು ಪರಿಹಾರವಲ್ಲ. ಹೆಚ್ಚಿನ ಮಾಹಿತಿಗಾಗಿ ನುರಿತ ವೈದ್ಯರನ್ನು ಸಂಪರ್ಕಿಸಬೇಕು. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ