PM Kisan Samman Scheme: ಈ ರಾಜ್ಯದ 21 ಲಕ್ಷ ರೈತರಿಗೆ ಸಿಗೋದಿಲ್ಲ PM Kisan ನಿಧಿಯ 13 ನೇ ಕಂತಿನ ಹಣ!! ಕಾರಣವೇನು?

PM Kisan Samman Scheme: ಕೆಲವು ಅನರ್ಹರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಸರ್ಕಾರವು ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದೆ. ಇದಾದ ನಂತರ ಸರ್ಕಾರವು ಭೂ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಲ್ಲಿ ವಿವಿಧ ರಾಜ್ಯಗಳ ಲಕ್ಷಾಂತರ ಜನರು ಯೋಜನೆಗೆ ಅನರ್ಹರಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ರಾಜ್ಯ ಒಂದರಲ್ಲಿಯೆ ಸುಮಾರು 21 ಲಕ್ಷ ಅನರ್ಹರ ಸಂಖ್ಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆ ರೈತರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಅವರಿಗೆ 13ನೇ ಕಂತಿನ ಲಾಭವೂ ಸಿಗುವುದಿಲ್ಲ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Dec 5, 2022, 11:23 AM IST
    • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಅಕ್ರಮ ಹಿನ್ನೆಲೆ
    • ಉತ್ತರ ಪ್ರದೇಶದ 21 ಲಕ್ಷ ಅನರ್ಹರಿಗೆ ಸಿಗಲ್ಲ ಕಂತಿನ ಲಾಭ
    • ಈಗಾಗಲೇ ಪಡೆದ ಹಣವನ್ನು ಹಿಂತಿರುಗಿಸುವಂತೆ ನೋಟಿಸ್
PM Kisan Samman Scheme: ಈ ರಾಜ್ಯದ 21 ಲಕ್ಷ ರೈತರಿಗೆ ಸಿಗೋದಿಲ್ಲ PM Kisan ನಿಧಿಯ 13 ನೇ ಕಂತಿನ ಹಣ!! ಕಾರಣವೇನು?  title=
PM Kisan Yojana

PM Kisan Samman Scheme: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ರೈತರ ಖಾತೆಗೆ ವರ್ಗಾವಣೆಯಾಗಿದೆ. ಈ ಕಂತನ್ನು ದೇಶಾದ್ಯಂತ ಸುಮಾರು 10 ಕೋಟಿ ರೈತರು ಪಡೆದಿದ್ದಾರೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ 13 ನೇ ಕಂತು ಡಿಸೆಂಬರ್ ಅಂತ್ಯಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಮೋದಿ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. 12ನೇ ಕಂತು ಖಾತೆಗಳಿಗೆ ವರ್ಗಾವಣೆಯಾಗುವ ಮುನ್ನವೇ ಲಕ್ಷಗಟ್ಟಲೆ ಜನರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು.

ಇದನ್ನೂ ಓದಿ: Video Viral: ಪೊಲೀಸ್ ಠಾಣೆಯೊಂದರಲ್ಲಿ ಕಳ್ಳನೊಬ್ಬನ ಪ್ರಾಮಾಣಿಕ ತಪ್ಪೊಪ್ಪಿಗೆ ಹೇಗಿದೆ ಗೊತ್ತಾ?

ಕೆಲವು ಅನರ್ಹರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಸರ್ಕಾರವು ನಿರಂತರವಾಗಿ ದೂರುಗಳನ್ನು ಸ್ವೀಕರಿಸುತ್ತಿದೆ. ಇದಾದ ನಂತರ ಸರ್ಕಾರವು ಭೂ ದಾಖಲೆಗಳನ್ನು ಪರಿಶೀಲಿಸಿದ್ದು, ಇದರಲ್ಲಿ ವಿವಿಧ ರಾಜ್ಯಗಳ ಲಕ್ಷಾಂತರ ಜನರು ಯೋಜನೆಗೆ ಅನರ್ಹರಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ರಾಜ್ಯ ಒಂದರಲ್ಲಿಯೆ ಸುಮಾರು 21 ಲಕ್ಷ ಅನರ್ಹರ ಸಂಖ್ಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆ ರೈತರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಅವರಿಗೆ 13ನೇ ಕಂತಿನ ಲಾಭವೂ ಸಿಗುವುದಿಲ್ಲ ಎಂದು ತಿಳಿದುಬಂದಿದೆ.

ಪಿಎಂ ಕಿಸಾನ್ ನಿಧಿಯ ಹಣವನ್ನು ಅಕ್ರಮವಾಗಿ ತೆಗೆದುಕೊಂಡಿರುವ ಅಂತಹ ಜನರನ್ನು ಸರ್ಕಾರ ನಿರಂತರವಾಗಿ ಗುರುತಿಸುತ್ತಿದೆ. ಗುರುತಿಸಿದ ನಂತರ ಅಂತಹವರಿಗೆ ಈಗಾಗಲೇ ಪಡೆದುಕೊಂಡಿರುವ ಹಣವನ್ನು ಹಿಂತಿರುಗಿಸುವಂತೆ ಸೂಚನೆ ನೀಡಿ ನೋಟಿಸ್ ಕಳುಹಿಸಲಾಗುತ್ತಿದೆ. ಹಣ ಹಿಂತಿರುಗಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಇದನ್ನೂ ಓದಿ:  Shepherd Viral Video: ಕುರಿ ಜೊತೆ ಕುರಿಗಾಹಿಯ ಸಖತ್ ಡ್ಯಾನ್ಸ್: ವಿಡಿಯೋ ನೋಡಿದ್ರೆ ದಿಲ್ ಖುಷ್ ಆಗೋದು ಗ್ಯಾರಂಟಿ

13ನೇ ಕಂತಿನ ಲಾಭ ಸಿಗುವುದಿಲ್ಲ”

ನಿಮ್ಮ ಇ-ಕೆವೈಸಿಯನ್ನು ನೀವು ಅಪ್ಟೇಟ್ ಮಾಡಿಲ್ಲದಿದ್ದರೆ ಸಾಧ್ಯವಾದಷ್ಟು ಬೇಗ ಈ ಕೆಲಸವನ್ನು ಮಾಡಿ. ಇಲ್ಲದಿದ್ದರೆ ಅರ್ಹತೆ ಇದ್ದರೂ ಇ-ಕೆವೈಸಿ ಮಾಡದ ಕೆಲವರಿಗೆ ಲಾಭವೂ ಸಿಗುವುದಿಲ್ಲ. ಈಗಾಗಲೇ ಮಾಡದ ಜನರಿಗೆ 12 ನೇ ಕಂತಿನ ಲಾಭವೂ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ನೀವು ಸಾಧ್ಯವಾದಷ್ಟು ಬೇಗ ಇ-ಕೆವೈಸಿ ಮಾಡಿ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News