ನವದೆಹಲಿ: ಕೆಟ್ಟ ಜೀವನಶೈಲಿ, ಒತ್ತಡ ಮತ್ತು ಅನಾರೋಗ್ಯಕರ ಆಹಾರವು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುವುದು (Healthy heart) ಬಹಳ ಮುಖ್ಯ.  ಏಕೆಂದರೆ ನಮ್ಮ ಹೃದಯವು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಿಯಮಿತ ವ್ಯಾಯಾಮದ ಜೊತೆಗೆ, ಸರಿಯಾದ ಆಹಾರ ಸೇವನೆ ಕೂಡಾ ಹೃದಯವನ್ನು ಆರೋಗ್ಯವಾಗಿಡುವಲ್ಲಿ (Heart Health) ಪ್ರಮುಖ ಪಾತ್ರ ವಹಿಸುತ್ತದೆ. 


COMMERCIAL BREAK
SCROLL TO CONTINUE READING

ಹೃದಯ ಏನು ಮಾಡುತ್ತದೆ? 
ಹೃದಯವು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಈ ಅಂಗವು ನಮ್ಮ ರಕ್ತಪರಿಚಲನಾ ವ್ಯವಸ್ಥೆಯ ಮಧ್ಯದಲ್ಲಿದೆ. ಇದು ದೇಹವನ್ನು ಸುತ್ತುವ ರೀತಿಯಲ್ಲಿ ರಕ್ತವನ್ನು ಪರಿಚಲನೆ ಮಾಡುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ದೇಹಕ್ಕೆ ಕಳುಹಿಸುತ್ತದೆ ಮತ್ತು ಅನಗತ್ಯ ಇಂಗಾಲದ ಡೈಆಕ್ಸೈಡ್ ಮತ್ತು ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕುತ್ತದೆ.  ಈ ಕ್ರಿಯೆ ಸರಿಯಾಗಿ ನಡೆದಿಲ್ಲ ಎಂದಾದರೆ ಸಮಸ್ಯೆ ಉಲ್ಬಣಿಸಬಹುದು. ಆರೋಗ್ಯಕರ ಆಹಾರದ ಮೂಲಕ ನಾವು ಹೃದಯವನ್ನು (Healthy heart) ಆರೋಗ್ಯವಾಗಿಡಬಹುದು.


ಇದನ್ನೂ ಓದಿ : Benefits of Black Pepper Water : ಕರಿಮೆಣಸಿನ ನೀರು ಕುಡಿಯಿರಿ : ಚರ್ಮ ಆರೋಗ್ಯದ ಜೊತೆಗೆ ಈ 4 ಪ್ರಯೋಜನ ಪಡೆಯಿರಿ 


ಈ ಆಹಾರಗಳು ಹೃದಯವನ್ನು ಆರೋಗ್ಯವಾಗಿರಿಸುತ್ತವೆ :
1. ಕುಂಬಳಕಾಯಿ, ಚಿಯಾ ಮತ್ತು ಅಗಸೆಬೀಜಗಳು :
ಕುಂಬಳಕಾಯಿ, ಚಿಯಾ ಮತ್ತು ಅಗಸೆಬೀಜಗಳಲ್ಲಿ (flaxseed) ಒಮೆಗಾ 3 ಹಾಗೂ ಫೈಬರ್ ಸಮೃದ್ಧವಾಗಿದೆ. ಇವುಗಳು ಹೃದಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮೊದಲಿಗೆ, ಅವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ಒಣಗಿಸಿ ಮತ್ತು ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ. ನಿಮಗೆ ಹಸಿವಾದಾಗ ಈ ಬೀಜಗಳನ್ನು ಸೇವಿಸಿ. 


2. ಡ್ರೈ ಫ್ರೂಟ್ಸ್ ಬಳಕೆ :
ಹೃದಯದ ಆರೋಗ್ಯಕ್ಕೆ ಡ್ರೈಫ್ರುಟ್ಸ್ (Dry fruits) ಸೇವನೆ ಬಹಳ ಮುಖ್ಯ. ಹೃದಯವನ್ನು ಆರೋಗ್ಯವಾಗಿಡಲು ವಾಲ್ನಟ್ಸ್ ಮತ್ತು ಬಾದಾಮಿಯನ್ನು (Almond) ಆಹಾರದಲ್ಲಿ ಸೇರಿಸಬೇಕು. ಅವರು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. 


3. ಅರಿಶಿನ, ಕೊತ್ತಂಬರಿ, ಜೀರಿಗೆ ಮತ್ತು ದಾಲ್ಚಿನ್ನಿ ಸೇವಿಸುವುದು :
ಹೃದಯದ ಆರೋಗ್ಯವನ್ನು ಕಾಪಾಡಲು ಅರಿಶಿನ (Turmeric), ಕೊತ್ತಂಬರಿ, ಜೀರಿಗೆ ಮತ್ತು ದಾಲ್ಚಿನ್ನಿ (cinnamon)ಕೂಡ ಪ್ರಯೋಜನಕಾರಿ ಎಂದು ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಹೇಳುತ್ತಾರೆ. ಆದ್ದರಿಂದ, ಅಡುಗೆ ಮಾಡುವಾಗ ಈ ಮಸಾಲೆಗಳನ್ನು ಬಳಸಿ.


ಇದನ್ನೂ ಓದಿ : ಈ ಐದು ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ Type 2 Diabetes ಕಂಟ್ರೋಲ್ ಮಾಡಬಹುದು


4. ಬೆಳ್ಳುಳ್ಳಿ ಸೇವನೆ ಅತ್ಯಗತ್ಯ:
ಬೆಳ್ಳುಳ್ಳಿ (Garlic) ದೇಹದಲ್ಲಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ (Garlic on empty stomach) ತಿನ್ನುವುದು ತುಂಬಾ ಪ್ರಯೋಜನಕಾರಿ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.


5. ಪಾಲಕ್ :
ಹಸಿರು ಎಲೆಗಳ ತರಕಾರಿಗಳ ಸೇವನೆಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ ಮತ್ತು ನಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಪಾಲಕ್ (Palak) ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಪಾಲಕ್  ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪಾಲಕ್ ಸೇವನೆ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.