Remdesivir ಲಭ್ಯತೆ ಖಾತರಿಪಡಿಸಲು ಸರ್ಕಾರದ ಮಹತ್ವದ ನಿರ್ಣಯ
Remdesivir ಔಷಧಿ ತಯಾರಕ ಕಂಪನಿಗಳ ವರ್ತಮಾನದ ಒಟ್ಟು ಉತ್ಪಾದನಾ ಸಾಮರ್ಥ್ಯ 38.80 ಬಾಟಲಗಳಾಗಿವೆ ಈ ಏಳೂ ಕಂಪನಿಗಳಿಗೆ 10 ಲಕ್ಷ ಬಾಟಲ ಪ್ರತಿ ತಿಂಗಳು ಔಷಧಿ ಉತ್ಪಾನಾ ಕ್ಷಮತೆಯ ಆರು ಹೆಚ್ಚುವರಿ ಸ್ಥಳಗಳಿಗಾಗಿ ಫಾಸ್ಟ್ ಟ್ರ್ಯಾಕ್ ಒಪ್ಪಿಗೆ ನೀಡಲಾಗಿದೆ.
ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾರ್ಚ್ 12 ಮತ್ತು 13 ರಂದು ರೆಮೆಡೆಸಿವಿರ್ನ (Covid-19 Injection) ಎಲ್ಲಾ ಪ್ರಸ್ತುತ ತಯಾರಕರು ಮತ್ತು ಮಧ್ಯಸ್ಥಗಾರರೊಂದಿಗೆ ರೆಮೆಡೆಸಿವಿರ್ ಲಭ್ಯತೆಯ ಕುರಿತು ಮಹತ್ವದ ಸಭೆ ನಡೆಸಿದ್ದಾರೆ. ಇದರಲ್ಲಿ ಉತ್ಪಾದನೆ ಮತ್ತು ಪೂರೈಕೆ ಹೆಚ್ಚಿಸಲು ಮತ್ತು ರೆಮೆಡೆಸಿವಿರ್ ಬೆಲೆಯನ್ನು ಕಡಿಮೆ ಮಾಡಲು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
Remdesivir ಔಷಧಿ ತಯಾರಕ ಕಂಪನಿಗಳ ವರ್ತಮಾನದ ಒಟ್ಟು ಉತ್ಪಾದನಾ ಸಾಮರ್ಥ್ಯ 38.80 ಬಾಟಲಗಳಾಗಿವೆ ಈ ಏಳೂ ಕಂಪನಿಗಳಿಗೆ 10 ಲಕ್ಷ ಬಾಟಲ ಪ್ರತಿ ತಿಂಗಳು ಔಷಧಿ ಉತ್ಪಾನಾ ಕ್ಷಮತೆಯ ಆರು ಹೆಚ್ಚುವರಿ ಸ್ಥಳಗಳಿಗಾಗಿ ಫಾಸ್ಟ್ ಟ್ರ್ಯಾಕ್ ಒಪ್ಪಿಗೆ ನೀಡಲಾಗಿದೆ. ಇನ್ನೂ 30 ಲಕ್ಷ ಬಾಟಲುಗಳು / ತಿಂಗಳ ಉತ್ಪಾದನೆಗಾಗಿ ಕೆಲಸ ನಡೆಯುತ್ತಿದೆ. ಇದರೊಂದಿಗೆ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ ಸುಮಾರು 78 ಲಕ್ಷ ಬಾಟಲಗಳಿಗೆ ಹೆಚ್ಚಾಗಲಿದೆ.
ಇದನ್ನೂ ಓದಿ-ನಿಮಗೆ ಗೊತ್ತಿಲ್ಲದಂತೆ ಕರೋನಾ ನಿಮ್ಮನ್ನು ಕಾಡಿರಬಹುದು.! ಪತ್ತೆ ಹಚ್ಚುವುದು ಹೇಗೆ.?
ಹೆಚ್ಚುವರಿ ಕ್ರಮವಾಗಿ, ದೇಶೀಯ ಮಾರುಕಟ್ಟೆಯಲ್ಲಿ ರೆಮೆಡಿಸ್ವಿರ್ ಪೂರೈಕೆಯ ಕೊರತೆಯನ್ನು ನೀಗಿಸಲು ಏಪ್ರಿಲ್ 11 ರಂದು ರಫ್ತು ನಿಷೇಧವನ್ನು ವಿಧಿಸಲಾಗಿದೆ. ಈ ಕಾರಣದಿಂದಾಗಿ, ದೇಶೀಯ ಅಗತ್ಯತೆಗಳನ್ನು ಪೂರೈಸಲು ಸುಮಾರು 4 ಲಕ್ಷ ಪ್ರಮಾಣಗಳನ್ನು ರೆಮೆಡೆಸ್ವಿರ್ ಸರಬರಾಜುದಾರರ ಮೂಲಕ ತಿರುಗಿಸಲಾಗುತ್ತಿದೆ. ಈ ವಾರದ ಅಂತ್ಯದ ವೇಳೆಗೆ ರೆಮೆಡೆಸ್ವಿರ್ ತಯಾರಕರು ಸ್ವಯಂಪ್ರೇರಣೆಯಿಂದ ಇದರ ಬೆಲೆಯನ್ನು 3500 ರೂ.ಗೆ ಇಳಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ- Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ
ಕೊರೊನಾ (Coronavirus) ಚಿಕಿತ್ಸೆಗೆಂದೇ ಬಳಸಲಾಗುವ ರೆಮೆಡೆಸ್ವೀರ್‌ನ ಕಪ್ಪು ಮಾರುಕಟ್ಟೆ, ಸಂಗ್ರಹಣೆ ಮತ್ತು ಅಧಿಕ ಶುಲ್ಕ ವಿಧಿಸುವ ಘಟನೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳ ಜಾರಿ ಅಧಿಕಾರಿಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ DCGI ಮೂಲಕ ನಿರ್ದೇಶಿಸಲಾಗಿದೆ. ಅದೇ ವೇಳೆ ರಾಷ್ಟ್ರೀಯ ಔಷಧಿ ಬೆಲೆ ಪ್ರಾಧಿಕಾರ (NPPA) ರೆಮಡೆಸಿವಿರ್ ಲಭ್ಯತೆಯನ್ನು ನಿರಂತರವಾಗಿ ಗಮನಿಸುತ್ತಿದೆ.
ಇದನ್ನೂ ಓದಿ- Foreigner Vaccine: ಭಾರತದಲ್ಲಿ ಎಲ್ಲಾ ವಿದೇಶಿ ಲಸಿಕೆಗಳಿಗೆ ಅನುಮತಿ ನೀಡಲು ಮುಂದಾದ ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.