ಈ 5 ಕಾರಣಗಳಿಂದಾಗಿ ಒಂದೇ ದಿನದಲ್ಲಿ ಹಾಳಾಗುತ್ತೆ `ಕೊತ್ತಂಬರಿ ಸೊಪ್ಪು`..!
ದುಡ್ಡು ಕೊಟ್ಟ ತಂದ ಈ ಸೊಪ್ಪನ್ನ ಹೇಗೆ ಕೆಡದಂತೆ ಇಡುವುದು ನಮ್ಮ ತಲೆ ನೋವು. ಇದು ಕೆಡಲು ಮುಖ್ಯ ಕಾರಣ ನಾವು ಅದನ್ನು ಸರಿಯಾಗಿ ಸಂಗ್ರಹಿಸದ ರೀತಿಯಲ್ಲಿ ಇಡುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಾಳು ಮಾಡುವ ಇಂತಹ 5 ತಪ್ಪುಗಳ ಬಗ್ಗೆ ಇಂದು ನಾವು ನಿಮಗಾಗಿ ಹೇಳಲಿದ್ದೇವೆ.
ನವದೆಹಲಿ : ಮಾರುಕಟ್ಟೆಯಿಂದ ತಂದ ತಾಜಾ ಹಸಿರು ಕೊತ್ತಂಬರಿ ಸ್ವಲ್ಪ ಸಮಯದವರೆಗೆ ಮನೆಯಲ್ಲಿಟ್ಟರೆ ಹಾಳಾಗಲು ಆರಂಭವಾಗುತ್ತದೆ. ಕೊತ್ತಂಬರಿ ಎಲೆಗಳು ಒಣಗುತ್ತವೆ ಅಥವಾ ಕೊಳೆಯುತ್ತವೆ, ದುಡ್ಡು ಕೊಟ್ಟ ತಂದ ಈ ಸೊಪ್ಪನ್ನ ಹೇಗೆ ಕೆಡದಂತೆ ಇಡುವುದು ನಮ್ಮ ತಲೆ ನೋವು. ಇದು ಕೆಡಲು ಮುಖ್ಯ ಕಾರಣ ನಾವು ಅದನ್ನು ಸರಿಯಾಗಿ ಸಂಗ್ರಹಿಸದ ರೀತಿಯಲ್ಲಿ ಇಡುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಾಳು ಮಾಡುವ ಇಂತಹ 5 ತಪ್ಪುಗಳ ಬಗ್ಗೆ ಇಂದು ನಾವು ನಿಮಗಾಗಿ ಹೇಳಲಿದ್ದೇವೆ.
ಕೊತ್ತಂಬರಿ ಸೊಪ್ಪನ್ನು ತೊಳೆಯುವುದು ಮತ್ತು ಸಂಗ್ರಹಿಸುವುದು :
ಹಸಿರು ಕೊತ್ತಂಬರಿಯನ್ನು ತೊಳೆದು ಸಂಗ್ರಹಿಸಲು ಇಷ್ಟಪಡುವ ಬಹಳಷ್ಟು ಜನರಿದ್ದಾರೆ. ಆದರೆ ಕೊತ್ತಂಬರಿ ಸೊಪ್ಪ(Green Coriander)ನ್ನು ತೊಳೆದ ತಕ್ಷಣ ಬಳಸಬೇಕು ಎಂಬುದನ್ನು ಅವರು ಮರೆಯುತ್ತಾರೆ. ತೊಳೆದ ನಂತರ ನೀವು ಅದನ್ನು ಯಾವುದೇ ರೀತಿಯಲ್ಲಿ ಸಂಗ್ರಹಿಸಿದರೆ ಅದು ಹಾಳಾಗುತ್ತದೆ. ತೊಳೆದ ನಂತರ ನೀವು ಅದನ್ನು ಫ್ಯಾನ್ ಅಥವಾ ಸೂರ್ಯನ ಬೆಳಕಿನಲ್ಲಿ ಒಣಗಿಸಲು ಪ್ರಯತ್ನಿಸದಿದ್ದರೂ ಸಹ. ಕೊತ್ತಂಬರಿ ಸೊಪ್ಪು ಒಂದು ದಿನದೊಳಗೆ ಒಣಗುತ್ತದೆ ಅಥವಾ ಇಲ್ಲದಿದ್ದರೆ ತೇವಾಂಶದಿಂದಾಗಿ ಕೊಳೆಯುತ್ತದೆ ಮತ್ತು ಇದರಿಂದ ವಾಸನೆ ಬರಲು ಆರಂಭವಾಗುತ್ತದೆ. ಕೊತ್ತಂಬರಿಯನ್ನು ಒಣಗಿಸಿಡುವುದು ಯಾವಾಗಲೂ ಉತ್ತಮ.
ಇದನ್ನೂ ಓದಿ : Fatty Liver Disease : ನಿಮ್ಮ ಲಿವರ್ ಸಮಸ್ಯೆಗೆ ಮೂಲ ಕಾರಣ ಈ ಅಭ್ಯಾಸಗಳು : ಇಂದೇ ನಿಲ್ಲಿಸಿ ಇಲ್ಲದಿದ್ದರೆ ತಪ್ಪಿದಲ್ಲ ಅಪಾಯ
ಕಾಂಡಗಳನ್ನು ಕತ್ತರಿಸದೆ ಕೊತ್ತಂಬರಿ ಸೊಪ್ಪನ್ನು ಸಂಗ್ರಹಿಸುವುದು : ಕೊತ್ತಂಬರಿ ಕಾಂಡಗಳನ್ನು ಯಾವಾಗಲೂ ಕತ್ತರಿಸಿ ಶೇಖರಿಸಿಡಬೇಕು(Green Coriander Storage), ಏಕೆಂದರೆ ಕೊತ್ತಂಬರಿ ಸೊಪ್ಪಿನ ಕಾಂಡಗಳು ಕೆಲವೊಮ್ಮೆ ತೇವಾಂಶವನ್ನು ಹೊಂದಿರುತ್ತವೆ ಮತ್ತು ಇದು ಕೊತ್ತಂಬರಿಯನ್ನು ಕೊಳೆಯಲು ಕೂಡ ಕೆಲಸ ಮಾಡಬಹುದು. ಕೊತ್ತಂಬರಿ ಸೊಪ್ಪಿನ ಬೇರುಗಳು ಮತ್ತು ಕಾಂಡಗಳನ್ನು ಕತ್ತರಿಸಿ ಅದನ್ನು ಸಂಗ್ರಹಿಸುವುದರಿಂದ, ಅದನ್ನು ದೀರ್ಘಕಾಲ ತಾಜಾತನದಲ್ಲಿಡಬಹುದು.
ಫ್ರಿಜ್ ನಲ್ಲಿ ಸಡಿಲವಾಜಿ ಕಟ್ಟಿ ಕೊತ್ತಂಬರಿ ಸೊಪ್ಪನ್ನು ಸಂಗ್ರಹಿಸುವುದು :
ಕೊತ್ತಂಬರಿಯನ್ನು ತಪ್ಪಾಗಿ ಕೂಡ ಫ್ರಿಜ್(Refrigerator) ನಲ್ಲಿ ತೆರೆದಿಡಬಾರದು. ಏಕೆಂದರೆ ಕೊತ್ತಂಬರಿ ಸೊಪ್ಪನ್ನು ಫ್ರಿಜ್ ನಲ್ಲಿ ಇರಿಸಿದ ನಂತರ, ಅದರ ಎಲೆಗಳು ಕೆಲವು ಗಂಟೆಗಳಲ್ಲಿ ಒಣಗುತ್ತವೆ ಮತ್ತು ಕೊತ್ತಂಬರಿ ಹಾಳಾಗುತ್ತದೆ. ಅಷ್ಟೇ ಅಲ್ಲ, ಕೊತ್ತಂಬರಿ ಸೊಪ್ಪನ್ನು ಫ್ರಿಜ್ ನಲ್ಲಿ ತೆರೆದಿಟ್ಟರೆ ಅದರ ವಾಸನೆ ಬೇರೆಲ್ಲದಕ್ಕೂ ತಗಲುವ ಸಾಧ್ಯತೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ