Salt Side Effects: ಆಹಾರದ ಸ್ವಾದ ಹೆಚ್ಚಿಸಲು ಉಪ್ಪಿನ ಬದಲಿಗೆ ಈ 4 ವಸ್ತುಗಳನ್ನು ಬಳಸಬಹುದು

Salt Side Effects: ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ನಾವು ಒಂದು ದಿನದಲ್ಲಿ ಎಷ್ಟು ಉಪ್ಪನ್ನು ತಿನ್ನಬೇಕು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Oct 14, 2021, 12:13 PM IST
  • ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿದರೆ ಆಹಾರದ ರುಚಿ ಕಡಿಮೆ ಆಗುತ್ತದೆ ಎಂದು ಹಲವರು ಭಾವಿಸುತ್ತಾರೆ
  • ಆದರೆ ನೀವು ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿದರೆ, ಆಹಾರದ ರುಚಿ ಹದಗೆಡುವ ಬದಲು ಹೆಚ್ಚಾಗುತ್ತದೆ
  • ಈ 4 ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ನೀವು ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ
Salt Side Effects: ಆಹಾರದ ಸ್ವಾದ ಹೆಚ್ಚಿಸಲು ಉಪ್ಪಿನ ಬದಲಿಗೆ ಈ 4 ವಸ್ತುಗಳನ್ನು ಬಳಸಬಹುದು title=
Side Effects Of Salt

Salt Side Effects:  ಉಪ್ಪಿಗಿಂತ ರುಚಿ ಬೇರೆ ಇಲ್ಲ. ಜಗತ್ತಿನಲ್ಲಿ ಉಪ್ಪನ್ನು ಸೇವಿಸಲು ಇಷ್ಟಪಡದ ವ್ಯಕ್ತಿ ಸಿಗುವುದು ತುಂಬಾನೇ ವಿರಳ. ನಾವು ಆಹಾರದಲ್ಲಿ ಏನನ್ನಾದರೂ ಬಿಡಬಹುದು, ಆದರೆ ಉಪ್ಪು ಇಲ್ಲದೆ ಯಾವುದೇ ಆಹಾರ ಅಪೂರ್ಣವೆಂದು ತೋರುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಉಪ್ಪು ಸೇವನೆಯು ಅನೇಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಹಾಗಾಗಿ, ಆಗಾಗ್ಗೆ ನಮ್ಮ ಆಹಾರದಲ್ಲಿ ಉಪ್ಪಿಗೆ ಪರ್ಯಾಯವನ್ನು ಬಳಸುವುದು ಕೂಡ ಅವಶ್ಯಕವಾಗುತ್ತದೆ. ಅದಕ್ಕಾಗಿಯೇ ನಾವು ನಿಮಗಾಗಿ ಅಂತಹ 4 ವಸ್ತುಗಳನ್ನು ತಂದಿದ್ದೇವೆ, ಇದನ್ನು ಉಪ್ಪಿನ ಬದಲಿಗೆ ಬಳಸಬಹುದು ಮತ್ತು ಇದರಿಂದ ಆಹಾರದ ರುಚಿ ಕೂಡ ಹೆಚ್ಚಾಗುತ್ತದೆ.

ಆಹಾರದ ಸ್ವಾದ ಹೆಚ್ಚಿಸಲು ಉಪ್ಪಿನ ಬದಲಿಗೆ ಬಳಸಬಹುದಾದ ಪದಾರ್ಥಗಳ ಬಗ್ಗೆ ತಿಳಿಯುವ ಮೊದಲು ಅಧಿಕ ಉಪ್ಪು ಸೇವನೆಯಿಂದ ಉಂಟಾಗಬಹುದಾದ  ಅಡ್ಡಪರಿಣಾಮಗಳ (Side Effects Of Excess Salt Intake) ಬಗ್ಗೆ ತಿಳಿದಿರುವುದು ಮುಖ್ಯ.

ಇದನ್ನೂ ಓದಿ- Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ

ಅಧಿಕ ಉಪ್ಪು ಸೇವನೆಯ ಅಡ್ಡ ಪರಿಣಾಮಗಳು (Side Effects of excess salt intake):
ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಪ್ರಕಾರ, ಹೆಚ್ಚಿನ ಜನರು ದಿನಕ್ಕೆ 9 ರಿಂದ 12 ಗ್ರಾಂ ಉಪ್ಪನ್ನು ಸೇವಿಸುತ್ತಾರೆ. ಇದು ಅಗತ್ಯಕ್ಕಿಂತ ಹೆಚ್ಚು. ಅತಿಯಾದ ಉಪ್ಪಿನ ಸೇವನೆಯಿಂದ ಹಲವು ಅಡ್ಡಪರಿಣಾಮಗಳು ಉಂಟಾಗುತ್ತವೆ. 

>> ಅಧಿಕ ರಕ್ತದೊತ್ತಡದಂತಹ (High Blood Pressure) ಅಪಾಯಕಾರಿ ರೋಗ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು.
>> ಹೊಟ್ಟೆಯ ಹಿಗ್ಗುವಿಕೆ
>> ದೇಹದ ಊತ
>> ಅತಿಯಾದ ಬಾಯಾರಿಕೆ
>> ತೂಕ ಹೆಚ್ಚಾಗುವುದು
>> ಆಗಾಗ್ಗೆ ಮೂತ್ರ ವಿಸರ್ಜನೆ
>> ನಿದ್ರಾಹೀನತೆ
>> ದಣಿವು
>> ಹೊಟ್ಟೆ ನೋವು, ಇತ್ಯಾದಿ.

ಉಪ್ಪಿನ ಬದಲು ಈ ವಸ್ತುಗಳನ್ನು ಬಳಸಿ - (Healthy Substitute for Salt) : 
ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿದರೆ ಆಹಾರದ ರುಚಿ ಕಡಿಮೆ ಆಗುತ್ತದೆ ಎಂದು ಹಲವರು ಭಾವಿಸುತ್ತಾರೆ.  ಆದರೆ ನೀವು ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿದರೆ, ಆಹಾರದ ರುಚಿ ಹದಗೆಡುವ ಬದಲು ಹೆಚ್ಚಾಗುತ್ತದೆ.

ಬೆಳ್ಳುಳ್ಳಿ: 
ಉಪ್ಪಿನ (Salt) ಪ್ರಮಾಣವನ್ನು ಕಡಿಮೆ ಮಾಡುವುದರೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಬಹುದು. ಇದರೊಂದಿಗೆ, ಆಹಾರದಲ್ಲಿ ಸ್ವಲ್ಪ ಪ್ರಮಾಣದ ಉಪ್ಪನ್ನು ಕಡಿಮೆ ಮಾಡುವುದು ಮಾತ್ರವಲ್ಲ,  ನೀವು ಬೆಳ್ಳುಳ್ಳಿಯ ಪ್ರಯೋಜನಗಳನ್ನು ಸಹ ಪಡೆಯುತ್ತೀರಿ.

ಇದನ್ನೂ ಓದಿ- Alert! ಉಪ್ಪಿನ ಜಾಗದಲ್ಲಿ ನೀವೂ ಕೂಡ ಪ್ಲಾಸ್ಟಿಕ್ ಸೇವಿಸುತ್ತಿಲ್ಲವಲ್ಲ? ಸಂಶೋಧನೆಯಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

ಕರಿಮೆಣಸು ಪುಡಿ: 
ನೀವು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬದಲಿಗೆ ಕರಿಮೆಣಸಿನ ಪುಡಿಯನ್ನು ಸೇರಿಸಿದರೆ, ದೈಹಿಕ ಉರಿಯೂತವನ್ನು ಕಡಿಮೆ ಮಾಡುವಂತಹ ಲಾಭವನ್ನು ನೀವು ಪಡೆಯುತ್ತೀರಿ.

ಶುಂಠಿ:
ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಮತ್ತು ಇದು ಕಡಿಮೆ ಪ್ರಮಾಣದ ಉಪ್ಪಿನಿಂದಾಗಿ ಆಹಾರದ ರುಚಿಯನ್ನು ಕೆಡಿಸಲು ಅನುಮತಿಸುವುದಿಲ್ಲ.

ನಿಂಬೆ:
ಸ್ವಲ್ಪ ಹುಳಿ ರುಚಿಯು ಉಪ್ಪಿನ ಕೊರತೆಯನ್ನು ಸಮತೋಲನಗೊಳಿಸುತ್ತದೆ. ಹಾಗಾಗಿ, ನೀವು ಆಹಾರದಲ್ಲಿ ನಿಂಬೆ ರಸವನ್ನು ಸೇರಿಸಬಹುದು. ಇದರೊಂದಿಗೆ ನೀವು ವಿಟಮಿನ್-ಸಿ ಯಂತಹ ಪೋಷಕಾಂಶಗಳನ್ನು ಸಹ ಪಡೆಯುತ್ತೀರಿ ಮತ್ತು ನೀವು ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಒಂದು ದಿನದಲ್ಲಿ ಎಷ್ಟು ಉಪ್ಪು ತಿನ್ನಬೇಕು? (How much salt we should eat?)
ವಿಶ್ವದಾದ್ಯಂತ ಹೆಚ್ಚಿನ ಜನರು ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ. ಡಬ್ಲ್ಯುಎಚ್‌ಒ ಪ್ರಕಾರ, ಅಧಿಕ ರಕ್ತದೊತ್ತಡದಂತಹ ಉಪ್ಪಿನ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಸಾಮಾನ್ಯ ವ್ಯಕ್ತಿಯು ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ತಿನ್ನಬಾರದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತಪ್ಪಿಸಲು, ದಿನಕ್ಕೆ 2 ಗ್ರಾಂ ಗಿಂತ ಹೆಚ್ಚು ಸೋಡಿಯಂ ಮತ್ತು 3.5 ಗ್ರಾಂ ಗಿಂತ ಕಡಿಮೆ ಪೊಟ್ಯಾಸಿಯಮ್ ತೆಗೆದುಕೊಳ್ಳಬಾರದು.

ಸೂಚನೆ: ಇಲ್ಲಿ ನೀಡಲಾಗಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿರುವುದಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News