ನವದೆಹಲಿ : ದೇಶದಲ್ಲಿ ಕರೋನಾವೈರಸ್ ವಿರುದ್ಧದ ಯುದ್ಧ ಜಯಿಸಲು ಸಿದ್ಧವಾಗಿರುವ ಪ್ರಮುಖ ಲಸಿಕೆಗಳಲ್ಲಿ ಕೋವಿಶೀಲ್ಡ್ ಕೂಡ ಪ್ರಮುಖವಾಗಿದೆ. ಇದೀಗ  ಕರೋನಾ ವಿರುದ್ಧ ಇನ್ನೂ 4 ಲಸಿಕೆಗಳ ಕೆಲಸ ಪ್ರಗತಿಯಲ್ಲಿದೆ ಎಂದು ಕೋವಿಶೀಲ್ಡ್ ಲಸಿಕೆ ತಯಾರಕರೂ ಹಾಗೂ ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಲ್ಲಿ ಒಬ್ಬರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. ಎಲ್ಲಾ ಲಸಿಕೆಗಳ ಪ್ರಯೋಗ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಅದು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸೀರಮ್ ಸಂಸ್ಥೆ ಹೇಳಿದೆ.


COMMERCIAL BREAK
SCROLL TO CONTINUE READING

ಕಂಪನಿಯ ಹಕ್ಕು ಏನು ?
ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಅವರ ಪ್ರಕಾರ ನಾವೆಲ್ ಕರೋನಾವೈರಸ್ ವಿರುದ್ಧ ಕೋವಿಶೀಲ್ಡ್ ಜೊತೆಗೆ ಇನ್ನೂ ನಾಲ್ಕು ಲಸಿಕೆಗಳ ಕೆಲಸ ವೇಗವಾಗಿ ನಡೆಯುತ್ತಿದೆ. ಕರೋನಾವೈರಸ್ ವಿರುದ್ಧ ಕೋವಿಶೀಲ್ಡ್ (Coveshield) ಸೇರಿದಂತೆ ಸೀರಮ್ ಇನ್ಸ್ಟಿಟ್ಯೂಟ್ ಒಟ್ಟು 5 ಲಸಿಕೆಗಳನ್ನು ತಯಾರಿಸುತ್ತಿದೆ ಎಂದು ವೆಬ್ನಾರ್ ಸಮಯದಲ್ಲಿ ಜಾಧವ್ ಹೇಳಿದ್ದಾರೆ. ಭಾರತ ಮತ್ತು ಇತರ ದೇಶಗಳಿಗೆ ತನ್ನ ಸಂಭಾವ್ಯ ಕೋವಿಡ್ -19 ಲಸಿಕೆ (Covid 19 Vaccine) ತಯಾರಿಸಲು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೊವಾವಾಕ್ಸ್ ಇಂಕ್ ಜೊತೆ ಪಾಲುದಾರಿಕೆ ಹೊಂದಿದೆ.


ಇದನ್ನೂ ಓದಿ - ಲಸಿಕೆ ಪಡೆದ ಬಳಿಕ Manipal Hospital ಚೇರಮನ್ ಡಾ. ಸುದರ್ಶನ್ ಬಲ್ಲಾಳ್ ಪ್ರತಿಕ್ರಿಯೆ ಏನು?


ಲಸಿಕೆ ಬಗ್ಗೆ ಇರುವ ಪ್ರಶ್ನೆಗಳಿಗೆ ಸೀರಮ್ ಇನ್ಸ್ಟಿಟ್ಯೂಟ್ನ ಉತ್ತರ :
ಪ್ರಯೋಗ ಹಂತ ಸಂಪೂರ್ಣವಾಗಿ ಪೂರ್ಣಗೊಳ್ಳದೇ ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವಾಕ್ಸಿನ್ (Covaxin) ಅನ್ನು ಬಳಸುವ ಬಗ್ಗೆಯೂ ಹಲವರಲ್ಲಿ ಪ್ರಶ್ನೆಗಳು ಮೂಡಿವೆ. ಆದರೆ ಈ ರೀತಿ ಲಸಿಕೆಯನ್ನು ಮೊದಲ ಬಾರಿಗೆ ಬಳಸಲಾಗುತ್ತಿಲ್ಲ ಎಂದು  ಸೀರಮ್ ಸಂಸ್ಥೆ ಹೇಳುತ್ತದೆ. 4 ವರ್ಷಗಳ ಹಿಂದೆ ಆಫ್ರಿಕಾದಲ್ಲಿ ಎಬೋಲಾ ಏಕಾಏಕಿ ಸಂಭವಿಸಿದಾಗ ಕೆನಡಾದ ಔಷಧೀಯ ಸಂಸ್ಥೆಯು ಲಸಿಕೆಯನ್ನು ತಯಾರಿಸಿತು. ಈ ಲಸಿಕೆಯ ಮೊದಲ ಹಂತವನ್ನು ಮಾತ್ರ ಪೂರ್ಣಗೊಳಿಸಲಾಗಿದ್ದು, ಎರಡನೇ ಹಂತದ ಪ್ರಯೋಗ ನಡೆಯುತ್ತಿದೆ. ಪ್ರಯೋಗ ಪೂರ್ಣಗೊಳ್ಳುವ ಮೊದಲೇ ವಿಶ್ವ ಆರೋಗ್ಯ ಸಂಸ್ಥೆ (WHO) ಈ ಪ್ರಯೋಗವನ್ನು ಅಂಗೀಕರಿಸಿತು ಮತ್ತು ಲಸಿಕೆ ಎಬೊಲವನ್ನು ನಿಯಂತ್ರಿಸಲು ಸಹಾಯ ಮಾಡಿತು ಎಂದು ಸೀರಮ್ ಸಂಸ್ಥೆ ತಿಳಿಸಿದೆ.


ಇದನ್ನೂ ಓದಿ - ವಿದೇಶಗಳಿಗೂ Corona Vaccine ನೀಡಲು ನಿರ್ಧಾರ !


ಲಸಿಕೆ ಬಳಕೆಯ ಬಗ್ಗೆ ಪ್ರಶ್ನೆ ಉದ್ಭವಿಸಲು ಕಾರಣ?
ಕೋವಿಡ್ ಲಸಿಕೆ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತಮ ಉದಾಹರಣೆ ಮೂಲಕ ಪ್ರತಿಕ್ರಿಯಿಸಿರುವ ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಅವರು ಎಚ್ 1 ಎನ್ 1 (H1N1) ಸಾಂಕ್ರಾಮಿಕ ರೋಗವನ್ನೂ ಉಲ್ಲೇಖಿಸಿದ್ದಾರೆ. 2009 ರಲ್ಲಿ ಎಚ್ 1 ಎನ್ 1 ಸಾಂಕ್ರಾಮಿಕಕ್ಕೆ ಲಸಿಕೆ ತಯಾರಿಸಿದ ನಂತರವೂ, ಕ್ಲಿನಿಕಲ್ ಪ್ರಯೋಗಗಳ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ನಂತರ ಲಸಿಕೆ ಪೂರ್ಣಗೊಳ್ಳಲು, ಲಸಿಕೆ ಅಭಿವೃದ್ಧಿಯಾಗಲು ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು. ಆದರೆ ಔಷಧ ತಯಾರಕರು 7 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಅಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು, ನಂತರ ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಆದರೆ ಇದೀಗ  ಕೋವಿಶೀಲ್ಡ್ ಬಳಕೆಯನ್ನು ಪ್ರಶ್ನಿಸುವುದು ಸರಿಯಲ್ಲ ಸುರೇಶ್ ಜಾಧವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.