ನವದೆಹಲಿ : Type 2 Diabetes Food List : ಮಧುಮೇಹ ಇಂದಿನ ಕಾಲದ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಟೈಪ್ 2 ಡಯಾಬಿಟಿಸ್ (Type 2 Diabetes) ಇರುವ ವ್ಯಕ್ತಿಯಲ್ಲಿ, ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ ಮತ್ತು ಈ ಸ್ಥಿತಿಯನ್ನು ಇನ್ಸುಲಿನ್ ಪ್ರತಿರೋಧ ಎಂದು ಕರೆಯಲಾಗುತ್ತದೆ. ಟೈಪ್ 2 ಮಧುಮೇಹದ ಲಕ್ಷಣಗಳು ಕಾಲಕ್ರಮೇಣ ಕ್ರಮೇಣ ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಕೆಲವು ಹೆಚ್ಚಿದ ಬಾಯಾರಿಕೆ ಮತ್ತು ಹಸಿವು, ಪದೇ ಪದೇ ಮೂತ್ರ ವಿಸರ್ಜನೆ, ತೂಕ ಇಳಿಕೆ (Weight loss), ಆಯಾಸ, ದೃಷ್ಟಿ ಕಡಿಮೆಯಾಗುತ್ತದೆ. ಸೋಂಕುಗಳು (Infections) ಮತ್ತು ಗಾಯಗಳು ಬಹಳ ನಿಧಾನವಾಗಿ ಗುಣವಾಗುತ್ತದೆ. ಈ ರೋಗದ ನಿಯಂತ್ರಣಕ್ಕೆ ಇರುವ ಸರಿಯಾದ ಮಾರ್ಗವೆಂದರೆ, ಆರೋಗ್ಯಕರ ಆಹಾರ. ಮಧುಮೇಹವನ್ನು ನಿಯಂತ್ರಿಸಲು, ನಿಮ್ಮ ಆಹಾರವನ್ನು ಸಮತೋಲನದಲ್ಲಿರಿಸುವುದು ಮುಖ್ಯ. ಮಧುಮೇಹ ರೋಗಿಗಳಿಗೆ ಅನೇಕ ಆಹಾರ ಮತ್ತು ಪಾನೀಯಗಳನ್ನು ನಿಷೇಧಿಸಲಾಗುತ್ತದೆ. ಆಹಾರದಲ್ಲಿ ಕೆಲವೊಂದು ವಸ್ತುಗಳನ್ನು ಸೇರಿಸುವ ಮೂಲಕ, ಈ ಸಮಸ್ಯೆಯನ್ನು ತಪ್ಪಿಸಬಹುದು.
ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ಈ ಆಹಾರಗಳು ಸಹಾಯಕವಾಗಿವೆ:
1. ಹಸಿರು ತರಕಾರಿಗಳು : ವಿಟಮಿನ್ ಮತ್ತು ಖನಿಜಗಳು ಹಸಿರು ತರಕಾರಿಗಳಲ್ಲಿ (Green vegetables) ಹೇರಳವಾಗಿ ಕಂಡುಬರುತ್ತವೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸುವ ಮೂಲಕ, ಟೈಪ್ 2 ಮಧುಮೇಹವನ್ನು (Type 2 Diabetes) ನಿಯಂತ್ರಿಸಬಹುದು.
ಇದನ್ನೂ ಓದಿ : Tea For Diabetes: ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಈ 3 ಟೀಗಳು
2. ಮೆಂತ್ಯ ನೀರು: ಮೆಂತ್ಯದ ನೀರಿನ ಸೇವನೆಯು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿನಲ್ಲಿ (Water) ಅರ್ಧ ಚಮಚ ಮೆಂತ್ಯದ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ನಿಯಂತ್ರಿಸಬಹುದು.
3. ಬಾಳೆಹಣ್ಣು: ಬಾಳೆಹಣ್ಣಿನಲ್ಲಿ (Banana) ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಕಂಡುಬರುತ್ತವೆ. ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಬೇಕು, ಆದರೆ ಅದನ್ನು ಹೆಚ್ಚು ಸೇವಿಸಬೇಡಿ. ದಿನವಿಡೀ ಅರ್ಧ ಅಥವಾ ಒಂದು ಬಾಳೆಹಣ್ಣನ್ನು ಸೇವಿಸುವುದರಿಂದ (Benefits of banana), ನೀವು ಟೈಪ್ 2 ಮಧುಮೇಹವನ್ನು ಸಮತೋಲನಗೊಳಿಸಬಹುದು.
ಇದನ್ನೂ ಓದಿ : Milk Bath: ಸ್ನಾನದ ನೀರಿಗೆ ಬೆರೆಸಿ 1 ಲೋಟ ಹಾಲು ಸಿಗಲಿದೆ ಈ ಎಲ್ಲಾ ಪ್ರಯೋಜನಗಳು
4.ಪೇರಳೆ ಹಣ್ಣು: ಮಧುಮೇಹಿಗಳಿಗೆ ಪೇರಳೆ ಸೇವನೆಯು ಪ್ರಯೋಜನಕಾರಿ (Benefits of gauva). ಪೇರಳೆ ಒಂದು ರುಚಿಕರ ಮತ್ತು ಆರೋಗ್ಯಕರ ಹಣ್ಣು. ಪೇರಳೆ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ. ಆಹಾರದಲ್ಲಿ ಪೇರಳೆ ಹಣ್ಣನ್ನು ಸೇರಿಸುವ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
5. ದಾಲ್ಚಿನ್ನಿ: ದಾಲ್ಚಿನ್ನಿ ಮಧುಮೇಹದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ದಾಲ್ಚಿನ್ನಿಯಲ್ಲಿ (cinnamon) ಕಂಡುಬರುವ ಇಂತಹ ಅನೇಕ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ. ದಾಲ್ಚಿನ್ನಿ ಹಾಲನ್ನು ಕುಡಿಯುವುದರಿಂದ ಟೈಪ್ -2 ಮಧುಮೇಹವನ್ನು ನಿಯಂತ್ರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.