ನವದೆಹಲಿ:  ಮರೆವು, ಈ ರೋಗ ಬಹುತೇಕ ಎಲ್ಲರಲ್ಲೂ ಇರುತ್ತದೆ. ಕೆಲವರಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಇನ್ನು ಕೆಲವರಲ್ಲಿ ಸ್ವಲ್ಪ ಕಡಿಮೆ ಇರುತ್ತದೆ ಅಷ್ಟೇ. ವಯಸ್ಸಾದಂತೆ ಮರೆವಿನ ಸಮಸ್ಯೆ ಸಹಜ.  ಆದರೆ, ಈಗ ಯುವಕರಲ್ಲಿಯೂ ಇದೀಗ ಮರೆವಿನ ಸಮಸ್ಯೆ (Memory problem) ಹೆಚ್ಚಾಗಿ ಕಂಡು ಬರುತ್ತದೆ.  ಮರೆವಿನ ರೋಗಕ್ಕೆ ಕೆಲವೊಂದು ಆಯುರ್ವೆದಿಕ್ ಔಷಧೀಯ ಉಪಾಯಗಳು ಕೆಲಸಕ್ಕೆ ಬರುತ್ತವೆ. ಇದರಿಂದ ನಮ್ಮ ಮಾನಸಿಕ ಶಕ್ತಿ ಬಹಳ ಬಲಯುತವಾಗುತ್ತದೆ. ಆ ಆಯುರ್ವೇದಿಕ್ ವಿಧಾನಗಳು ಯಾವುದು ಎಂದು ನೋಡೋಣ.


COMMERCIAL BREAK
SCROLL TO CONTINUE READING

1.ಒಂದೆಲಗ
ಒಂದೆಲಗ ಅಥವಾ ಬ್ರಾಹ್ಮಿ (Brahmi)ಅಥವಾ ತಿಮೆರೆ ಎಂದು ಕರೆಯಲಾಗುವ ಈ ಸಣ್ಣ ಸಸ್ಯ ಮೆದುಳಿಗೆ ಅತ್ಯಂತ ಅಮೂಲ್ಯ ಟಾನಿಕ್ ಎಂದೇ ಪ್ರತೀತಿ ಪಡೆದಿದೆ. ಇದು  ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ. ಬ್ರಾಹ್ಮಿ ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಮಾನಸಿಕ ಆರೋಗ್ಯವನ್ನು (mental helath) ಸುಧಾರಿಸುತ್ತದೆ. 


ಇದನ್ನೂ ಓದಿ : ದೇಹದಲ್ಲಿ ಹಿಮೋಗ್ಲೊಬಿನ್ ಕಾಪಾಡುವುದು ಹೇಗೆ..?


2, ಶಂಖಪುಷ್ಟಿ
ಬ್ರಾಹ್ಮಿಯಂತೆ ಶಂಖಪುಷ್ಟಿಯಂತೆ (Shankha Pushpi) ಮತ್ತೊಂದು ಪರಿಣಾಮಕಾರಿ ಸಸ್ಯ. ಆಯುರ್ವೇದದಲ್ಲಿ ಇದಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಮೆಮೊರಿ ಬೂಸ್ಟರ್ (Memory booster) ಆಗಿ ಕೆಲಸಮಾಡುತ್ತದೆ. ಒತ್ತಡ, ಉದ್ವೇಗ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.  ಮಾನಸಿಕ ಗೊಂದಲ, ಟೆನ್ಶನ್ ಕಡಿಮೆ ಮಾಡುತ್ತದೆ.  ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ (Brain health)ಅತಿ ಮುಖ್ಯ.


3. ಅಶ್ವಗಂಧ 


ನೈಸರ್ಗಿಕ ಇಮ್ಯೂನಿಟಿ ಬೂಸ್ಟರ್ (Immunity booster) ಅಶ್ವಗಂಧ. ಅಶ್ವಗಂಧವು ಮೆದುಳಿನ ಶಕ್ತಿಯನ್ನು ಹೆಚ್ಚಿಸುವ ಒಂದು ಸೂಪರ್ ಮೂಲಿಕೆ.  ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಅಶ್ವಗಂಧ ಒಂದು ರೀತಿಯಲ್ಲಿ ರಾಮಬಾಣ ಎಂದು ಆಯುರ್ವೇದ (Ayurveda) ಯಾವತ್ತಿಗೋ ಗುರುತಿಸಿದೆ.  ಅಶ್ವಗಂಧ ಮೆದುಳಿನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. 


4. ಧ್ಯಾನ 
ಇದು ಆಯುರ್ವೆದಿಕ್ ಜೀವನಶೈಲಿ. ಆಯುರ್ವೆದಿಕ್ ಜೀವನಶೈಲಿಯ ಒಂದು ಭಾಗವೇ ಧ್ಯಾನ.  ಧ್ಯಾನದಿಂದ ಒತ್ತಡ ಕಡಿಮೆಯಾಗುತ್ತೆ. ಒಳ್ಳೆಯ ನಿದ್ರೆ ಆಗುತ್ತದೆ.  ನೆನಪಿನ ಶಕ್ತಿ ಬಲಗೊಳ್ಳುತ್ತದೆ. ಹಾಗಾಗಿ, ಮಾನಸಿಕ ಶಕ್ತಿಗೆ ಧ್ಯಾನ ಅತಿ ಮುಖ್ಯ. 


ಇದನ್ನೂ ಓದಿ : ದೇಹ ದಣಿದು ಸುಸ್ತಾದಾಗ ಜಸ್ಟ್ ಒಂದು ಗ್ಲಾಸ್ ಮಜ್ಜಿಗೆ ಕುಡಿಯಿರಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ