ನವದೆಹಲಿ : Monsoon Health Tips : ಮಳೆಗಾಲದಲ್ಲಿ, ಮಳೆ ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ. ಆದರೆ ಈ ಋತುವಿನಲ್ಲಿ ಹಲವಾರು ರೋಗಗಳು ಕೂಡಾ ಬರುತ್ತವೆ. ಈ ಋತುವಿನಲ್ಲಿ, ಹೊಟ್ಟೆ ಉಬ್ಬರ, ಅಲರ್ಜಿ, ಶೀತ, ಜ್ವರ ಮುಂತಾದ ಸಮಸ್ಯೆಗಳು ಅತಿಯಾಗಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ಆನಂದಿಸುವಾಗ, ಆರೋಗ್ಯದ ಬಗ್ಗೆ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಕೂಡಾ ಅವಶ್ಯಕ. 


COMMERCIAL BREAK
SCROLL TO CONTINUE READING

ಈ ಮುನ್ನೆಚ್ಚರಿಕೆಗಳನ್ನು ಇಟ್ಟುಕೊಂಡರೆ, ಕಾಯಿಲೆ ಬೀಳುವುದನ್ನು ತಪ್ಪಿಸಬಹುದು. 
ಮಳೆಗಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ 3 ಪ್ರಮುಖ ವಿಚಾರಗಳು ತಿಳಿದಿರಲಿ : 
1. ಮಳೆಗಾಲದ ದಿನಗಳಲ್ಲಿ ಹೊರಗಿನ ಆಹಾರವನ್ನು (Food) ಸೇವಿಸುವುದನ್ನು ತಪ್ಪಿಸಬೇಕು. ಇದರಿಂದ  ಕಾಮಾಲೆ, ಟೈಫಾಯಿಡ್, ಹೊಟ್ಟೆ, ಕರುಳಿನ ಕಾಯಿಲೆಗಳು ಬರುವುದನ್ನು ತಪ್ಪಿಸಬಹುದು.  ಏನೇ ಆಹಾರ ಸೇವಿಸಿದರೂ, ತಾಜಾ ಮನೆಯಲ್ಲಿ ತಯಾರಿಸಿದ ಆಹಾರವನ್ನೇ (home made food) ಸೇವಿಸಿ. ಅಲ್ಲದೆ ಈ ಸಂದರ್ಭದಲ್ಲಿ ಹೊರಗಿನಿಂದ ತರುವ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರವೆ ಬಳಸಬೇಕು. 


ಇದನ್ನೂ ಓದಿ : ಸಿಡಿಲು ಬರುವುದಕ್ಕೂ ಮುನ್ನ ಸಿಗುತ್ತವೆ ಈ ಸೂಚನೆಗಳು , ತಪ್ಪಿಯೂ ಆಗದಿರಲಿ ಈ ತಪ್ಪುಗಳು


2. ಮಳೆಗಾಲದಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಕೀಟಗಳು ಮತ್ತು ನೊಣಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಹೊರಗಿನಿಂದ ಮನೆಯ ಒಳಗೆ ಬರುವ ಯಾರೇ ಆದರೂ ಚಪ್ಪಲಿಯನ್ನು ಮನೆಯ ಒಳಗೆ ತೆಗೆದುಕೊಂಡು ಬರಬಾರದು. ಚಪ್ಪಲಿಯನ್ನು ಮನೆಯ ಹೊರಗೆ ಬಿಡಬೇಕು. ಇದರಿಂದ  ಚರ್ಮದ ಸೋಂಕು (Skin care) , ಜ್ವರ, ಮುಂತಾದ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.


3. ಮಲೆಗಾಲದಲ್ಲಿ ಹರಡುವ ರೋಗಗಳು ಅಶುದ್ಧ ನೀರಿನ (Water) ಕಾರಣದಿಂದಲೇ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಈ ಹೊತ್ತಿನಲ್ಲಿ ಕುಡಿಯುವ ಅಥ್ವಾ ಅಡುಗೆಗೆ ಬಳಸುವ ನೀರಿನ ಶುದ್ಧತೆಯ ಬಗ್ಗೆ ಅತಿಯಾದ ಎಚ್ಚರಿಕೆ ಅಗತ್ಯ.  ಎಷ್ಟು ಸಾಧ್ಯವೋ ಅಷ್ಟು ಕುಡಿಸಿ ಆರಿಸಿದ ನೀರನ್ನೇ ಬಳಸಬೇಕು. 


ಇದನ್ನೂ ಓದಿ : Benefits of Tamarind : ವೇಗವಾಗಿ ದೇಹದ ತೂಕ ಇಳಿಸಲು ಹುಣಸೆ ಹಣ್ಣು : ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ