ಅಡಿಗೆ ಸೋಡಾದ ಅಡ್ಡಪರಿಣಾಮಗಳು: ಪತ್ರಿ ಅಡುಗೆಮನೆಯಲ್ಲಿ ಅಡಿಗೆ ಸೋಡಾ ಇದ್ದೇ ಇರುತ್ತದೆ. ಅಡಿಗೆ ಸೋಡಾವು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಮನೆಯಲ್ಲಿ ಬಜ್ಜಿ, ಬೋಂಡಾ ರೀತಿಯ ಖಾದ್ಯಗಳನ್ನು ತಯಾರಿಸುವಾಗ ಅಡಿಗೆ ಸೋಡಾವನ್ನು ಬಳಸಲಾಗುತ್ತದೆ. ಇದಲ್ಲದೆ,  ಅನೇಕ ರೀತಿಯ ಬೇಕರಿ ಉತ್ಪನ್ನಗಳನ್ನು ತಯಾರಿಸಲು ಸಹ ಬೇಕಿಂಗ್ ಸೋಡಾವನ್ನು ಬಳಸಲಾಗುತ್ತದೆ. ಇದರಿಂದಾಗಿ ಆಹಾರವನ್ನು ನಯಗೊಳಿಸುವುದು ಸುಲಭವಾಗುತ್ತದೆ. ಕೆಲವರು ಸೋಡಾ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಅಡಿಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಕೆಟ್ಟದ್ದಲ್ಲ. ಆದರೆ ಅದನ್ನು ಅತಿಯಾಗಿ ತಿನ್ನುವುದು ಹಾನಿಕಾರಕವೆಂದು ಸಾಬೀತುಪಡಿಸಬಹುದು. ಭಾರತದ ಖ್ಯಾತ ಪೌಷ್ಟಿಕತಜ್ಞರ ಪ್ರಕಾರ,  ಅಡಿಗೆ ಸೋಡಾದ ಅತಿಯಾದ ಸೇವನೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


COMMERCIAL BREAK
SCROLL TO CONTINUE READING

ಅಡಿಗೆ ಸೋಡಾದ ಅತಿಯಾದ ಸೇವನೆಯು ನಮ್ಮ ದೇಹದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ...


ಅಡಿಗೆ ಸೋಡಾದ ಅಡ್ಡಪರಿಣಾಮಗಳು: 
* ಗ್ಯಾಸ್ಟ್ರಿಕ್ ಸಮಸ್ಯೆ:

ಬೇಕಿಂಗ್ ಸೋಡಾ ಅತಿಯಾಗಿ ತಿನ್ನುವುದರಿಂದ ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆ, ಇದು ವಾಯು ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಸೋಡಾವನ್ನು ಸೇವಿಸಿದಾಗ, ಅದು ರಾಸಾಯನಿಕ ಪ್ರಕ್ರಿಯೆಯ ಅಡಿಯಲ್ಲಿ ಆಮ್ಲದೊಂದಿಗೆ ಬೆರೆಯುತ್ತದೆ. ಆದ್ದರಿಂದ, ಅಡಿಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.


ಇದನ್ನೂ ಓದಿ- Weight Loss: ಬೆಳಗಿನ ಉಪಾಹಾರದಲ್ಲಿ ಈ 3 ಆಹಾರಗಳನ್ನು ಸೇವಿಸಿದರೆ ಕಡಿಮೆ ಆಗುತ್ತೆ ತೂಕ


* ಹೃದಯಾಘಾತ: 
ಅಡಿಗೆ ಸೋಡಾದಲ್ಲಿ ಸೋಡಿಯಂ ಸಮೃದ್ಧವಾಗಿದೆ.  ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ನಮ್ಮ ಹೃದಯದ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಅಡಿಗೆ ಸೋಡಾದ ಮಿತಿಮೀರಿದ ಸೇವನೆಯು ಹೃದಯಾಘಾತ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಹಾಗಾಗಿ, ಅಡಿಗೆ ಸೋಡಾವನ್ನು ಹಿತ-ಮಿತವಾಗಿ ಬಳಸಿ.


ಇದನ್ನೂ ಓದಿ- Health Tips: ಬರ್ಗರ್, ಪಿಜ್ಜಾ ತಿಂದರೆ ನಿಮ್ಮ ಆಯಸ್ಸು ನಿಮಿಷಕ್ಕೆ ಇಷ್ಟರಂತೆ ಕಡಿಮೆಯಾಗುತ್ತೆ!


ಅಡಿಗೆ ಸೋಡಾವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ನಿಮಗೆ ಜೀರ್ಣಕ್ರಿಯೆಯು ಕೆಟ್ಟದಾಗಿದ್ದರೆ, ಅರ್ಧ ಚಮಚ ಅಡಿಗೆ ಸೋಡಾವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಪರಿಹಾರ ಪಡೆಯಬಹುದು. ಆದರೆ, ನೆನಪಿಡಿ ವಾರದಲ್ಲಿ ಒಂದೆರಡು ಬಾರಿಗಿಂತ ಹೆಚ್ಚು ಬಾರಿ ಇದನ್ನು ಸೇವಿಸಬಾರದು. ಇದರ ಅತಿಯಾದ ಸೇವನೆಯು ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.