ಸಿಡಿಲು ಬರುವುದಕ್ಕೂ ಮುನ್ನ ಸಿಗುತ್ತವೆ ಈ ಸೂಚನೆಗಳು , ತಪ್ಪಿಯೂ ಆಗದಿರಲಿ ಈ ತಪ್ಪುಗಳು

Lightning Strike Sign: ಆಕಾಶದಿಂದ ಸಿಡಿಲು ಬರುವುದಕ್ಕೂ ಮುನ್ನ ನಮ್ಮ ದೇಹವು ಕೆಲವು ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ.  ನೀವು ಈ ಸಂಕೇತಗಳನ್ನು  ಗುರುತಿಸಿದರೆ ಮತ್ತು ಆ ಸಂರ್ಭದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಿದರೆ,  ಸುರಕ್ಷಿತವಾಗಿರಬಹುದು.

Written by - Ranjitha R K | Last Updated : Jul 13, 2021, 07:57 PM IST
  • ಭಾರತದಲ್ಲಿ ಪ್ರತಿ ವರ್ಷ ಸುಮಾರು 2 ಸಾವಿರ ಜನರು ಸಿಡಿಲು ಬಡಿದು ಸಾಯುತ್ತಾರೆ.
  • ನಮ್ಮ ಸುತ್ತ ಮಿಂಚಿನ ಅಪಾಯ ಬಂದಾಗ, ನಮ್ಮ ದೇಹವು ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ
  • ಈ ಸಂಕೇತಗಳನ್ನು ಗುರುತಿಸಿದರೆ ಸುರಕ್ಷಿತವಾಗಿರಬಹುದು.
ಸಿಡಿಲು ಬರುವುದಕ್ಕೂ ಮುನ್ನ  ಸಿಗುತ್ತವೆ ಈ ಸೂಚನೆಗಳು , ತಪ್ಪಿಯೂ  ಆಗದಿರಲಿ ಈ ತಪ್ಪುಗಳು  title=
ನಮ್ಮ ಸುತ್ತ ಮಿಂಚಿನ ಅಪಾಯ ಬಂದಾಗ, ನಮ್ಮ ದೇಹವು ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ (photo zee news)

ನವದೆಹಲಿ : Lightning Strike Sign: ಮಳೆಗಾಲದಲ್ಲಿ ಪ್ರವಾಹ, ಗುಡುಗು ಸಹಿತ ಅನೇಕ ನೈಸರ್ಗಿಕ ಸಮಸ್ಯೆಗಳನ್ನು ತರುತ್ತದೆ. ಅಂದಾಜಿನ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 2 ಸಾವಿರ ಜನರು ಸಿಡಿಲು ಬಡಿದು ಸಾಯುತ್ತಾರೆ. ಆದರೆ ಆಕಾಶದಿಂದ ಸಿಡಿಲು ಬರುವುದಕ್ಕೂ ಮುನ್ನ ನಮ್ಮ ದೇಹವು ಕೆಲವು ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ.  ನೀವು ಈ ಸಂಕೇತಗಳನ್ನು  ಗುರುತಿಸಿದರೆ ಮತ್ತು ಆ ಸಂದರ್ಭದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ತಪ್ಪಿಸಿದರೆ,  ಸುರಕ್ಷಿತವಾಗಿರಬಹುದು.

ಮಿಂಚಿನ ಮೊದಲು ದೇಹವು ಯಾವ ಸಂಕೇತವನ್ನು ನೀಡುತ್ತದೆ? 
ಭಾರತೀಯ ಹವಾಮಾನ ಇಲಾಖೆಯ (India Meteorological Department) ನಾಗ್ಪುರ ಕೇಂದ್ರದ ವೆಬ್‌ಸೈಟ್ ಪ್ರಕಾರ, ನಮ್ಮ ಸುತ್ತ ಮಿಂಚಿನ ಅಪಾಯ ಬಂದಾಗ, ನಮ್ಮ ದೇಹವು ಸಂಕೇತವನ್ನು ನೀಡಲು ಪ್ರಾರಂಭಿಸುತ್ತದೆ. ಅದನು ಗುರುತಿಸುವ ಮೂಲಕ ನಾವು ಸುರಕ್ಷಿತವಾಗಿರಬಹುದು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ನಿಮ್ಮ ಕತ್ತಿನ ಹಿಂಭಾಗದ ಭಾಗ ಅಥವಾ ನಿಮ್ಮ ತಲೆಯ ಕೂದಲು (Hair) ಭಾರೀ ಮಳೆ, ಮಿಂಚು  ಬರುವ ಹೊತ್ತಿಗೆ ಎದ್ದು ನಿಲ್ಲಲು ಪ್ರಾರಂಭಿಸುತ್ತದೆ.  ಈ ಅಪಾಯವನ್ನು ಅರಿತುಕೊಂಡ  ಮನೆ ಅಥವಾ ಛಾವಣಿಯ ಆಶ್ರಯಕ್ಕೆ ಬರುವುದು ಸೂಕ್ತ . 

ಇದನ್ನೂಓದಿ : Side Effects Of Eating Clove : ಆಹಾರದ ರುಚಿ ಹೆಚ್ಚಿಸುವ ಲವಂಗವನ್ನು ಇವರಿಗೆ ಸಮಸ್ಯೆಯಾಗಿ ಪರಿಣಮಿಸಬಹುದು

ನ್ಯಾಷನಲ್ ಜಿಯಾಗ್ರಫಿಕ್ ವೆಬ್‌ಸೈಟ್ (National Geographic Website) ಪ್ರಕಾರ, ಮೋಡಗಳಲ್ಲಿನ ನೆಗೆಟಿವ್ ಚಾರ್ಜ್ ಹೆಚ್ಚಳದಿಂದಾಗಿ,  ನಮ್ಮ ಕೂದಲಿನ ತುದಿಯಿಂದ ಪಾಸಿಟಿವ್ ಚಾರ್ಜ್ ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ. ಇದರಿಂದಾಗಿ ನಮ್ಮ ಕೂದಲು ಮೇಲಕ್ಕೇಳುತ್ತದೆ.  

ಮುನ್ನೆಚ್ಚರಿಕೆಗಳು : 
 ಭಾರೀ ಮಳೆಯಾಗುತ್ತಿದ್ದು, ನಿಮ್ಮ ದೇಹವು ಮಿಂಚಿನ ಲಕ್ಷಣಗಳನ್ನು ತೋರಿಸುತ್ತಿದ್ದಾರೆ, ಆ ಹೊತ್ತಿನಲ್ಲಿ ನೀವು ಈ ಕೆಲಸವನ್ನು  ಮಾಡಬಾರದು. 

1. ಯಾವುದೇ ವಿದ್ಯುತ್ ಅಥವಾ ದೂರವಾಣಿ ಕಂಬಗಳು ಮತ್ತು ತಂತಿಗಳ ಬಳಿ ಹೋಗಬೇಡಿ.
2. ಮೊಬೈಲ್ ಫೋನ್ (Mobile phone) ಅಥವಾ ಇತರ ಗ್ಯಾಜೆಟ್‌ಗಳನ್ನು ಬಳಸಬೇಡಿ.
3. ಮನೆಯ ಹೊರಗೆ ನಿಲ್ಲಬೇಡಿ.
4. ನೀವು ಕೊನೆಯ ಬಾರಿಗೆ ಮಿಂಚಿನ ಶಬ್ದವನ್ನು ಕೇಳಿದ ನಂತರ 30 ನಿಮಿಷಗಳ ಕಾಲ ಹೊರಗೆ ಹೋಗಬೇಡಿ.
5. ನೀರಿನ (Water) ಸಂಪರ್ಕಕ್ಕೆ ಬರಬೇಡಿ.
6. ಕಲ್ಲಿನ ಗೋಡೆಗಳ ಪಕ್ಕದಲ್ಲಿ ನಿಲ್ಲಬೇಡಿ.
7. ಎತ್ತರದ ವಸ್ತುಗಳು ಅಥವಾ ವಸ್ತುಗಳ ಬಳಿ ನಿಲ್ಲಬೇಡಿ.
8.  ಮರದ ಆಶ್ರಯಕ್ಕೆ ಹೋಗಬೇಡಿ.
9.  ಲೋಹದೊಂದಿಗೆ ಸಂಪರ್ಕಕ್ಕೆ ಬರಬೇಡಿ.

ಇದನ್ನೂಓದಿ : ಡಯಾಬಿಟಿಸ್ ರೋಗಿಗಳಾಗಿದ್ದರೆ ಈ ವಸ್ತುವನ್ನು ಹೀಗೆ ಸೇವಿಸಿ ನಿಯಂತ್ರಣದಲ್ಲಿರುತ್ತದೆ ಶುಗರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News