ಕಣ್ಣಿನ ಸುತ್ತ ಮೂಡುವ ಬ್ಲ್ಯಾಕ್ ಸರ್ಕಲ್ ತಡೆಯುವ ಉಪಾಯ ಯಾವುದು..?

ಹಲವಾರು ಕಾರಣಗಳಿಗೆ ಕಣ್ಣಿನ ಸುತ್ತ ಬ್ಲ್ಯಾಕ್ ಸರ್ಕಲ್ ಮೂಡುತ್ತದೆ. ಮುಖದಲ್ಲಿ ಬ್ಲ್ಯಾಕ್ ಸರ್ಕಲ್ ಮೂಡಿದಾಗ ಮಹಿಳೆಯರಲ್ಲಿ ಉಂಟಾಗುವ ಟೆನ್ಶನ್ ಅಷ್ಟಿಷ್ಟಲ್ಲ. ಬ್ಲ್ಯಾಕ್ ಸರ್ಕಲ್ ಒಂದು ದೇಹದ ಅಂದ ಗೆಡಿಸುತ್ತದೆ.

Written by - Ranjitha R K | Last Updated : Jun 28, 2021, 02:36 PM IST
  • ಹಲವಾರು ಕಾರಣಗಳಿಗೆ ಕಣ್ಣಿನ ಸುತ್ತ ಬ್ಲ್ಯಾಕ್ ಸರ್ಕಲ್ ಮೂಡುತ್ತದೆ.
  • ಮುಖದಲ್ಲಿ ಬ್ಲ್ಯಾಕ್ ಸರ್ಕಲ್ ಮೂಡಿದಾಗ ಮಹಿಳೆಯರಲ್ಲಿ ಉಂಟಾಗುವ ಟೆನ್ಶನ್ ಅಷ್ಟಿಷ್ಟಲ್ಲ.
  • ಮುಖದಲ್ಲಿ ಮೂಡುವ ಬ್ಲ್ಯಾಕ್ ಸರ್ಕಲ್ ಬಗ್ಗೆ ಇಲ್ಲಿದೆ ಮಾಹಿತಿ..!
ಕಣ್ಣಿನ ಸುತ್ತ ಮೂಡುವ ಬ್ಲ್ಯಾಕ್ ಸರ್ಕಲ್ ತಡೆಯುವ ಉಪಾಯ ಯಾವುದು..? title=
ಮುಖದಲ್ಲಿ ಮೂಡುವ ಬ್ಲ್ಯಾಕ್ ಸರ್ಕಲ್ ಬಗ್ಗೆ ಇಲ್ಲಿದೆ ಮಾಹಿತಿ..! (file photo zee news)

ನವದೆಹಲಿ : ಹಲವಾರು ಕಾರಣಗಳಿಗೆ ಕಣ್ಣಿನ ಸುತ್ತ ಬ್ಲ್ಯಾಕ್ ಸರ್ಕಲ್ (Dark Circle) ಮೂಡುತ್ತದೆ. ಮುಖದಲ್ಲಿ ಬ್ಲ್ಯಾಕ್ ಸರ್ಕಲ್ ಮೂಡಿದಾಗ ಮಹಿಳೆಯರಲ್ಲಿ ಉಂಟಾಗುವ ಟೆನ್ಶನ್ ಅಷ್ಟಿಷ್ಟಲ್ಲ. ಬ್ಲ್ಯಾಕ್ ಸರ್ಕಲ್ ಒಂದು ದೇಹದ ಅಂದ ಗೆಡಿಸುತ್ತದೆ. ಎರಡನೆಯದಾಗಿ ದೇಹಾರೋಗ್ಯ ಸರಿ ಇಲ್ಲ ಎಂಬ ಸಂದೇಶ ರವಾನಿಸುತ್ತಿರುತ್ತದೆ ದೇಹ ತುಂಬಾ ದಣಿದಾಗ, ತುಂಬಾ ಹೊತ್ತು ಟೀವಿ ನೋಡಿದಾಗ, ಕಂಪ್ಯೂಟರ್ ನೋಡಿದಾಗ, ರಾತ್ರಿ ತುಂಬಾ ಹೊತ್ತು ಎದ್ದಿದ್ದರೆ, ಅತ್ಯಧಿಕ ನಿದ್ರೆ ಮಾಡಿದರೂ ಕಣ್ಣಿನ ಸುತ್ತ ಬ್ಲ್ಯಾಕ್ ಸರ್ಕಲ್ ಮೂಡುತ್ತದೆ.  ನಿದ್ರೆ ಕಡಿಮೆ ಆದಾಗಲೂ ಬ್ಲ್ಯಾಕ್ ಸರ್ಕಲ್ ಉಂಟಾಗುತ್ತದೆ. 

ವಿಟಮಿನ್ ಕೆ ಕೊರತೆ, ಹಾರ್ಮೊನಲ್ ಬದಲಾವಣೆ, ಅನಿಮಿಯಾ, ಹೈಪರ್ ಪಿಗ್ಮೆಂಟೇಶನ್ ಕಾರಣದಿಂದಲೂ ಕಣ್ಣಿನ ಸುತ್ತಾ ಬ್ಲ್ಯಾಕ್ ಸರ್ಕಲ್ ಉಂಟಾಗುತ್ತದೆ. ಬ್ಲ್ಯಾಕ್ ಸರ್ಕಲ್ ನಿಂದ ಪಾರಾಗಬೇಕಾದರೆ ನಿಮ್ಮ ಡಯಟ್ (Diet) ಬದಲಾಯಿಸಿ.. ಬ್ಲ್ಯಾಕ್ ಸರ್ಕಲ್ ನಿಮದ ಪಾರಾಗಬೇಕಾದರೆ, ನಿಮ್ಮ ಡಯಟ್ ಬದಲಾಯಿಸಲೇ ಬೇಕು. ನಿಮ್ಮ ಡಯಟಿನಲ್ಲಿ ಪಾಲಕ್ ಸೊಪ್ಪು, ಬ್ರೊಕಲಿ, ಚಿಕನ್ (Chicken), ಬೀನ್ಸ್, ಕಿವಿ ಹಣ್ಣು, ದಾಳಿಂಬೆ, ಅವಕಾಡೋ, ಅತ್ತಿಯ ಹಣ್ಣು, ರಜ್ಮಾ, ಗೋಡಂಬಿ, ಮೊಳಕೆಕಾಳು, ಆಕ್ರೋಟು, ಟೊಮ್ಯಾಟೋ (Tomato), ಮೊಟ್ಟೆ ಮತ್ತು ದ್ರಾಕ್ಷಿ - ಇಷ್ಟು ಆಹಾರಗಳಲ್ಲಿ ಯಾವುದಾದರೂ ಕೆಲವು  ನಿಮ್ಮ ಡಯಟಿನಲ್ಲಿ ಇದ್ದರೆ ಬ್ಲ್ಯಾಕ್ ಸರ್ಕಲ್ (Dark circle)ಉಂಟಾಗುವುದಿಲ್ಲ. 

ಇದನ್ನೂ ಓದಿ : ದೇಹ ದಣಿದು ಸುಸ್ತಾದಾಗ ಜಸ್ಟ್ ಒಂದು ಗ್ಲಾಸ್ ಮಜ್ಜಿಗೆ ಕುಡಿಯಿರಿ..!

ಬ್ಲ್ಯಾಕ್ ಸರ್ಕಲ್ ನಿವಾರಿಸಲು ಮನೆ ಮದ್ದು ಇಲ್ಲಿದೆ. 
1. ಲಿಂಬೆ ರಸ (Lemon juice) ಹಿಂಡಿ ಹತ್ತರಿಂದ ಹದಿನೈದು ನಿಮಿಷ  ಕಣ್ಣಿನ ಸುತ್ತಾ ಹಚ್ಚಿ. ನಂತರ ಅದನ್ನು ಚೆನ್ನಾಗಿ ತೊಳೆಯಿರಿ.
2,  ಲಿಂಬೆ ರಸಕ್ಕೆ ಜೇನು (Honey) ಸೇರಿಸಿ ರಾತ್ರಿ ಮುಖಕ್ಕೆ ಹಚ್ಚಿ, ಮಲಗಿರಿ
3. ಪಪ್ಪಾಯಿಗೆ ರೋಸ್ ವಾಟರ್ ಸೇರಿಸಿ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಬಿಡಿ. 
4. ರಾತ್ರಿ ಮಲಗುವ ಮುನ್ನ ಮುಖಕ್ಕೆ ಅಲೋವೇರಾ (Aloevera)ಹಚ್ಚಿ. 
ಇವು ಸಾಂಪ್ರದಾಯಿಕವಾಗಿ ಬಂದಿರುವ ಮಾಹಿತಿಯ ಮೂಲಗಳು. ಅನ್ವಯ ಮಾಡುವ ಮೊದಲು ತಜ್ಞರ ಮಾತು ಕೇಳುವುದು ಒಳ್ಳೆಯದು.

ಇದನ್ನೂ ಓದಿ : Vomiting problem during travel: ಪ್ರಯಾಣದ ವೇಳೆ ವಾಂತಿ ಸಮಸ್ಯೆಯಿದ್ದರೆ ಜೊತೆಗಿರಲಿ ಈ ವಸ್ತುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News