fitness tips to stay healthy: ಸದಾ ಆರೋಗ್ಯದಿಂದಿರಲು ಈ ವಿಧಾನಗಳನ್ನು ಅನುಸರಿಸಿ
2019 ರ ಅಧ್ಯಯನದ ಪ್ರಕಾರ, 60 ಮೆಟ್ಟಿಲುಗಳನ್ನು 20 ಸೆಕೆಂಡುಗಳಲ್ಲಿ ದಿನಕ್ಕೆ ಮೂರು ಬಾರಿ ಹತ್ತುವುದು ಕಾರ್ಡಿಯೋ ಫಿಟ್ನೆಸ್ ಅನ್ನು 5 ಪ್ರತಿಶತ ಹೆಚ್ಚಿಸುತ್ತದೆ.
Follow these fitness tips to stay healthy: ಆರೋಗ್ಯದಿಂದ ಇರುವುದು ಮತ್ತು ದೇಹವನ್ನು ಫಿಟ್ ಆಗಿಟ್ಟುಕೊಳ್ಳುವುದು ಇಂದಿನ ಬ್ಯುಸಿ ಜೀವದನಲ್ಲಿ ಎಲ್ಲರಿಗೂ ಅತ್ಯಂತ ಅವಶ್ಯಕವಾಗಿದೆ. ಮನೆಯಲ್ಲಿ ಮಾಡಿದ ಆಹಾರ ಸೇವಿಸುವುದು, ಉತ್ತಮ ನಿದ್ರೆ, ವ್ಯಾಯಾಮ ಇದರ ಹೊರತಾಗಿಯೂ ಕೆಲವು ವಿಧಾನಗಳನ್ನು ಜೀನವದಲ್ಲಿ ಅನುಸರಿಸಿದರೆ ಸದಾ ಫಿಟ್ ಆಗಿರಬಹದು. ಈ ವಿಧಾನಗಳನ್ನು ಅನುಸರಿಸಿದರೆ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
ಆರೋಗ್ಯವಾಗಿರಲು ಈ ಫಿಟ್‌ನೆಸ್ ಸಲಹೆಗಳನ್ನು ಅನುಸರಿಸಿ :
1. ಬೆಳಿಗ್ಗೆ ನೀರು ಕುಡಿಯುವುದು :
ಆಹಾರ ತಜ್ಞ ಡಾ.ರಂಜನಾ ಸಿಂಗ್ ಪ್ರಕಾರ, ಬೆಳಿಗ್ಗೆ ಎದ್ದು ಚಹಾ (Tea) ಅಥವಾ ಕಾಫಿಗೆ ಮುಂಚಿತವಾಗಿ ದೊಡ್ಡ ಲೋಟದಲ್ಲಿ ನೀರು (water) ಕುಡಿಯುವುದು ಬಹಳ ಮುಖ್ಯ. ಇಡೀ ರಾತ್ರಿ ಮಲಗಿ ಏಳುವಾಗ ದೇಹ, ಡಿಹೈಡ್ರೇಟ್ ಆಗಿರುತ್ತದೆ. ಈ ಕಾರಣದಿಂದ ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಇಷ್ಟು ಮಾತ್ರವಲ್ಲ ಬೆಳಗ್ಗೆದ್ದು ನೀರು ಕುಡಿಯುವುದು ಮೆದುಳು ಮತ್ತು ಮೂತ್ರಪಿಂಡಗಳಿಗೂ ತುಂಬಾ ಒಳ್ಳೆಯದು.
ಇದನ್ನೂ ಓದಿ : Benefits of Honey in Monsoon: ಮಳೆಗಾಲದಲ್ಲಿ ಈ ಸಮಯದಲ್ಲಿ ಜೇನುತುಪ್ಪ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ
2. ಪ್ರೋಟೀನ್ ಯುಕ್ತ ಉಪಹಾರ :
ಉತ್ತಮ ಪ್ರೋಟೀನ್ ಹೊಂದಿರುವ ಆಹಾರವನ್ನು ಬೆಳಗಿನ ಉಪಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ (Sugar level) ನಿಯಂತ್ರಿಸಲ್ಪಡುತ್ತದೆ. ದೇಹಕ್ಕೆ ಎನರ್ಜಿ ಸಿಗುತ್ತದೆ. ಮತ್ತೆ ಮತ್ತೆ ಹಸಿವಿನ ಅನುಭವವಾಗುವುದಿಲ್ಲ. ಪ್ರೋಟೀನ್ ತುಂಬಿದ ಉಪಹಾರ ತೂಕ ಇಳಿಸಲು (Weight loss) ಕೂಡಾ ಉತ್ತಮವೆಂದು ಪರಿಗಣಿಸಲಾಗುತ್ತದೆ.
3. ದಿನಕ್ಕೆ ಒಂದು ಹಣ್ಣು ಸೇವನೆ :
ಒಂದು ಹಣ್ಣು ಅಥವಾ ಯಾವುದೇ ಹಸಿರು ತರಕಾರಿಗಳನ್ನು ಪ್ರತೀ ದಿನ ಸೇವಿಸಲೇ ಬೇಕು. ಪ್ರತಿದಿನ ಹಣ್ಣುಗಳನ್ನು (Benefits of fruit) ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಫೈಬರ್, ವಿಟಮಿನ್, ಮಿನರಲ್ ಗಳು ಸಿಗುತ್ತವೆ. ಇದರಿಂದಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಚರ್ಮದ ರೋಗ್ಯಕ್ಕೂ (Skin care) ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಮುಖ್ಯವಾಗಿರುತ್ತದೆ.
ಇದನ್ನೂ ಓದಿ : Benefits of Flaxseeds: ಕೂದಲಿನ ಆರೋಗ್ಯಕ್ಕೆ ಅಗಸೆ ಬೀಜ : ಹೇಗೆ ಬಳಸಬೇಕು?
4. ಮೆಟ್ಟಿಲುಗಳನ್ನು ಹತ್ತಿ:
2019 ರ ಅಧ್ಯಯನದ ಪ್ರಕಾರ, 60 ಮೆಟ್ಟಿಲುಗಳನ್ನು 20 ಸೆಕೆಂಡುಗಳಲ್ಲಿ ದಿನಕ್ಕೆ ಮೂರು ಬಾರಿ ಹತ್ತುವುದು ಕಾರ್ಡಿಯೋ ಫಿಟ್ನೆಸ್ ಅನ್ನು 5 ಪ್ರತಿಶತ ಹೆಚ್ಚಿಸುತ್ತದೆ. ಕಾರ್ಡಿಯೋ ರೆಸ್ಪಿರೇಟರಿ ಫಿಟ್‌ನೆಸ್‌ನಲ್ಲಿ ಸ್ವಲ್ಪ ಸುಧಾರಣೆಯಾದರೂ ಕೂಡಾ ಹೃದಯ ಸಂಬಂಧಿ ಕಾಯಿಲೆಯ (Heart disease) ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಏರಲು ಆರಂಭಿಸಿದರೆ ಒಳ್ಳೆಯದು.
5. ಗ್ರೀನ್ ಟೀ ಕುಡಿಯಿರಿ :
ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Benefits of green tea) ಎಂದು ತಜ್ಞರು ಹೇಳುತ್ತಾರೆ. ಗ್ರೀನ್ ಟೀಯನ್ನು ವಾರಕ್ಕೆ ಮೂರು ಬಾರಿಯಾದರೂ ಕುಡಿಯುವುದರಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಬಹುದು. ಆದ್ದರಿಂದ, ನೀವು ರಾತ್ರಿ ಮಲಗುವ ಮುನ್ನ ಮತ್ತು ಬೆಳಿಗ್ಗೆ ಗ್ರೀನ್ ಟೀ ಸೇವಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ