Stress Relief From Lotus Flower: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಾನಸಿಕ ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೂ, ಸಣ್ಣ ಸಣ್ಣ ಸಮಸ್ಯೆಗಳಿಗೂ ತಲೆ ಕೆಡಿಸಿಕೊಳ್ಳುತ್ತಾ ಒತ್ತಡವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಒತ್ತಡದಿಂದಾಗಿ ಜನರ ಮಾನಸಿಕ ಆರೋಗ್ಯದಲ್ಲಿ ಭಾರೀ ಅಪಾಯವನ್ನು ಉಂಟು ಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಕೆಲವರು ವೈದ್ಯರ ಸಲಹೆ ಪಡೆದು ಔಷಧ ಸೇವಿಸಿದರೆ, ಇನ್ನೂ ಕೆಲವರು ದಿನನಿತ್ಯ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸಾಕಷ್ಟು ಸಂಶೋಧನೆಯ ಬಳಿಕ ಮಾನಸಿಕ ಒತ್ತಡದ ಸಮಸ್ಯೆಗೆ ಸುಲಭ ಪರಿಹಾರವನ್ನು ಕಂಡುಹಿಡಿಯಲಾಗಿದೆ. ಅದು ಪ್ರಕೃತಿಗೆ ಸಂಬಂಧಿಸಿದ್ದಾಗಿದೆ. ಮನುಷ್ಯನ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಕಮಲದ ಹೂವು ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಬಳಸಲಾಗುತ್ತದೆ. ಕಮಲದ ಹೂವುಗಳು ನೋಟದಲ್ಲಿ ಎಷ್ಟು ಸುಂದರವಾಗಿವೆಯೋ, ಅವುಗಳು ಅನೇಕ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.


ಇದನ್ನೂ ಓದಿ:  Benefits Of Dates : ಪುರುಷರ ಆರೋಗ್ಯಕ್ಕೆ 4 ನೆನಸಿದ ಖರ್ಜೂರ : ಇದು ನಿಮ್ಮ ಶಕ್ತಿ ಹೆಚ್ಚಿಸುತ್ತದೆ 


ಆಯುರ್ವೇದದಲ್ಲಿ ಕಮಲದ ಪ್ರತಿಯೊಂದು ಭಾಗದಿಂದ ವಿವಿಧ ರೀತಿಯ ಔಷಧಿಗಳನ್ನು ತಯಾರಿಸಲಾಗುತ್ತದೆ. ಕಮಲದ ಹೂವು ಬಿಳಿ, ಗುಲಾಬಿ, ನೀಲಿ ಹೀಗೆ ಹಲವು ಬಣ್ಣಗಳನ್ನು ಹೊಂದಿದೆ. ಇವೆಲ್ಲವೂ ತನ್ನದೇ ಆದ ವಿಶಿಷ್ಟ ಗುಣಗಳನ್ನು ಹೊಂದಿವೆ. ಕಮಲದ ಹೂವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ಒತ್ತಡವನ್ನು ಕಡಿಮೆ ಮಾಡಲು ಕಮಲದ ಹೂವನ್ನು ಮನೆಯಲ್ಲಿ ಬೆಳಸುವಂತೆ ಸಲಹೆ ನೀಡುತ್ತಾರೆ. ಕಮಲವು ಆತಂಕವನ್ನು ಸಹ ನಿಯಂತ್ರಿಸುತ್ತದೆ. ಇನ್ನು ಒತ್ತಡವನ್ನು ಕಡಿಮೆ ಮಾಡಲು ಕಮಲವು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯೋಣ.


ಕಮಲದ ಹೂವಿನಲ್ಲಿ ಎರಡು ಪ್ರಮುಖ ಅಂಶಗಳು ಕಂಡುಬರುತ್ತವೆ. ಒಂದು ಅಪೋಮಾರ್ಫಿನ್ ಮತ್ತು ಇನ್ನೊಂದು ನ್ಯೂಸಿಫೆರಿನ್. ಎರಡೂ ಅಂಶಗಳು ಮೆದುಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತಂಕ, ಖಿನ್ನತೆಯಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ, ಸಿ, ಕಬ್ಬಿಣದಂತಹ ಪೋಷಕಾಂಶಗಳು ಕಮಲದ ಹೂವಿನಲ್ಲೂ ಇವೆ.


ಮನಸ್ಸಿಗೆ ಶಾಂತಿಯನ್ನು ತರಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ನೀವು ಕಮಲದ ಹೂವನ್ನು ಬಳಸಬಹುದು. ಕಮಲದ ಹೂವು ನಿಮ್ಮ ಮನಸ್ಸಿಗೆ ಶಾಂತಿಯನ್ನು ತರುತ್ತದೆ. ನೀವು ಮನೆಯಲ್ಲಿ ಪೂಜೆ ಮಾಡುವಾಗ ಕಮಲದ ಹೂವನ್ನು ಬಳಸಿದರೆ ಸುತ್ತಲೂ ಸಂತೋಷದ ವಾತಾವರಣ ಇರುತ್ತದೆ. ಇದು ಫೀಲ್-ಗುಡ್ ಹಾರ್ಮೋನ್‌ಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಕಮಲದ ಸಾರವನ್ನು ಬಳಸುವುದರಿಂದ ಒತ್ತಡ ಮತ್ತು ಆತಂಕವನ್ನು ನಿವಾರಿಸಬಹುದು, ಖಿನ್ನತೆಯಲ್ಲಿ ಇರುವವರಿಗೆ ಇದು ತುಂಬಾ ಸಹಾಯಕವಾಗಿದೆ.


ಇದನ್ನೂ ಓದಿ: ಮುಂದಿನ ಹತ್ತು ವರ್ಷಗಳಲ್ಲಿ ಹೃದಯಾಘಾತ ಯಾವಾಗ ಆಗುತ್ತದೆ ಎನ್ನುವುದನ್ನು ನಿಖರವಾಗಿ ಹೇಳುತ್ತದೆ ಈ ಎಕ್ಸ್-ರೇ


(ಸೂಚನೆ: ಈ ಮಾಹಿತಿಯ ನಿಖರತೆ, ಸಮಯೋಚಿತತೆ ಮತ್ತು ನೈಜತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಅದರ ನೈತಿಕ ಹೊಣೆಗಾರಿಕೆ Zee News kannadaದಲ್ಲ. ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ನಾವು ವಿನಮ್ರವಾಗಿ ವಿನಂತಿಸುತ್ತೇವೆ. ನಿಮಗೆ ಮಾಹಿತಿ ನೀಡುವುದು ಮಾತ್ರ ನಮ್ಮ ಗುರಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.