ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕಿರಿ ವಯಸ್ಸಿನವರು ಮಾತ್ರವಲ್ಲ ಪುಟ್ಟ ಮಕ್ಕಳು ಕೂಡಾ ಹೃದಯಾಘಾತಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ. ಆರೋಗ್ಯವಂತರಂತೆಯೇ ಕಾಣುತ್ತಿದ್ದರೂ, ಇದ್ದಕ್ಕಿದ್ದಂತೆಯೇ ಕುಸಿದುಬಿದ್ದು ಸಾವಿಗೀಡಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಮಾತನಾಡುತ್ತಾ ಕುಳಿತಿದ್ದವರು, ನಗುವಾಗ, ಆಟ ಆಡುವಾಗ, ಡಾನ್ಸ್ ಮಾಡುವಾಗ, ವ್ಯಾಯಾಮ ಮಾಡುವಾಗ, ವಾಕಿಂಗ್ ಮಾಡುವಾಗ ಹೃದಯ ಇದ್ದಕ್ಕಿದ್ದಂತೆ ಕೆಲಸ ನಿಲ್ಲಿಸಿ ಬಿಡುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿ ಬರುತ್ತಿದೆ. ಈ ಘಟನೆಗಳು ಸಾಮಾನ್ಯವಾಗಿ ಎಲ್ಲರನ್ನೂ ಆತಂಕಕ್ಕೆ ಗುರಿ ಮಾಡುತ್ತದೆ. ಹೀಗಾಗಿ ಜನರು ಈಗ ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಈ ಮಧ್ಯೆ, ವಿಜ್ಞಾನಿಗಳು ಕೂಡಾ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. AI ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರವನ್ನು ಅನುಸರಿಸುವ ಮೂಲಕ ಮುಂದಿನ ಹತ್ತು ವರ್ಷಗಳಲ್ಲಿ ಹೃದಯದ ಆರೋಗ್ಯ ಹೇಗಿರಬಹುದು ಎನ್ನುವುದನ್ನು ನಿಖರವಾಗಿ ಕಂಡು ಹಿಡಿಯಲಾಗುತ್ತದೆ ಎನ್ನಲಾಗಿದೆ. ಅಂದರೆ ಮುಂದಿನ ಹತ್ತು ವರ್ಷಗಳಲ್ಲಿ ಒಬ್ಬ ವ್ಯಕ್ತಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಆಗುವ ಸಾಧ್ಯತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.ಇದೆಲ್ಲವನ್ನೂ ಒಂದು ಎಕ್ಸ್-ರೇ ಮೂಲಕ ಕಂಡು ಕೊಳ್ಳಲಾಗುತ್ತದೆ.
CXR-CVD ರಿಸ್ಜ್ ಹೆಸರಿನ ತಂತ್ರಜ್ಞಾನ :
ವರದಿಯ ಪ್ರಕಾರ, ಈ ಹೊಸ ತಂತ್ರಜ್ಞಾನವನ್ನು CXR-CVD ರಿಸ್ಕ್ ಎಂದು ಕರೆಯಲಾಗುತ್ತದೆ. ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ವಿಜ್ಞಾನಿಗಳು ಇದನ್ನು ಕಂಡುಹಿಡಿದಿದ್ದಾರೆ. ಇದಕ್ಕಾಗಿ 11430 ರೋಗಿಗಳನ್ನು ಅಧ್ಯಯನ ಮಾಡಲಾಗಿದೆ. ಈ ರೋಗಿಗಳನ್ನು ಎದೆಯ ಭಾಗದ ಎಕ್ಸ್ ರೇಗೆ ಒಳಪಡಿಸಲಾಗಿದೆ. ಎಕ್ಸ್ ರೇ ನಂತರ, ರೋಗಿಯು ಸ್ಟ್ಯಾಟಿನ್ ಥೆರಪಿಗೆ ತಯಾರಿ ಮಾಡಲಾಗುತ್ತದ. ಈ ಥೆರಪಿ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗಿದೆ.
ಇದನ್ನೂ ಓದಿ : Benefits Of Dates : ಪುರುಷರ ಆರೋಗ್ಯಕ್ಕೆ 4 ನೆನಸಿದ ಖರ್ಜೂರ : ಇದು ನಿಮ್ಮ ಶಕ್ತಿ ಹೆಚ್ಚಿಸುತ್ತದೆ
ಹೃದ್ರೋಗ ಮಾದರಿ ಮೇಲೆ ಸಂಶೋಧಕರ ಗಮನ :
ರೇಡಿಯೊಲಾಜಿಕಲ್ ಸೊಸೈಟಿ ಆಫ್ ನಾರ್ತ್ ಅಮೇರಿಕಾ ವಾರ್ಷಿಕ ಸಭೆಯಲ್ಲಿ ಈ ಸಂಶೋಧನೆಯ ಫಲಿತಾಂಶಗಳನ್ನು ಪ್ರಸ್ತುತಪಡಿಸಲಾಯಿತು. ಇದನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದು ಕರೆಯಲಾಗಿದೆ. ಎಕ್ಸ್-ರೇ ಫಿಲ್ಮ್ ಅನ್ನು ಆಳವಾಗಿ ನೋಡಲು ಟ್ರೆಂಡ್ ಮಾಡಬಹುದು. ಇದರ ನಂತರ ಹೃದ್ರೋಗದ ಮಾದರಿಯನ್ನು ತಿಳಿದುಕೊಳ್ಳಲಾಗುತ್ತದೆ.
ಚಿಕಿತ್ಸೆ ಪಡೆಯದವರಿಗೆ ತುಂಬಾ ಪ್ರಯೋಜನಕಾರಿ :
ಈ ಎಕ್ಸ್-ರೇ ಫಿಲ್ಮ್ ಅನ್ನು ನೋಡುವ ಮೂಲಕ ಮುಂದಿನ 10 ವರ್ಷಗಳವರೆಗಿನ ಹೃದಯದ ಸ್ಥಿತಿಯನ್ನು ಹೇಳುತ್ತದೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ಕಾರ್ಡತಿಳಿಸಿದ್ದಾರೆ. ಈ ಎಕ್ಸ್ ರೆ ಮೂಲಕ ಮುಂದಿನ 10 ವರ್ಷಗಳಲ್ಲಿ ಆ ವ್ಯಕ್ತಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವಿದೆಯೇ ಎಂಬುದನ್ನು ಹೇಳಲಾಗುತ್ತದೆ. ಹೃದ್ರೋಗಕ್ಕೆ ಯಾವುದೇ ಚಿಕಿತ್ಸೆಯನ್ನು ತೆಗೆದುಕೊಳ್ಳದವರಿಗೆ ಈ ಎಕ್ಸ್ ರೆಯಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಇದನ್ನೂ ಓದಿ : Tea To Reduce Cholesterol: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಚಹಾ ಒಮ್ಮೆ ಟ್ರೈ ಮಾಡಿ ನೋಡಿ
ಸದ್ಯಕ್ಕೆ ಈ ಕೆಳಗಿನ ಮಾರ್ಗಸೂಚಿಗಳಿವೆ :
ಈ ತಂತ್ರಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳ ನ್ನು ಜಾರಿ ಮಾಡಲಾಗಿದೆ. ಇದರ ಪ್ರಕಾರ, ಹತ್ತು ವರ್ಷಗಳವರೆಗೆ ಗಂಭೀರ ಹೃದ್ರೋಗಿಗಳ ಬಗ್ಗೆ ಅಂದಾಜು ಮಾಡಬಹುದು. ಈ ಮೂಲಕ ವ್ಯಕ್ತಿಗೆ ಸ್ಟ್ಯಾಟಿನ್ ಚಿಕಿತ್ಸೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಅಂದಾಜು ಮಾಡಬಹುದು. ಈ ತಂತ್ರದಲ್ಲಿ, ವ್ಯಕ್ತಿಯ ವಯಸ್ಸು, ಲಿಂಗ, ರಕ್ತದೊತ್ತಡ, ಧೂಮಪಾನ, ಟೈಪ್-ಟು ಮಧುಮೇಹ ಮತ್ತು ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ಹೃದ್ರೋಗದ ಅಪಾಯದಲ್ಲಿರುವವರಿಗೆ ಮಾತ್ರ ಸ್ಟ್ಯಾಟಿನ್ ಚಿಕಿತ್ಸೆಯನ್ನು ನೀಡಲಾಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.