Garlics Side Effect : ಅತಿಯಾದ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ : ಹೇಗೆ ಇಲ್ಲಿದೆ ನೋಡಿ 

ಅತಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನೀವು ಕೆಲವು ರೀತಿಯ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಬೆಳ್ಳುಳ್ಳಿ ತಿನ್ನುವುದನ್ನು ಬಿಡಬೇಕು. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅಡ್ಡಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ..

Written by - Channabasava A Kashinakunti | Last Updated : Sep 1, 2021, 09:42 AM IST
  • ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಫ್ರಕ್ಟಾನ್ಸ್‌ಗಳಿವೆ
  • ಫ್ರಕ್ಟಾನ್ ಅಸಹಿಷ್ಣುತೆಯ ಲಕ್ಷಣಗಳು ಗ್ಲುಟನ್ ಅಲರ್ಜಿಯಂತೆಯೇ ಇರುತ್ತವೆ
  • ಇದು ಗ್ಯಾಸ್, ಹೊಟ್ಟೆ ನೋವು ಮತ್ತು ವಾಯುವು ಸೆಳೆತಕ್ಕೆ ಕಾರಣ
Garlics Side Effect : ಅತಿಯಾದ ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ : ಹೇಗೆ ಇಲ್ಲಿದೆ ನೋಡಿ  title=

ನವದೆಹಲಿ : ಬೆಳ್ಳುಳ್ಳಿಯನ್ನ ಆಹಾರದಲ್ಲಿ ರುಚಿಗೆ ಬಳಸಲಾಗುತ್ತದೆ. ಇದಕ್ಕೆ ಅಷ್ಟೇ ಅಲ್ಲದೆ, ಇದನ್ನ ಔಷಧಿಗೂ ಕೂಡ ಬಳಸಲಾಗುತ್ತದೆ. ಪ್ರತಿದಿನ ನಾವು ಬೆಳ್ಳುಳ್ಳಿಯನ್ನು ಹಲವು ವಿಧಗಳಲ್ಲಿ ಸೇವಿಸುತ್ತೇವೆ. ಇದನ್ನು ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿಂದ ಹಿಡಿದು ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ, ಆದರೆ ಕೆಲವರು ಇದನ್ನು ಹಾಗೆ ಕೂಡ ತಿನ್ನುತ್ತಾರೆ, ಆದರೆ ಅತಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನೀವು ಕೆಲವು ರೀತಿಯ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಬೆಳ್ಳುಳ್ಳಿ ತಿನ್ನುವುದನ್ನು ಬಿಡಬೇಕು. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅಡ್ಡಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ..

ಗ್ಯಾಸ್ ಸಮಸ್ಯೆ

ಬೆಳ್ಳುಳ್ಳಿ(Garlic)ಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಫ್ರಕ್ಟಾನ್ಸ್‌ಗಳಿವೆ. ಅಂತಹ ಕಾರ್ಬ್ಸ್ ಗೋಧಿ, ಈರುಳ್ಳಿ, ಕಲ್ಲಂಗಡಿ, ಕಪ್ಪು ಬೀನ್ಸ್ ಮತ್ತು ಗೋಡಂಬಿ ಮುಂತಾದವುಗಳಲ್ಲಿಯೂ ಕಂಡುಬರುತ್ತದೆ. ಅನೇಕ ಜನರು ಫ್ರಕ್ಟಾನ್ಗೆ ಅಲರ್ಜಿಯನ್ನು ಹೊಂದಿರುತ್ತಾರೆ. ಆರಂಭದಲ್ಲಿ, ಇದು ಗ್ಲುಟನ್ ಅಲರ್ಜಿ ಎಂದು ಅವರು ಭಾವಿಸುತ್ತಾರೆ, ಆದರೆ ಇದು ಫ್ರಕ್ಟಾನ್ ಕಾರಣ.

ಇದನ್ನೂ ಓದಿ : Health and Fitness Tips: ಸಕ್ಕರೆ ಕಾಯಿಲೆ ಇರುವವರು ಈ ಸಂಗತಿಗಳನ್ನು ನೆನಪಿನಲ್ಲಿಡಿ, ಇಲ್ದಿದ್ರೆ ತೊಂದರೆ ಎದುರಾಗಬಹುದು

ಫ್ರಕ್ಟಾನ್ ಅಸಹಿಷ್ಣುತೆಯ ಲಕ್ಷಣಗಳು ಗ್ಲುಟನ್ ಅಲರ್ಜಿಯಂತೆಯೇ ಇರುತ್ತವೆ. ಈ ಕಾರಣದಿಂದಾಗಿ ನೀವು ಗ್ಯಾಸ್(Gas Problem), ಹೊಟ್ಟೆ ನೋವು ಮತ್ತು ವಾಯುವು ಸೆಳೆತದ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಬೆಳ್ಳುಳ್ಳಿ ತಿಂದ ತಕ್ಷಣ ನಿಮಗೆ ಈ ರೀತಿ ಅನಿಸಿದರೆ, ಜಾಗರೂಕರಾಗಿರಿ. ನೀವು ಬೆಳ್ಳುಳ್ಳಿಯನ್ನು ಬೇಯಿಸಿ ತಿಂದರೆ, ಸ್ವಲ್ಪ ಮಟ್ಟಿಗೆ ಇದು ಅಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಿಂದ ಬಹಿರಂಗವಾಗಿದೆ.

GERD ಸಮಸ್ಯೆ

ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್ (GERD) ಉಂಟಾಗಬಹುದು. ಅನ್ನನಾಳದಲ್ಲಿ ಅತಿಯಾದ ಆಮ್ಲ ಹಿಮ್ಮುಖ ಹರಿವಿನಿಂದಾಗಿ ಇದು ಸಂಭವಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗೆ ನೋವು, ತಲೆಸುತ್ತುವಿಕೆ, ಎದೆಯಲ್ಲಿ ಉರಿಯುವುದು ಮುಂತಾದ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಬೆಳ್ಳುಳ್ಳಿ ತಿನ್ನುವಾಗ ಇದನ್ನು ನೆನಪಿನಲ್ಲಿಡಿ.

ಇದನ್ನೂ ಓದಿ : ಹೋಟೆಲ್ ಗೆ ಹೋದರೆ ತಪ್ಪಿಯೂ ತಂದೂರಿ ರೋಟಿ ಆರ್ಡರ್ ಮಾಡದಿರಿ, ಇದರ ನಿಜ ಬಣ್ಣ ತಿಳಿದರೆ ಮತ್ತೆ ತಿರುಗಿಯೂ ನೋಡುವುದಿಲ್ಲ

ಬೆಳ್ಳುಳ್ಳಿಯ ಪ್ರಯೋಜನಗಳು

ಬೆಳ್ಳುಳ್ಳಿ ತಿನ್ನುವುದರಿಂದಲೂ ಪ್ರಯೋಜನಗಳಿವೆ. ಇದು ನಿಮ್ಮ ರೋಗನಿರೋಧಕ ಶಕ್ತಿ(Immunity Power)ಯನ್ನು ಬಲಪಡಿಸುತ್ತದೆ. ಜರ್ನಲ್ ಆಫ್ ಇಮ್ಯುನಾಲಜಿ ರಿಸರ್ಚ್ ಪ್ರಕಾರ, ಬೆಳ್ಳುಳ್ಳಿ ದೇಹದಲ್ಲಿ ಹಲವು ರೀತಿಯ ಕೋಶಗಳನ್ನು ಉತ್ತೇಜಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುಣಪಡಿಸುತ್ತದೆ. ಈ ಜೀವಕೋಶಗಳು ನೇರವಾಗಿ ನಮ್ಮ ರೋಗನಿರೋಧಕ ವ್ಯವಸ್ಥೆಯ ಕಾರ್ಯಕ್ಕೆ ಸಂಬಂಧಿಸಿವೆ. ಇದರ ಹೊರತಾಗಿ, ಇದು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಇದು ನಿಮ್ಮ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ, ಇದು ನಿಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ಬೆಳ್ಳುಳ್ಳಿ ತಿನ್ನುವುದು ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News