Guava Benefits in Diabetes- ಸೀಬೆ ಹಣ್ಣನ್ನು ಸಾಮಾನ್ಯವಾಗಿ ಒಂದು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಎ, ಬಿ ಮತ್ತು ಫಾಸ್ಫರಸ್ ಸಮೃದ್ಧವಾಗಿದೆ. ಒಂದು ಸಂಶೋಧನೆಯ ಪ್ರಕಾರ, ಸೀಬೆಹಣ್ಣು ಅಥವಾ ಪೇರಲೆ ಹಣ್ಣು ಮಾತ್ರವಲ್ಲದೆ ಅದರ ಎಲೆಗಳು ಸಹ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ ಎನ್ನಲಾಗಿದೆ, ಆದರೆ ಸೀಬೇಹನ್ನನ್ನು ತಿನ್ನಬಾರದು ಎಂದು ಹಲವು ಜನರು ಹೇಳುತ್ತಾರೆ. ಇಂದು ನಾವು ನಿಮಗೆ ಮಧುಮೇಹಿಗಳಿಗೆ ಸೀಬೆ ಎಷ್ಟು ಪ್ರಯೋಜನಕಾರಿಯಾಗಿದೆ ಮತ್ತು ಅದರ ಎಲೆಗಳು ಹೇಗೆ ಲಾಭವನ್ನು ಒದಗಿಸುತ್ತವೆ ಎಂಬುದನ್ನು ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಸೀಬೆಹಣ್ಣು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ
ಸಿಹಿಯಾಗಿರದ ಅಥವಾ ಸಕ್ಕರೆ ಪ್ರಮಾಣ ಕಡಿಮೆ ಇರುವ ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಬಹುದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳಿಗೆ ಸೀಬೆಹಣ್ಣು ತುಂಬಾ ಲಾಭಕಾರಿಯಾಗಿದೆ. ಅನೇಕ ಜನರು ಸೀಬೆಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನುತ್ತಾರೆ ಮತ್ತು ಕೆಲವರು ಸಿಪ್ಪೆ ಇಲ್ಲದೆಯೇ ಸೇವಿಸುತ್ತಾರೆ. ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ರಿಸರ್ಚ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಮಧುಮೇಹ ರೋಗಿಗಳು ಸಿಪ್ಪೆ ಸಹಿತ ಸೀಬೆ ಹಣ್ಣನ್ನು ತಿಂದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.


ಇದು ದೇಹದಲ್ಲಿ ಇನ್ಸುಲಿನ್ ಸ್ರವಿಕೆಯನ್ನು ಉತ್ತೇಜಿಸುತ್ತದೆ
ಮಧುಮೇಹ ರೋಗಿಗಳು ಪ್ರತಿದಿನ ಸೀಬೆಹಣ್ಣನ್ನು ತಿನ್ನಬೇಕು. ಇದು ದೇಹದಲ್ಲಿ ಗ್ಲೂಕೋಸ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಅತಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಪೇರಲ ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ನಿಧಾನವಾಗಿ ದೇಹದಿಂದ ಹೀರಲ್ಪಡುತ್ತದೆ, ಇದರಿಂದಾಗಿ ಗ್ಲೂಕೋಸ್ ಮಟ್ಟದಲ್ಲಿನ ಹೆಚ್ಚಳ ವೇಗವಾಗಿ ಹೆಚ್ಚಾಗುವುದಿಲ್ಲ.


ಇದನ್ನೂ ಓದಿ-Coconut Chutney: ಬಿಪಿ-ಶುಗರ್-ಬೊಜ್ಜು ನಿಯಂತ್ರಣದ ಜೊತೆಗೆ ಹಲವು ಸಮಸ್ಯೆಗಳ ನಿವಾರಣೆಗೆ ರಾಮಬಾಣ ಕೊಬ್ಬರಿ ಚಟ್ನಿ


ಇನ್ನೊಂದೆಡೆ ಈ ಹಣ್ಣಿನ ಗಿಡದ ಎಲೆಗಳ ಚಹಾ ಸೇವನೆಯೂ ಕೂಡ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ತಯಾರಿಸುವ ವಿಧಾನವು ಕೂಡ ತುಂಬಾ ಸುಲಭವಾಗಿದೆ. 7-8 ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ತೊಳೆದು ನೀರಿನಲ್ಲಿ ನೆನೆಹಾಕಿ. ನಂತರ ನೀರಿನಲ್ಲಿ ಕುದಿಸಿ, ಈ ಎಲೆಗಳು ಸರಿಯಾಗಿ ಬೇಯಿಸಿಯಾದ ಮೇಲೆ, ಜೇನುತುಪ್ಪವನ್ನು ಸೇರಿಸಿ, ಮಿಶ್ರಣ ಮಾಡಿ ನಂತರ ಕುಡಿಯಿರಿ.


ಇದನ್ನೂ ಓದಿ-Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.