Black Gram Health Tips - ಬೇಳೆಕಾಳುಗಳಲ್ಲಿ ಹಲವು ರೀತಿಯ ಪೌಷ್ಟಿಕಾಂಶಗಳು ಇರುತ್ತವೆ. ಅವುಗಳಲ್ಲೂ ವಿಶೇಷವಾಗಿ ಉದ್ದಿನಬೇಳೆಯಲ್ಲಿ (Black Gram) ಸಾಕಷ್ಟು ಪೌಷ್ಟಿಕಾಂಶಗಳಿರುತ್ತವೆ. ಆದರೆ ಸಾಮಾನ್ಯವಾಗಿ ಜನರು ಉದ್ದಿನ ಬೇಳೆಯನ್ನು ತಿನ್ನಲು ಇಷ್ಟಪಡುವುದಿಲ್ಲ. ಆದ್ರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಉದ್ದಿನಬೇಳೆಯ ಪ್ರಯೋಜನಗಳನ್ನು ಓದಿ ನೀವೂ ಕೂಡ ನಿಮ್ಮ ದೈನಂದಿನ ಡಯಟ್ (Black Gram In Daily Diet) ಉದ್ದಿನಬೇಳೆಯನ್ನು ಶಾಮೀಲುಗೊಳಿಸುವಿರಿ.
ಉದ್ದಿನಬೇಳೆಯಲ್ಲಿ ಪೌಷ್ಟಿಕಾಂಶದ ಪ್ರಮಾಣವು ತುಂಬಾ ಹೆಚ್ಚಾಗಿದೆ. ಉತ್ತಮ ಪ್ರಮಾಣದ ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ಗಳು ಇದರಲ್ಲಿ ಕಂಡುಬರುತ್ತವೆ. ಇದರ ಹೊರತಾಗಿ, ಉದ್ದಿನಬೇಳೆಯಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ, ಇದರಿಂದಾಗಿ ನೀವು ಈ ಬೆಲೆಯನ್ನು ನೀವು ನಿಮ್ಮ ದೈನಂದಿನ (Health Tips) ಆಹಾರದ ಭಾಗವನ್ನಾಗಿಸಬಹುದು.
ಹೃದಯವನ್ನು ಆರೋಗ್ಯಕರವಾಗಿಸುತ್ತದೆ (Black Gram For Healthy Heart)
ಉದ್ದಿನಬೇಳೆಯಲ್ಲಿ ಪೊಟ್ಯಾಸಿಯಮ್ ಅನ್ನು ಇರುತ್ತದೆ, ಇದು ರಕ್ತನಾಳಗಳು ಮತ್ತು ಅಪಧಮನಿಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸದೃಢವಾಗುತ್ತದೆ. ಹೀಗಾಗಿ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಬ್ಲಡ್ ಶುಗರ್ ಲೆವಲ್ ಅನ್ನು ಕಂಟ್ರೋಲ್ ಮಾಡುತ್ತದೆ (Black Gram To Control Diabetis )
ಉದ್ದಿನಬೇಳೆಯಲ್ಲಿ ಡಯಟರೀ ಫೈಬರ್ ಹೇರಳ ಪ್ರಮಾಣದಲ್ಲಿರುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ ಡಯಾಬಿಟಿಸ್ ಕಾಯಿಲೆ ಇರುವವರು ಉದ್ದಿನ ಬೇಳೆಯನ್ನು ಸೇವಿಸಿದರೆ ಉತ್ತಮ.
ಇದನ್ನೂ ಓದಿ-ಡಯಾಬಿಟೀಸ್ ಗೆ ಕಾರಣವಾಗುವ ನಾಲ್ಕು ಪ್ರಮುಖ ಕಾರಣಗಳಿವು..! ನೀವೂ ಎಚ್ಚೆತ್ತುಕೊಳ್ಳಿ
ನೋವು ಮತ್ತು ಊತ ನಿವಾರಕ (Black Gram As Antioxident)
ಉದ್ದಿನಬೇಳೆಯಲ್ಲಿ ಹೇರಳ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಕಂಡುಬರುತ್ತವೆ. ಇವು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಸ್ನಾಯು ಮತ್ತು ಕೀಲುನೋವಿನಲ್ಲಿ ಆರಾಮ ಸಿಗುತ್ತದೆ.
ಇದನ್ನೂ ಓದಿ-Barefoot walking: ಬರಿಗಾಲಿನಲ್ಲಿ ನಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ
ಮೂಳೆಗಳ ಆರೋಗ್ಯಕ್ಕೆ ಉತ್ತಮ (Black Gram For Bone Health)
ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕದಂತಹ ಪೋಷಕಾಂಶಗಳು ಕಪ್ಪು ಸಿಪ್ಪೆಯುಳ್ಳ ಉದ್ದಿನಬೇಳೆಯಲ್ಲಿ ಕಂಡುಬರುತ್ತವೆ, ಇದು ಮೂಳೆಗಳ ಬಲವರ್ಧನೆಗೆ ಉತ್ತಮ. ಹೀಗಾಗಿ ಇದು ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದಲ್ಲದೆ, ಇದು ಆಸ್ಟಿಯೊಪೊರೋಸಿಸ್ನಂತಹ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Coriander water : ಪ್ರತಿದಿನ ಕೊತ್ತಂಬರಿ ನೀರು ಕುಡಿಯಿರಿ : ಇದರಿಂದ ಆರೋಗ್ಯಕ್ಕಿದೆ ಈ 6 ಪ್ರಯೋಜನಗಳು!
(Disclaimer: ಈ ಲೇಖನದಲ್ಲಿ ನೀಡಲಾಗಿರುವ ವಿಧಾನ, ಪದ್ಧತಿ, ಮನೆಮದ್ದುಗಳನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಅವುಗಳನ್ನು ಕೇವಲ ಸಲಹೆಯ ರೂಪದಲ್ಲಿ ಸ್ವೀಕರಿಸಿ. ಯಾವುದೇ ಮಾಹಿತಿಯನ್ನು ಅನುಸರಿಸುವ ಮುನ್ನ ನುರಿತ ವೈದ್ಯರ ಸಲಹೆ ಪಡೆದುಕೊಳ್ಳಿ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ