ನವದೆಹಲಿ : ದೀರ್ಘಕಾಲದ ನಂತರ ಫ್ರಿಜ್ ನಲ್ಲಿ ಇಟ್ಟ ಆಹಾರವನ್ನು ತಿನ್ನುವುದು ಅನೇಕ ರೋಗಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಫ್ರಿಜ್ನಲ್ಲಿ ಇರಿಸಲಾದ ಆಹಾರವನ್ನು ಮತ್ತೆ ಬಿಸಿ ಮಾಡಿ ಮತ್ತು ಸಾಧ್ಯವಾದಷ್ಟು ಬೇಗ ಸೇವಿಸಬೇಕು. ಫ್ರಿಡ್ಜ್ ನಲ್ಲಿತ್ತಿದ್ದೇವೆ ಎಂದ ಮಾತ್ರಕ್ಕೆ ಅದು ಎಷ್ಟು ದಿನಗಳವರೆಗೆ ಸುರಕ್ಷಿತ ಎಂದು ಭಾವಿಸುವುದು ಖಂಡಿತಾ ತಪ್ಪು. ಫ್ರಿಡ್ಜ್ ನಲ್ಲಿಟ್ಟ ಆಹಾರವನ್ನು (food stored in fridge) ನಿರ್ದಿಷ್ಟ ಸಮಯದೊಳಗೆ ತಿಂದು ಮುಗಿಸಬೇಕು. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಬೇಳೆ :
ಬೇಳೆ (Dal) ಉಳಿದಿದ್ದರೆ ಅದನ್ನು ಫ್ರಿಜ್ ನಲ್ಲಿ ಇಟ್ಟುಕೊಂಡಿದ್ದರೆ, ನಂತರ ಅದನ್ನು 2 ದಿನಗಳ ಒಳಗೆ ಮತ್ತೆ ಸೇವಿಸಬೇಕು. 2 ದಿನಗಳಿಗಿಂತ ಹೆಚ್ಚು ಕಾಲ ಬೇಳೆಯನ್ನು ಫ್ರಿಜ್ ನಲ್ಲಿ ಇಟ್ಟು ತಿಂದರೆ ಆಸಿಡಿಟಿ ಸಮಸ್ಯೆ ಎದುರಾಗುತ್ತದೆ.
ಇದನ್ನೂ ಓದಿ : Group Health Insurance: ಶೇ.30 ರಷ್ಟು ದುಬಾರಿಯಾದ ಗ್ರೂಪ್ ಹೆಲ್ತ್ ಇನ್ಸುರೆನ್ಸ್ ಪಾಲಸಿ, ಕಂಪನಿಗಳು ಹೇಳಿದ್ದೇನು?
ಅನ್ನ :
ರೆಫ್ರಿಜರೇಟರ್ ನಲ್ಲಿಟ್ಟ ಅನ್ನ ವನ್ನು (Rice) ಕೂಡಾ 2 ದಿನಗಳಲ್ಲಿ ತಿಂದು ಮುಗಿಸಬೇಕು. ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಫ್ರಿಜ್ ನಲ್ಲಿ ಇಟ್ಟ ಅನ್ನವನ್ನು ಸೇವಿಸುವ ಮೊದಲು, ಅದನ್ನು ರೂಂ ಟೆಂಪರೇಚರ್ ಗೆ ತರಬೇಕು. ನಂತರ ಅದನ್ನು ಬಿಸಿ ಮಾಡಿಯೇ ತಿನ್ನಬೇಕು.
ಹಣ್ಣುಗಳು :
ಆಗಾಗ್ಗೆ ಜನರು ಬೇಯಿಸಿದ ಆಹಾರವನ್ನು ಕಚ್ಚಾ ತರಕಾರಿಗಳೊಂದಿಗೆ (Vegetables) ಒಂದೇ ಶೆಲ್ಫ್ ನಲ್ಲಿ ಒಟ್ಟಿಗೆ ಇಡುತ್ತಾರೆ. ಹೀಗೆ ಮಾಡುವುದರಿಂದ, ಫ್ರಿಜ್‌ನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಮತ್ತು ಆಹಾರವು ಬೇಗನೆ ಹಾಳಾಗುತ್ತದೆ. ಹಸಿ ಮತ್ತು ಬೇಯಿಸಿದ ಆಹಾರವನ್ನು ಪಾತ್ರೆಗಳಿಂದ ಮುಚ್ಚಿದ ಪ್ರತ್ಯೇಕ ಶೆಲ್ಫ್ ನಲ್ಲಿ ಇರಿಸಬೇಕು. ಹೀಗೆ ಮಾಡುವುದರಿಂದ, ಹಸಿ ಆಹಾರದ ಬ್ಯಾಕ್ಟೀರಿಯಾವು ಬೇಯಿಸಿದ ಆಹಾರವನ್ನು ಹಾಳು ಮಾಡಲು ಸಾಧ್ಯವಾಗುವುದಿಲ್ಲ. ಬೇಯಿಸಿದ ಆಹಾರವನ್ನು ಸ್ಟೀಲ್ ಡಬ್ಬದಲ್ಲಿ ಇಟ್ಟುಕೊಂಡರೆ ಉತ್ತಮ.
ಕತ್ತರಿಸಿದ ಸೇಬು :
ಸೇಬನ್ನು (apple) ಕತ್ತರಿಸಿದ ನಂತರ ಆದಷ್ಟು ಬೇಗ ತಿನ್ನಲು ಪ್ರಯತ್ನಿಸಬೇಕು. ಇಲ್ಲದಿದ್ದರೆ, ಅದರಲ್ಲಿ ಆಕ್ಸಿದೈಜೆಶನ್ ಪ್ರಾರಂಭವಾಗುತ್ತದೆ ಮತ್ತು ಮೇಲಿನ ಪದರವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಒಂದು ಸೇಬನ್ನು ಕತ್ತರಿಸಿದ ನಂತರ, ಅದನ್ನು 4 ಗಂಟೆಗಳ ಒಳಗೆ ತಿನ್ನುವುದು ಉತ್ತಮ. ಕತ್ತರಿಸಿದ 6 ರಿಂದ 8 ಗಂಟೆಗಳ ನಂತರ ಯಾವುದೇ ಹಣ್ಣುಗಳನ್ನು ತಿನ್ನಬಾರದು ಎಂಬುದು ಗಮನಿಸಬೇಕಾದ ಸಂಗತಿ.
ಇದನ್ನೂ ಓದಿ : ಮೊಟ್ಟೆಯ ಜೊತೆ ಎಂದಿಗೂ ಈ ವಸ್ತುಗಳನ್ನು ಸೇವಿಸಬಾರದು
ಚಪಾತಿ :
ಚಪಾತಿಯನ್ನು ಫ್ರಿಜ್ ನಲ್ಲಿ (roti stored in fridge) ಇಟ್ಟುಕೊಂಡಿದ್ದರೆ, ಖಂಡಿತವಾಗಿಯೂ ಅದನ್ನು 12 ರಿಂದ 14 ಗಂಟೆಗಳ ಒಳಗೆ ತಿನ್ನಬೇಕು. ಇಲ್ಲದೆ ಹೋದಲ್ಲಿ, ಅದರ ಪೌಷ್ಠಿಕಾಂಶ ನಷ್ಟವಾಗುತ್ತದೆ. ಅಲ್ಲದೆ, ಹೊಟ್ಟೆ ನೋವಿನ ಸಮಸ್ಯೆಯನ್ನು ಕೂಡ ತಂದೊಡ್ಡಬಹುದು .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ