ಬೆಂಗಳೂರು : ಮೆಂತ್ಯೆ ಕಾಳು ನೋಡುವುದಕ್ಕೆ ಸಣ್ಣದಾಗಿದ್ದರೂ ಅದರ ಪ್ರಯೋಜನ ಬಹಳ. ಹೆಚ್ಚಿನ ಮನೆಗಳಲ್ಲಿ ಮೆಂತ್ಯೆ ಒಂದು ಪ್ರಮುಖ  ಮಸಾಲೆಯಾಗಿದೆ. ಇದರ ಕಾಳುಗಳು ಮಾತ್ರವಲ್ಲದೆ ಸೊಪ್ಪು ಕೂಡಾ ಔಷಧೀಯ ಗುಣಗಳಿಂದ ಕೂಡಿದೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಲಭಿಸುವುದು. ಮೆಂತ್ಯೆ ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಬೀಜಗಳು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವುದರ ಹೊರತಾಗಿ, ತೂಕ ನಷ್ಟಕ್ಕೂ ಸಹಕಾರಿಯಾಗಿದೆ. ಮೆಂತ್ಯೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಫೈಬರ್  ಅಡಗಿರುತ್ತದೆ. ಇದರಲ್ಲಿರುವ ನಾರಿನಂಶ ತೂಕ ಇಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳನ್ನು ಸಹ ಹೊಂದಿದೆ. ಚಯಾಪಚಯವನ್ನು ಸುಧಾರಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.  


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕೆ  ಮೆಂತ್ಯೆ  ಬೀಜಗಳು : 
ನೆನೆಸಿದ  ಮೆಂತ್ಯೆ  ಬೀಜಗಳು:

ನೆನೆಸಿದ ಮೆಂತ್ಯೆ ಬೀಜಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ನೆನೆಸಿದ ಮೆಂತ್ಯೆ ಬೀಜಗಳನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬಿನ ಮೇಲೆ ತ್ವರಿತ ಪರಿಣಾಮ ಬೀರುತ್ತದೆ. ಅರ್ಧ ಚಮಚ ಮೆಂತ್ಯೆ ಬೀಜಗಳನ್ನು ಒಂದು ಪಾತ್ರೆ  ನೀರಿನಲ್ಲಿ ಹಾಕಿ ನೆನೆಸಿ. ಈ ನೆನೆಸಿದ ಧಾನ್ಯಗಳನ್ನು ಮರುದಿನ ಬೆಳಿಗ್ಗೆ  ತಿನ್ನಬೇಕು. 


ಇದನ್ನೂ ಓದಿ : ವಾಯು ಮಾಲಿನ್ಯವು ಪಾರ್ಕಿನ್ಸನ್ ಕಾಯಿಲೆಯನ್ನು ಉಂಟುಮಾಡಬಹುದು, ಅದನ್ನು ತಪ್ಪಿಸಲು ಈ ಮಾರ್ಗ ಅನುಸರಿಸಿರಿ..!


ಮೆಂತ್ಯೆ  ನೀರು:
ತೂಕ ಇಳಿಸಿಕೊಳ್ಳಲು ಮೆಂತ್ಯೆ ನೀರನ್ನು ತಯಾರಿಸಿ ಕುಡಿಯಬಹುದು. ಈ ನೀರನ್ನು ತಯಾರಿಸಲು, ಅರ್ಧ ಚಮಚ ಮೆಂತ್ಯೆ  ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.


ಮೆಂತ್ಯೆ ಚಹಾ:
ಮೆಂತ್ಯೆ ಬೀಜಗಳ ಚಹಾವನ್ನು ತಯಾರಿಸುವುದು ತುಂಬಾ ಸುಲಭ. ಇದಕ್ಕಾಗಿ, ಒಂದು ಚಮಚ ಮೆಂತ್ಯೆ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಅದಕ್ಕೆ ಸಣ್ಣ ತುಂಡು ಶುಂಠಿಯನ್ನು ಸೇರಿಸಿ. ಈ ನೀರನ್ನು ಕುದಿಸಿದ ನಂತರ, ಅದನ್ನು ಒಂದು ಕಪ್‌ಗೆ ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.


ಇದನ್ನೂ ಓದಿ : ಕ್ಯಾನ್ಸರ್ ರೋಗವನ್ನು ಬುಡದಿಂದಲೇ ತೊಲಗಿಸುತ್ತೆ ಈ ಬೇರು! ಹಾಲಿನೊಂದಿಗೆ ಬೆರೆಸಿ ಕುಡಿದರೆ ಶಾಶ್ವತ ಮುಕ್ತಿ ಖಚಿತ


ಮೊಳಕೆ ಕಟ್ಟಿದ ಮೆಂತ್ಯೆ :
ಹೆಸರು ಕಾಳನ್ನು ಯಾವ ರೀತಿ ಮೊಳಕೆ ಬರಿಸಲಾಗುತ್ತದೆಯೋ ಮೆಂತ್ಯೆ ಬೀಜಗಳನ್ನು ಕೂಡಾ ಹಾಗೆಯೇ ಮೊಳಕೆ ಬರಿಸಬಹುದು. ಇದಕ್ಕಾಗಿ ನೆನೆಸಿದ  ಮೆಂತ್ಯೆ ಬೀಜಗಳನ್ನು ಒದ್ದೆಯಾದ ಹತ್ತಿ ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಈ ಬೀಜಗಳು 2 ರಿಂದ 3 ದಿನಗಳಲ್ಲಿ ಚೆನ್ನಾಗಿ ಮೊಳಕೆಯೊಡೆಯುತ್ತವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ