ಉತ್ತಮ ರೋಗ್ಯ ನಿಮ್ಮದಾಗಬೇಕಾದರೆ ಯಾಕೆ ಇಡ್ಲಿ ಸಾಂಬಾರ್ ಹೆಚ್ಚು ತಿನ್ನಬೇಕು..?
ಇಡ್ಲಿ ಇಷ್ಟ ಪಡದವರು ಖಂಡಿತಾ ಇರಲಿಕ್ಕಿಲ್ಲ. ಇಡ್ಲಿ ದಕ್ಷಿಣ ಭಾರತದ ಬ್ರಾಂಡ್ ಫುಡ್ ಅಂದರೂ ತಪ್ಪಾಗಲಾರದು. ಪಾಕಶಾಸ್ತ್ರ ಬದಲಾದಂತೆ ಇಡ್ಲಿಯ ಅವತಾರಗಳೂ ಹೆಚ್ಚಾಗಿವೆ. ಬೇರೆ ಬೇರೆ ಫ್ಲೇವರ್, ಕಾಂಬಿನೇಷನ್ ನಲ್ಲಿ ಇಡ್ಲಿ ಈಗ ತಯಾರಾಗುತ್ತಿದೆ.
ಬೆಂಗಳೂರು : ಇಡ್ಲಿ ಇಷ್ಟ ಪಡದವರು ಖಂಡಿತಾ ಇರಲಿಕ್ಕಿಲ್ಲ. ಇಡ್ಲಿ (Idly) ದಕ್ಷಿಣ ಭಾರತದ ಬ್ರಾಂಡ್ ಫುಡ್ ಅಂದರೂ ತಪ್ಪಾಗಲಾರದು. ಪಾಕಶಾಸ್ತ್ರ ಬದಲಾದಂತೆ ಇಡ್ಲಿಯ ಅವತಾರಗಳೂ ಹೆಚ್ಚಾಗಿವೆ. ಬೇರೆ ಬೇರೆ ಫ್ಲೇವರ್, ಕಾಂಬಿನೇಷನ್ ನಲ್ಲಿ ಇಡ್ಲಿ ಈಗ ತಯಾರಾಗುತ್ತಿದೆ. ಫ್ಲೇವರ್, ಕಾಂಬಿನೇಷನ್ ತೆಗೆದು ಆಚೆಗೆ ಇಟ್ಟರೂ ಮೂಲ ಇಡ್ಲಿ ಆರೋಗ್ಯ ದೃಷ್ಟಿಯಿಂದಲೂ (health benefits of idly) ಬಹಳ ಪ್ರಾಮುಖ್ಯತೆ ಪಡೆದಿದೆ. ಬಿಸಿ ಬಿಸಿ ಇಡ್ಲಿ ಚಟ್ನಿ, ಇಡ್ಲಿ ಸಾಂಬಾರ್ ಸಿಕ್ಕರೆ ಅದೇ ಬ್ರಹ್ಮಾಂಡ. ಇಡ್ಲಿ ಮಾಡೋದು ಹೇಗೆ ಅನ್ನೋದು ಎಲ್ಲರಿಗೊ ಗೊತ್ತಿದೆ. ಆದರೆ, ಇಡ್ಲಿ ತಿಂದರೆ ನಿಮ್ಮ ಆರೋಗ್ಯಕ್ಕೆ ಏನು ಲಾಭ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದರ ಹೆಲ್ತ್ ಬೆನಿಫಿಟ್ಸ್ ಲೆಕ್ಕ ಹಾಕಿದರೆ ಇವತ್ತಿಂದಲೇ ನಿಮ್ಮ ಉಪಹಾರದ ಮೆನುವಿನಲ್ಲಿ ಇಡ್ಲಿ ಪ್ರತ್ಯಕ್ಷವಾಗಿಬಿಡುತ್ತದೆ.
ಇಡ್ಲಿ ತಿಂದರೆ ಆರೋಗ್ಯಕ್ಕೆ ಲಾಭ ಏನು..?
1. ಸರಾಗವಾಗಿ ಜೀರ್ಣವಾಗುತ್ತದೆ.
ಯಾವುದೇ ರೋಗದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಡಾಕ್ಟರ್ ಇಡ್ಲಿ (idly) ತಿನ್ನಲು ಸಲಹೆ ನೀಡುತ್ತಾರೆ. ನೀವಿದನ್ನು ಗಮನಿಸಿರಬಹುದು. ಇದಕ್ಕೆ ಕಾರಣ ಇಷ್ಟೇ. ಇಡ್ಲಿ ಬೇಗ ಜೀರ್ಣವಾಗುತ್ತದೆ (good for digestion) . ಅಷ್ಟೇ ಅಲ್ಲ, ಇಡ್ಲಿಯನ್ನು ದೇಹ ಅಷ್ಟೇ ಬೇಗ ಹೀರಿಕೊಳ್ಳುತ್ತದೆ. ಇಡ್ಲಿ ತಿಂದರೆ ನಿಮಗೆ ಹೊಟ್ಟೆ ಭಾರ ಅನ್ನಿಸುವುದಿಲ್ಲ. ಇಡ್ಲಿ ನಿಮ್ಮನ್ನು ದಿನವಿಡೀ ಚುರುಕಾಗಿಡುತ್ತದೆ.
ಇದನ್ನೂ ಓದಿ : ಹೆಲ್ತಿ ಹಾರ್ಟ್ ಗಾಗಿ ವಾರದ ಏಳು ದಿನಕ್ಕೆ 7 ಹೆಲ್ತಿ ಬ್ರೇಕ್ ಫಾಸ್ಟ್..!
2. ವಿಟಮಿನ್ ಮತ್ತು ಮಿನರಲ್ ಗಳಿಂದ ಸಮೃದ್ಧ
ಒಂದು ಇಡ್ಲಿಯಲ್ಲಿ ಒಂದು ಮಿಲಿಗ್ರಾಂ ಕಬ್ಬಿಣದಾಂಶ ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಫಾಲೇಟ್, ಪೊಟ್ಯಾಶಿಯಂ, ವಿಟಮಿನ್ ಎ ಸಮೃದ್ದವಾಗಿರುತ್ತದೆ. ಇಡ್ಲಿಯಲ್ಲಿರುವ ಕಬ್ಬಿಣದಾಂಶ ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ. ಇಡ್ಲಿ ಯಾವುದೇ ಡಯಟ್ (Diet)ಗಾದರೂ ಹೆಲ್ತಿ ಫುಡ್ ಆಗಿದೆ.
3. ಬೊಜ್ಜು ಕರಗಿಸುತ್ತದೆ.
ಇಡ್ಲಿಯಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಜೊತೆಗೆ ಪ್ರೊಟೀನ್ ಕೂಡಾ ಬೇಕಾದಷ್ಟಿರುತ್ತದೆ. ತೂಕ ಇಳಿಸಬೇಕು ಎನ್ನುವವರಿಗೆ ಇಡ್ಲಿ ಬಹಳ ಬೆಸ್ಟ್. ಯಾಕೆಂದರೆ ಇಡ್ಲಿ ತಿಂದರೆ ತುಂಬಾ ಬೇಗ ಹಸಿವೆ ಆಗುವುದಿಲ್ಲ.
4. ಫೈಬರ್ ಯುಕ್ತ ಆಹಾರ
ಇಡ್ಲಿ ಜೊತೆ ನಾವು ಸಾಂಬಾರ್ ಕೂಡಾ ತಿನ್ನುತ್ತೇವೆ. ಚಟ್ನಿ ಕೂಡಾ ನಂಜಿಕೊಂಡು ತಿನ್ನುತ್ತೇವೆ. ಸಾಂಬಾರ್ ಟೇಸ್ಟಿಯಾಗಿಡಲು ನಾವು ಬೇರೆ ಬೇರೆ ತರಕಾರಿ, ತೆಂಗಿನಕಾಯಿ ಕೂಡಾ ಸೇರಿಸುತ್ತೇವೆ. ಈ ಸಾಮಾಗ್ರಿಗಳು ಫೈಬರ್ ಯುಕ್ತವಾಗಿರುತ್ತದೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಇದನ್ನೂ ಓದಿ : Weight Loss Tips : ದೇಹದ ಕೊಬ್ಬು ಕರಗಿಸಲು ಈ 2 ವಸ್ತುಗಳನ್ನು ಸೇವಿಸಿ : ಆದ್ರೆ, ಈ ಸಮಯದಲ್ಲಿ ತಿನ್ನಿ
5. ಇದು ಎಣ್ಣೆಯುಕ್ತ ಆಹಾರ ಅಲ್ಲ.
ಹಬೆಯಲ್ಲಿ ಇಡ್ಲಿಯನ್ನು ಬೇಯಿಸಲಾಗುತ್ತದೆ. ಇಡ್ಲಿಯಲ್ಲಿ ಯಾವುದೇ ರೀತಿಯಲ್ಲಿ ಎಣ್ಣೆ ಬಳಸಲಾಗುವುದಿಲ್ಲ. ಹಾಗಾಗಿ, ಇಡ್ಲಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಾಂಬಾರ್ ಕೂಡಾ ಸೂಪ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಾಗಾಗಿ, ಇಡ್ಲಿಗಿಂತ ಯೋಗ್ಯ ಫುಡ್ ಬೇರೆ ಇಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.